ಮಂಗಳೂರಿನಲ್ಲಿ ದಿಟ್ಟ ಮಹಿಳೆ ಇದ್ದಾರೆ ಅನ್ನೋದಕ್ಕೆ ಇವರು ಸಾಕ್ಷಿ.. ತಮ್ಮ ಜೀವವನ್ನು ಲೆಕ್ಕಿಸದೆ ಒಂದು ಮುಗ್ಧ ಜೀವಿಯ ರಕ್ಷಣೆ ಮಾಡಿದ್ದಾರೆ ರಜನಿ.. ಈಗ ಮಂಗಳೂರು ಸುತ್ತಮುತ್ತ ಇವರದ್ದೇ ಗುಣಗಾನ.
ಹೌದು ಮಂಗಳೂರು ಬಲ್ಲಾಳ್‍ಬಾಗ್ ಮೈದಾನದ ಬಳಿ ಒಂದಲ್ಲ ಎರಡಲ್ಲ ಸುಮಾರು 30 ಅಡಿ ಆಳದ ಬಾವಿಗೆ ಇಳಿದು ಸಾಧನೆ ಮಾಡಿ ತೋರಿಸಿದ್ದಾರೆ ರಜನಿ. ಬುಧವಾರ ರಾತ್ರಿ ಶ್ವಾನಗಳು ಪರಸ್ಪರ ಕಚ್ಚಾಡುತ್ತಿದ್ದು ಅದರಲ್ಲಿ ಒಂದು ಶ್ವಾನ ಇದೇ 30 ಅಡಿ ಆಳದ ಬಾವಿಗೆ ಬಿದ್ದಿದೆ. ಗುರುವಾರ ಮೈದಾನಕ್ಕೆ ಕ್ರಿಕೇಟ್ ಆಡಲು ಹೋದವರಿಗೆ ಈ ವಿಷಯ ತಿಳಿದಿದ್ದು; ಸ್ಥಳೀಯರ ಗಮನಕ್ಕೆ ಈ ವಿಷಯವನ್ನು ಮುಟ್ಟಿಸಿದ್ದಾರೆ.ಕೂಡಲೇ ಸ್ಥಳಿಯರು ಸೇರಿ ನಾಯಿಯನ್ನು ಮೇಲೆತ್ತಲು ಹಗ್ಗ , ಟಯರ್‍ಗಳನ್ನ ಬಳಸಿದ್ರು ಅದು ವಿಫಲವಾಗಿದೆ . ಅದನ್ನು ಗಮನಿಸಿದ ರಜನಿ ಕೊನೆಗೆ ತಾನೇ ಬಾಯಿಕಡೆಗೆ ಧಾವಿಸಿ ಬಂದಿದ್ದಾರೆ. ನಾಯಿಯ ಚೀರಾಟ , ಪರಿಸ್ಥಿತಿಯನ್ನು ಗಮನಿಸಿದ ರಜನಿ; ಅಕ್ಕಪಕ್ಕದವರ ವಿರೋಧದ ನಡುವೆಯೂ ಬಾವಿಗಿಳಿದು ನಾಯಿಯನ್ನು ಮೇಲಕ್ಕೆ ತಂದಿದ್ದಾರೆ . ಇದೀಗ ಈ ವೀಡಿಯೋ ವೈರಲಾಗಿದ್ದು ರಜನಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.