ಇಂದು ಮೈಸೂರಿನಲ್ಲಿ ಒಂಟಿ ಸಲಗ ದಾಳಿಮಾಡಿದೆ. ವೀರನ ಹೊಸಹಳ್ಳಿ ನಾಗಪುರ ಹಾಡಿ ಬಳಿ ಆನೆ ದಾಳಿ ನಡೆಸಿದ್ದು ವಾಹನ ಜಖಂ ಆಗಿದೆ. ಇನ್ನು ಸುತ್ತಮತ್ತಲಿನ ಆಹಾರ ಹುಡುಕಲು ಬಂದ ಒಂಟಿ ಸಲಗ ಬೆಳೆಗೆ ದಾಳಿ ಮಾಡಿದೆ. ಸ್ಥಳೀಯರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ರವಾನಿಸಿದ್ದಾರೆ.
ತದನಂತರ ಅರಣ್ಯ ಇಲಾಖೆ ಸಿಬ್ಬಂದಿಆನೆಯನ್ನು ಓಡಿಸಲು ಕಾರ್ಯಚರಣೆ ನಡೆಸಿದ್ದು ; ಕ್ಷಿಪ್ರ ಕಾರ್ಯಪಡೆ ವಾಹನದ ಮೇಲೆ ದಾಳಿ ಮಾಡಿದೆ .ಇನ್ನು ಈ ಸಂದರ್ಭದಲ್ಲಿ ವಾಹನ ಚಾಲಕ ರಿವರ್ಸ್ ಗೇರ್‍ನಲ್ಲಿ ವೇಗವಾಗಿ ವಾಹನ ಚಲಾಯಿಸಿದ್ದು ; ಆನೆಬೆನ್ನಟ್ಟಿ ವಾಹನದ ಗ್ಲಾಸ್ ಪುಡಿಪುಡಿ ಮಾಡಿ ಅಲ್ಲಿಂದ ಕಾಡು ಸೇರಿಕೊಂಡಿದೆ.. ಇನ್ನು ಈ ಘಟನೆಯಲ್ಲಿ ಯಾರಿಗೂ ಯಾವುದೇ ತೊಂದರೆಯಾಗದ ನಿಟ್ಟಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ.