New Delhi : ಭಾರತೀಯ ವೈದ್ಯಕೀಯ (Indian Medicine) ವಿಜ್ಞಾನ ಸಂಶೋಧಾನ ಸಂಸ್ಥೆ (ICMR) ದೇಶದ ನಾಗರಿಕರು ಆರೋಗ್ಯಯುತ ಜೀವನಕ್ಕಾಗಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇದರ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಯುವಜನತೆ (youth) ಹೆಚ್ಚು ಸೇವಿಸುತ್ತಿರುವ ಪ್ರೊಟೀನ್ ಸಪ್ಲಿಮೆಂಟ್ನಿಂದ (protein supplement) ಆರೋಗ್ಯಕ್ಕೆ ಅಪಾಯ ಗ್ಯಾರಂಟಿ ಎಂದು ಭಾರತೀಯ ವೈದ್ಯಕೀಯ ವಿಜ್ಞಾನ ಸಂಶೋಧಾನ ಸಂಸ್ಥೆ ಹೇಳಿದೆ.
ಇನ್ನು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ (ICMR) ಸಂಸ್ಥೆಯು, ದೇಹಕ್ಕೆ ಪೋಷಕಾಂಶಗಳನ್ನು (nutrients) ಪೂರೈಸಲು ಹಾಗೂ ಸಾಂಕ್ರಾಮಿಕವಲ್ಲದ ರೋಗ (non-communicable disease) ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ದೇಹದ ಮಾಂಸಖಂಡಗಳನ್ನು ಸದೃಢಗೊಳಿಸುವ ಪ್ರೊಟೀನ್ (protein) ಸಪ್ಲಿಮೆಂಟ್ ಆಹಾರಗಳನ್ನು ತ್ಯಜಿಸಬೇಕು. ಅದೇ ರೀತಿ ಉಪ್ಪು, ಸಕ್ಕರೆ (Salt, sugar) , ಸಂಸ್ಕರಿಸಿದ ಆಹಾರಗಳ ಸೇವನೆ ಹಿತಮಿತವಾಗಿರನಬೇಕೆಂದು ತಿಳಿಸಲಾಗಿದೆ.
ICMR – NIN ನಿರ್ದೇಶಕಿ ಡಾ. ಹೇಮಲತಾ ಆರ್ (Dr. Hemalatha R) ನೇತೃತ್ವದಲ್ಲಿ ವೈಜ್ಞಾನಿಕ ಅಧ್ಯಯನ ನಡೆಸಿದ ಸಂಶೋಧನಾ (Research) ತಂಡ, ದೇಶದ ನಾಗರಿಕರಿಗೆ ಆರೋಗ್ಯ ಕಾಪಾಡಿಕೊಳ್ಳಲು ಮಾರ್ಗಸೂಚಿ ರೂಪಿಸಿದೆ. ಅದರ ಪ್ರಕಾರ, ಹೆಚ್ಚಿನ ಪ್ರಮಾಣದ ಪ್ರೋಟೀನ್ ಪೌಡರ್ ಸೇವನೆ ದೇಹದ ಮೂಳೆಗಳಿಗೆ ಹಾನಿ ಉಂಟು ಮಾಡುತ್ತದೆ. ದೇಹಕ್ಕೆ ಸೇವಿಸುವ ಸಕ್ಕರೆ ಪ್ರಮಾಣವು ಶೇಕಡಾ 5ಕ್ಕಿಂತ ಕಡಿಮೆ ಇರಬೇಕು. ಸಮತೋಲಿತ ಆಹಾರದಲ್ಲಿ ಶೇಕಡಾ 45 ಕ್ಕಿಂತ ಹೆಚ್ಚು ಕ್ಯಾಲರಿ ಇರಬಾರದು. ದ್ವಿದಳ ಧಾನ್ಯಗಳು ಮತ್ತು ಮಾಂಸಗಳ ಮೂಲಕ ದೇಹಕ್ಕೆ ಶೇಕಡಾ 15ರಷ್ಟು ಕ್ಯಾಲರಿ (calorie) ಒದಗಿಸಬೇಕು. ಕೊಬ್ಬಿನ ಪ್ರಮಾಣ (amount of fat) ಶೇಕಡಾ 30ರಷ್ಟು ಮೀರದಂತೆ ನೋಡಿಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ಸೂಚನೆ ನೀಡಲಾಗಿದೆ.
ಮಾಂಸದ ಬೆಲೆ ಹೆಚ್ಚಳದಿಂದ ಜನರು ಕೇವಲ ಧಾನ್ಯಗಳ ಮೊರೆ ಹೋಗಿದ್ದಾರೆ. ಹೀಗಾಗಿ ಭಾರತೀಯರಲ್ಲಿ (Indians) ಪೋಷಕಾಂಶಗಳ ಕೊರತೆ ಕಂಡುಬರುತ್ತಿದೆ ಎಂದೂ ICMR ಸಂಶೊಧನಾ ತಂಡ ಹೇಳಿದೆ. ಹೀಗಾಗಿ ಜನರು ಪೋಷಕಾಂಶಗಳನ್ನು (nutrients) ಹೆಚ್ಚಾಗಿ ಸೇವಿಸಬೇಕೆಂದು ಸಲಹೆ ನೀಡಿದೆ.