ಬಂಟ ಸಂಘ ಅಂದ್ರೆ ಅಲ್ಲಿ ಸಂಪ್ರದಾಯಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ.ಅದೇ ರೀತಿ ಇತ್ತೀಚೆಗೆ ರಚನೆಗೊಂಡ ಬಹರೈನ್ ಬಂಟ ಸಮಿತಿಯ 2020ರ ಮೊದಲ ಶುಭ ಕಾರ್ಯ ಜರುಗಿದ್ದು ಯಶಸ್ವಿಯಾಗಿದೆ.ಬಹರೈನ್ ಬಂಟ ಸಂಘದ ವತಿಯಿಂದ ಜನವರಿ 24 ರ ಮುಸ್ಸಂಜೆಯ ಶುಭ ಗಳಿಗೆಯಲ್ಲಿ ಸತ್ಯನಾರಾರಣ ಪೂಜೆ ಮತ್ತು ದುರ್ಗಾಪೂಜೆ ಬಹಳ ವಿಜೃಂಭಣೆಯಿಂದ ನಡೆದಿದೆ.
ಬಹರೈನ್‍ನ ಶ್ರೀ ಕೃಷ್ಣಮಂದಿರದಲ್ಲಿ ಪೂಜೆ ಜರುಗಿದ್ದು;ವೇದಮೂರ್ತಿ ನಯನ ಕೃಷ್ಣ ಭಟ್ ಹಾಗೂ ವೇದಮೂರ್ತಿ ಅರುಣ್‍ಶಂಕರ್ ಭಟ್ ಪೌರೋಹಿತ್ಯದಲ್ಲಿ ಶಾಸ್ತ್ರೋಕ್ತವಾಗಿ ಪೂಜೆ ಪುನಸ್ಕಾರಗಳು ಸಂಪನ್ನಗೊಂಡಿದ್ದು; ಬಂಟ ಸಮುದಾಯದ ಸದಸ್ಯರು ಸೇರಿದಂತೆ ಬಹರೈನ್‍ನಲ್ಲಿ ನೆಲೆನಿಂತ ಹಿಂದೂ ಧರ್ಮದ ಸುಮಾರು 1000ಕ್ಕೂ ಹೆಚ್ಚು ಮಂದಿ ಈ ಪೂಜೆಯಲ್ಲಿ ಭಾಗಿಯಾಗಿ ಶ್ರೀ ದೇವರ ಕೃಪೆಗೆ ಪಾತ್ರರಾಗಿದ್ದಾರೆ. ಅಂದಹಾಗೆ 2020 ರ ಬಹರೈನ್ ಬಂಟ ಸಮಿತಿಯ ಮೊಟ್ಟ ಮೊದಲ ಕಾರ್ಯಕ್ರಮದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು ಅಷ್ಟ ರೀತಿಯ ಕಾರ್ಯಕ್ರಮ..
ಬಂಟ ಸುಮದಾಯದ ಮಕ್ಕಳು , ಬಂಟೇತರ ಮಕ್ಕಳು , ಹಿರಿಯರಿಂದ ಭಜನೆ, ಭಜನೆ ಕುಣಿತ, ಸಂಗೀತಸೇವೆ, ಯಕ್ಷಗಾನ, ಭರತನಾಟ್ಯ, ಚಿಂಗಾರಿ ಮೇಳ ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮ ಬಹಳ ಅರ್ಥಪೂರ್ಣ ಹಾಗೂ ಉಳಿದ ಸಮುದಾಯದವರಿಗೂ ಮಾದರಿಯಾಗುವಂತೆ ಮೂಡಿಬಂದಿದೆ. ಇನ್ನು ಈ ಸಂಭ್ರಮದಲ್ಲಿ ಈ ಬಾರಿಯ ಬಹರೈನ್ ಬಂಟ ಸಮಿತಿಯ ಸಮಿತಿಯ ಮುಖ್ಯಸ್ಥರು , ಭಕ್ತಾಧಿಗಳು ಭಾಗವಹಿಸಿದ್ದು ಅನ್ನಪ್ರಸಾದ ಸ್ವೀಕರಿಸಿ ಸಂತೃಪ್ತರಾಗಿದ್ದಾರೆ.