vijaya times advertisements
Visit Channel

ರಚಿತಾರಾಮ್ – ನಿಖಿಲ್ ಮದುವೆ ನಿಶ್ಚಯ ಫಿಕ್ಸ್ ?

images-12

ಸ್ಯಾಂಡಲ್‍ವುಡ್‍ನ ಲಕ್ಕಿ ಗರ್ಲ್ ರಚಿತಾ ರಾಮ್ ನಟಿಸಿದ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ . ಮಾತ್ರವಲ್ಲ ಈ ನಾಯಕಿ ಗುಳಿ ಕೆನ್ನೆಯಿಂದಲೇ ಅದೆಷ್ಟೋ ಪಡ್ಡೆ ಹೈಕಳ ಮನಸ್ಸನ್ನು ಕದ್ದಿರೋ ಬ್ಯೂಟಿ ಈಕೆ.. ಹೊಸ ನಾಯಕರ ಪಾಲಿನ ಅದೃಷ್ಟ ಲಕ್ಷ್ಮೀ ಈಕೆ.. ಒಂದ್ಕಾಲದಲ್ಲಿ ಸ್ಯಾಂಡಲ್‍ವುಡ್‍ನನ್ನು ಆಳುತ್ತಿದ್ದ ರಮ್ಯಾರಷ್ಟೆ ಬೆಳೆದು ನಿಂತಿದ್ದಾರೆ ನಟಿ ರಚಿತಾ ರಾಮ್ .
ಇದೀಗ ನಿಖಿಲ್ ಜೊತೆ ರಚಿತಾ ಮದುವೆ ಫಿಕ್ಸ್ ಆಗಿದೆ .. ಇವರಿಬ್ಬರ ನಡುವೆ ಲವ್ವಿ ಡವ್ವಿ ನಡೆಯುತ್ತಿದೆ ಅಂತೆಲ್ಲಾ ಗುಲ್ಲೆಬ್ಬಿದ್ದು ಇದಕ್ಕೆ ಸ್ಪಷ್ಟನೆಯನ್ನು ರಚಿತಾ ನೀಡಿದ್ದಾರೆ . ಇನ್ನು ಈ ಗಾಳಿ ಸುದ್ದಿಗೆ ಕಾರಣ ಮೊನ್ನೆ ಮೊನ್ನೆಯಷ್ಟೆ ರಚಿತಾ ಅಕ್ಕನ ಮದುವೆ ನಡೆದಿದ್ದು , ಮದುವೆಯಲ್ಲಿ ನಿಖಿಲ್ ಕುಮಾರ ಸ್ವಾಮಿ ಪಾಲ್ಗೊಂಡಿದ್ದರು.ಅದರ ಬೆನ್ನಲೇ ನಿಖಿಲ್ ಫ್ಯಾಮಿಲ್ ಪೂಜೆ ಶೃಂಗೇರಿಯಲ್ಲಿ ನಡೆದಿದ್ದು , ಅದರಲ್ಲಿ ರಚಿತಾ ಭಾಗಿಯಾಗಿದ್ದರು ..ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು , ಹಲವು ಊಹಪೋಹಗಳು ಹರಿದಾಡುತ್ತಿತ್ತು..

ಇನ್ನು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ ರಚಿತಾ ರಾಮ್ ,” ಎಲ್ಲರಿಗೂ ನಮಸ್ಕಾರ ನಾನು ನಿಮ್ಮ ರಚಿತಾ ರಾಮ್ . ಈ ನಡುವ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವದಂತಿಗಳ ಬಗ್ಗೆ ಸ್ಪಷ್ಟನೆಕೊಡಲು ಬಯಸುತ್ತೇನೆ … ನನ್ನ ಸಿನಿಮಾಗಳ ಕುರಿತಾಗಲಿ, ವೈಯಕ್ತಿಕ ವಿಷಯವಾಗಲಿ ನನ್ನ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಿದ್ರೆ ಮಾತ್ರ ಅದು ಸತ್ಯವಾಗಿರುತ್ತದೆ .. ಮನರಂಜನೆಗಾಗಿ ಸುಳ್ಳು ಪೋಸ್ಟ್‍ಗಳನ್ನು ಸೃಷ್ಟಿಸಿದ್ರೆ ಸಂಬಂಧಪಟ್ಟವರಿಗೆ ಬೇಸರ ಉಂಟುಮಾಡುತ್ತದೆ.ಇದನ್ನು ಅರ್ಥ ಮಾಡಿಕೊಂಡರೆ ಉತ್ತಮ. ಇನ್ನೊಂದು ಮಾತು ನನಗೆ ಮದುವೆ ನಿಶ್ಚಯವಾಗಿಲ್ಲ . ಅಂತಹ ಶುಭ ಸುದ್ದಿಯಾದ್ರೆ ಎಲ್ಲರ ಸಮ್ಮುಖದಲ್ಲಿ ನಡೆಯುತ್ತದೆ. ಆಗ ನಾನೇ ಸ್ವತ: ತಿಳಿಸುತ್ತೇನೆ ಎಂದಿದ್ದಾರೆ”

Latest News

ರಾಜ್ಯ

ಮುಸ್ಲಿಂ ವಿದ್ಯಾರ್ಥಿಯನ್ನು ‘ಭಯೋತ್ಪಾದಕ’ ಎಂದು ಕರೆದಿದ್ದಕ್ಕಾಗಿ ಪ್ರಾಧ್ಯಾಪಕ ಅಮಾನತು!

ನಾವು ಸ್ವಯಂಪ್ರೇರಿತ ಕ್ರಮವನ್ನು ತೆಗೆದುಕೊಂಡಿದ್ದೇವೆ. ವಾಸ್ತವವಾಗಿ ಯಾರೂ ಇಲ್ಲದ ಕಾರಣ ವಿದ್ಯಾರ್ಥಿಯು ನಿಜವಾಗಿಯೂ ಆತಂಕಕ್ಕೊಳಗಾಗಿದ್ದಾನೆ.

ರಾಜಕೀಯ

ನೀವು ಬಡವರು ಎಂದು ಹೇಳಿಕೊಳ್ಳುತ್ತೀರಿ, ಆದ್ರೆ ನಾನು ಅಸ್ಪೃಶ್ಯರಲ್ಲಿ ಒಬ್ಬ : ಮಲ್ಲಿಕಾರ್ಜುನ ಖರ್ಗೆ

ನಾನು ಅಸ್ಪೃಶ್ಯರಲ್ಲಿ ಒಬ್ಬ. ಜನರು ನಿಮ್ಮ ಚಹಾವನ್ನು ಕುಡಿಯುತ್ತಿದ್ದರು,  ಆದರೆ ಯಾರೂ ನನ್ನ ಚಹಾವನ್ನು ಸೇವಿಸಲಿಲ್ಲ ಎಂದು ಖರ್ಗೆ ಅವರು ಪರೋಕ್ಷವಾಗಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದರು.  

ರಾಜಕೀಯ

ಒಕ್ಕಲಿಗರಿಗೆ 4%-12% ಮೀಸಲಾತಿ ; ಇದು ಉತ್ತಮ ಬೇಡಿಕೆಯಾಗಿದೆ : ನಟ ಚೇತನ್

ಈ ಕುರಿತು ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಕರ್ನಾಟಕದ ಒಕ್ಕಲಿಗ ಲಾಬಿಗಳು ಒಕ್ಕಲಿಗರಿಗೆ 4% – 12% ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದಾರೆ.