ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ನಡೆದ ಗಲಭೆಗೆ ಸಂಬಂಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಅಕಾರಿಗಳು ಎರಡನೆ ಬಾರಿ ಬಿಬಿಎಂಪಿ ಮಾಜಿ ಸದಸ್ಯ, ಮಾಜಿ ಮೇಯರ್ ಸಂಪತ್‍ರಾಜ್ ಅವರ ಆಪ್ತ ಜಾಕಿರ್‍ಗೆ ನೋಟಿಸ್ ನೀಡಿದ್ದರೂ ಈವರಗೆ ವಿಚಾರಣೆಗೆ ಬಂದಿಲ್ಲ ಎಂಬುದಾಗಿ ಸಿಸಿಬಿ ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ.
ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಸಂಬಂಧ ಬಂಧಿಸಲಾಗಿರುವ ಕೆಲವು ಆರೋಪಿಗಳ ಜತೆ ಜಾಕಿರ್ ಸಂಪರ್ಕವಿದೆ ಎಂದು ತಿಳಿದುಬಂದಿದೆ. ಘಟನೆ ದಿನ ಜಾಕಿರ್ ಮತ್ತು ಸಂಪತ್‍ರಾಜ್ ಅವರು ಪರಸ್ಪರ ಮೊಬೈಲ್ ಮೂಲಕ ನಿರಂತರ ಸಂಪರ್ಕದಲ್ಲಿದ್ದರು ಎಂದು ಸಿಸಿಬಿ ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.