ಶುಕ್ರವಾರ ವಿರೋಧ ಪಕ್ಷದ ನಿಯೋಗ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ . ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ಜರುಗಿದ್ದು ಹಲವು ವಿಷಯಗಳ ಬಗ್ಗೆ ಚರ್ಚೆ ನಡೆದಿದೆ.ಇದರ ಜೊತೆ ವಿರೋಧ ಪಕ್ಷದ ನಾಯಕರು ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದೆ.ಜೊತೆ ಇದಕ್ಕೆ ಸಂಬಂಧಪಟ್ಟಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯಮಂತ್ರಿಗೆ ಟ್ವೀಟ್ ಕೂಡ ಮಾಡಿದ್ದಾರೆ.
ಇನ್ನು ಸಭೆಯಲ್ಲಿ ಕರೋನಾ ಪರಿಸ್ಥಿತಿ ಬಗ್ಗೆ ಅವಲೋಕನ ಮಾಡಲಾಗಿದ್ದು ಯಾವ ಕ್ರಮಗಳನ್ನೆಲ್ಲಾ ಕೈಗೊಳ್ಳಬೇಕೆನ್ನುದರ ಬಗ್ಗೆ ಸಿ.ಎಂ ಬಿಎಸ್‍ವೈಯವರಿಗೆ ಹಕ್ಕೋತ್ತಾಯ ಪತ್ರಗಳನ್ನು ಸಲ್ಲಿಸಲಾಗಿದೆ ಈ ಪತ್ರದಲ್ಲಿ ಏನೆಲ್ಲಾ ಉಲ್ಲೇಖಿಸಲಾಗಿದೆ ಅನ್ನೋದನ್ನು ಗಮನಿಸೋದಾದ್ರೆ ಪ್ರಮುಖವಾಗಿ ಕೊರೋನಾ ಮಾರಮಾರಿಯನ್ನು ಹೊಡೆದೋಡಿಸಲು ಹಾಗೂ ಲಾಕ್‍ಡೌನ್‍ನಿಂದ ತೊಂದರೆಗೊಳಗಾದ ಜನರ ನೆರವಿಗಾಗಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಕನಿಷ್ಟ 50 ಸಾವಿರ ಕೋಟಿಯ ಪ್ಯಾಕೇಜ್‍ನ್ನು ವಿಶೇಷವಾಗಿ ಘೋಷಣೆ ಮಾಡಬೇಕು.ಇದರ ಜೊತೆ ರಾಜ್ಯದಲ್ಲಿ ರೈತರು ಬೆಳೆದಿರುವ ಹೂವು ಹಣ್ಣು ತರಕಾರಿಗಳನ್ನು ವ್ಯಾಪಾರಸ್ಥರು ತೆಗೆದುಕೊಳ್ಳದಿದ್ದಾಗ ಸರ್ಕಾರವೇ ಖರೀದಿಸಬೇಕು ಜೊತೆಗೆ ರೈತರಿಗೆ ಸಾರಿಗೆ ವ್ಯವಸ್ಥೆ ಮತ್ತು ಮಾರುಕಟ್ಟೆಯನ್ನು ಒದಗಿಸಿಕೊಡಬೇಕು.
ಸರ್ಕಾರ ಈ ಕೂಡಲೇ ಬರಪೀಡಿತ ತಾಲ್ಲೂಕುಗಳಿಗೆ ನೀಡಬೇಕಾದ ಸವಲತ್ತನ್ನು ನೀಡಬೇಕು.ತೊಗರಿಬೇಳೆ ಕಬ್ಬಿನ ಬಾಕಿ ಹಣವನ್ನು ಈ ಕೂಡಲೇ ಪಾವತಿಸುವಂತೆ ಆದೇಶ ಮಾಡಬೇಕು.ಈ ಹೀಗೆ ರೈತರಿಗೆ ಅನುಕೂಲವಿರುವ ಹಲವು ವಿಷಯವನ್ನು ಹಕ್ಕೋತ್ತಾಯ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ .ಇನ್ನುಳಿದಂತೆ ರೆಎಲ್ಲ ಟಿವಿ ಮನೋರಂಜನಾ ಕ್ಷೇತ್ರದಲ್ಲಿರುವವರಿಗೂ ಕೊರೋನಾ ಸರಿ ಹೋಗುವವರೆಗೆ ಪ್ರತಿ ತಿಂಗಳು 10 ಸಾವಿರ ನೀಡಬೇಕೆಂದು ತಿಳಿಸಲಾಗಿದೆ.