200 ವರ್ಷಗಳ ಹಿಂದೆ ರಚನೆಯಾದ ವಾಷಿಂಗ್ಟನ್ ಡಿ.ಸಿಗೆ ರಾಜ್ಯದ ಸ್ಥಾನಮಾನ ನೀಡುವ ಐತಿಹಾಸಿಕ ಮಸೂದೆಗೆ ಅಮೆರಿಕ ಸರ್ಕಾರದ ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ ಸಹಿ ಹಾಕಿ ಅಂಕಿತ ನೀಡಿದೆ. ವಾಷಿಂಗ್ಟನ್ ಡಿ.ಸಿಗೆ ರಾಜ್ಯದ ಸ್ಥಾನಮಾನ ನೀಡುವ ಮಸೂದೆ ಪರ ಡೆಮಾಕ್ರೆಟ್ ನೇತೃತ್ವದ ಹೌಸ್ ಆಫ್ ರೆಪ್ರೆಸೆಂಟೇಟಿವ್‍ನಲ್ಲಿ 232 ರಿಂದ 180ರ ಅಂತರದಲ್ಲಿ ಮತ ಬಿದ್ದಿರುವುದಾಗಿ ಅಮೆರಿಕದ ಕ್ಸಿನ್ಹುವಾ ಸಂಸ್ಥೆ ವರದಿ ಮಾಡಿದೆ.
ಈ ಮಸೂದೆಯಿಂದ ಅಮೆರಿಕ ದೇಶದ ರಾಜಧಾನಿ ನಗರ ಚಿಕ್ಕದಾಗುತ್ತದೆ. ಶ್ವೇತಭವನ,ಕ್ಯಾಪಿಟಲ್ ಬಿಲ್ಡಿಂಗ್, ಸುಪ್ರೀಂ ಕೋರ್ಟ್ ಮತ್ತು ಇತರ ಫೆಡರಲ್ ಕಟ್ಟಡಗಳನ್ನು ಹೊಂದಿರುವ ವಾಷಿಂಗ್ಟನ್ ಡಿ.ಸಿಯು ಭವ್ಯ ಪರಂಪರೆ ರಾಜ್ಯದ ಸ್ಥಾನಮಾನದಿಂದ ಕಳೆದುಹೋಗುತ್ತದೆ ಎಂದು ಮಸೂದೆ ವಿರುದ್ಧ ಮತ ಹಾಕಿರುವ ಎಲೀನರ್ ಹೋಮ್ಸ್ ನಾರ್ಟನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ಹೌಸ್ ಆಫ್ ರೆಪ್ರೆಸೆಂಟೇಟಿವ್‍ನಲ್ಲಿ ಮಿನ್ನೆಸೊಟಾದ ಡೆಮಾಕ್ರಟ್ ಕೊಲ್ಲಿನ್ ಪೀಟರ್ಸನ್ ಮಸೂದೆ ವಿರುದ್ಧ ಮತ ಹಾಕಿದ್ದಾರೆ. ಹೌಸ್ ಆಫ್ ರಿಪಬ್ಲಿಕ್‍ನಲ್ಲಿ ಎಲ್ಲಾ ಸದಸ್ಯರು ಈ ಮಸೂದೆಯನ್ನು ವಿರೋಧಿಸಿದ್ದಾರೆ. ಸ್ವತಂತ್ರ ಅಭ್ಯರ್ಥಿ ಮಿಚಿಗನ್ ನ ಜಸ್ಟಿಸ್ ಅಮಶ್ ಕೂಡ ಈ ಮಸೂದೆ ವಿರುದ್ಧವಾಗಿ ಮತ ಹಾಕಿದ್ದಾರೆ.
ಇನ್ನು ಮುಂದೆ ವಾಷಿಂಗ್ಟನ್ ಎಂದು ಕರೆಯುವ ಇದು ದೇಶದ 51ನೇ ರಾಜ್ಯವಾಗಲಿದೆ. ರಾಜ್ಯ ಸ್ಥಾನಮಾನ ಸಿಕ್ಕದರೆ ಇಲ್ಲಿ ಇಬ್ಬರು ಸೆನೆಟರ್ಗಳು ಮತ್ತು ಸದನದ ಪ್ರತಿನಿಧಿಗಳು ಮತಹಾಕುವ ಸದಸ್ಯರಾಗುತ್ತಾರೆ. ಜತೆಗೆ ಅಮೆರಿಕ ಸೆನೆಟ್ ಇದನ್ನು ಅಂಗೀಕರಿಸುವ ಸಾಧ್ಯತೆ ಇಲ್ಲ. ಮಸೂದೆ ನಮ್ಮ ಬಳಿ ಬಂದರೆ ತಿರಸ್ಕರಿಸುತ್ತೇನೆ. ನ್ಯೂಯಾರ್ಕ್ ಪೋಸ್ಟ್‍ಗೆ ನೀಡಿದ್ದ ಸಂದರ್ಶನದಲ್ಲಿ ವಾಷಿಂಗ್ಟನ್ ಡಿ.ಸಿ ಯಾವತ್ತೀಗೂ ರಾಜ್ಯವಾಗಲು ಸಾಧ್ಯವಿಲ್ಲ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ರಿಪಬ್ಲಿಕ್ ಸದಸ್ಯರು ಡೆಮಾಕ್ರಟಿಕ್ ಸದಸ್ಯರು ಅಧಿಕಾರಕ್ಕಾಗಿ ನಡೆಸುತ್ತಿರುವ ಕುತಂತ್ರವಿದು ಎಂದು ಆರೋಪಿಸಿದ್ದಾರೆ. ಈ ಮಸೂದೆಯಿಂದ ಅಮೆರಿಕ ರಾಜಧಾನಿ ನಗರದ ಜನತೆಗೆ ಇಂದರಿಂದ ಸಮಸ್ಯೆಯಾಗಲಿದೆ ಎಂದು ಸಹ ಹೇಳಿದ್ದಾರೆ.