ಶೆಡ್ ಹೊಟೇಲ್‍ನ ಬೆಣ್ಣೆ ದೋಸೆಗೆ ಮನಸೋತ ಶಿವಣ್ಣ

ಸರಳತೆಗೆ ಹೆಸರು ಮಾಡಿರುವ ನಟರ ಪೈಕಿ ಶಿವರಾಜ್ ಕುಮಾರ್ ಕೂಡ ಒಬ್ಬರು..ಶಿವಣ್ಣ ನಿನ್ನೆಯಷ್ಟೇ ಸ್ನೇಹಿತರೊಂದಿಗೆ ಮುತ್ತತ್ತಿ ಹಾಗೂ ಮಲೆ ಮಹದೇಶ್ವರ ದೇವಾಲಯಗಳಿಗೆ ಭೇಟಿ ನೀಡಿದ್ದರು. ಈ ನಡುವೆ ಹೊಟ್ಟೆ ಹಸಿವಾದಾಗ ಆಡಂಬರದ ಹೊಟೇಲ್‍ಗಳತ್ತ ಮುಖ ಮಾಡದೆ, ಮಂಡ್ಯದ ಹಲಗೂರಿನ ಬಾಬು ಅವರ ಶೆಡ್ ಹೊಟೇಲ್‍ನಲ್ಲಿ ದೋಸೆ ತಿಂದಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿರುವ ಶಿವಣ್ಣ,ನಾನು ಇಲ್ಲಿಗೆ ದೋಸೆ ತಿನ್ನಲು ಬರೋದು ಹೊಸದೇನಲ್ಲ. ಮನೆ ದೇವರಾದ ಮುತ್ತತ್ತಿ ರಾಯರ ಸನ್ನಿದಿಗೆ ಬರುವಾಗಲೆಲ್ಲಾ ಇಲ್ಲಿಯ ಬೆಣ್ಣೆ ದೋಸೆ ಸವಿಯುತ್ತೇನೆ ಅಂದಿದ್ದಾರೆ…ಈ ಬಾರಿ ಶಿವಣ್ಣನಿಗೆ ನಿರ್ದೇಶಕ ಗುರುದತ್ ಸಹ ಸಾಥ್ ನೀಡಿದ್ದಾರೆ. ಸ್ಟಾರ್ ನಟನೊಬ್ಬ ಇಂತಹ ಸರಳತೆ ಮೆರೆಯುತ್ತಿರುವುದು ಎಲ್ಲರ ಮೆಚಚುಗೆ ಗಳಿಸಿದೆ.

Latest News

ಮಾಹಿತಿ

ITR ಸಲ್ಲಿಕೆ ಗಡುವು ಜುಲೈ 31 ಅಂತ್ಯ ; ದಂಡ ಶುಲ್ಕವಿಲ್ಲದೆ ಯಾರೆಲ್ಲಾ ITR ಸಲ್ಲಿಸಬಹುದು ಗೊತ್ತಾ?

ಗಡುವು ಮುಗಿದರೂ ಯಾರೆಲ್ಲ ದಂಡ ಶುಲ್ಕವಿಲ್ಲದೆ ಐಟಿಆರ್‌ ಸಲ್ಲಿಸಬಹುದು, ಇದಕ್ಕೆ ಸಂಬಂಧಿಸಿದಂತೆ ನಿಯಮ ಏನು ಹೇಳುತ್ತದೆ ಎನ್ನುವ ವಿವರ ಇಲ್ಲಿದೆ. ಮುಂದೆ ಓದಿ,

ದೇಶ-ವಿದೇಶ

“ನನ್ನ ಮಕ್ಕಳಿಗೆ ಆಹಾರ ನೀಡಬೇಕೇ? ಅಥವಾ ಅವರನ್ನು ಕೊಲ್ಲಬೇಕೇ?”: ಬೆಲೆ ಏರಿಕೆ ಬಗ್ಗೆ ಪಾಕ್ ಮಹಿಳೆ ಆಕ್ರೋಶ!

ನನ್ನ ಮಕ್ಕಳಿಗೆ ಹಾಲು ಮತ್ತು ಔಷಧಿಗಳನ್ನು ಖರೀದಿಸುವುದು, ನನ್ನ ಮಕ್ಕಳಿಗೆ ಆಹಾರ ನೀಡುವುದು ಯಾವುದು ನನ್ನಿಂದ ಸಾಧ್ಯವಾಗುತ್ತಿಲ್ಲ.

ಮಾಹಿತಿ

ಬುದ್ದಿವಂತರು ಜಗಳವನ್ನು ಹೇಗೆ ತಪ್ಪಿಸುತ್ತಾರೆ ಗೊತ್ತೇ? ; ಈ ಅಚ್ಚರಿ ಮಾಹಿತಿ ಓದಿ

ಕೆಟ್ಟ ವಾಗ್ವಾದವನ್ನು ತಡೆಯುವುದು ಹೇಗೆ ಮತ್ತು ಅದನ್ನು ಸರಿಯಾಗಿ ರೀತಿಯಲ್ಲಿ ಹೇಗೆ ನಿಭಾಯಿಸಬಹುದು ಎನ್ನುವುದಕ್ಕಾಗಿ ಕೆಲವು ಉಪಾಯಗಳು ಇಲ್ಲಿವೆ ನೋಡಿ.

ರಾಜಕೀಯ

ನಿತೀಶ್‌ ಕುಮಾರ್‌ ಪ್ರಧಾನಿಯಾಗುವ ಭ್ರಮೆಯಲ್ಲಿದ್ದಾರೆ, ಅದಕ್ಕಾಗಿ ವಿಪಕ್ಷಗಳ ಕೂಟ ಸೇರಿದ್ದಾರೆ : ಬಿಜೆಪಿ

ಇದು ‘ಆಯಾ ರಾಮ್, ಗಯಾ ರಾಮ್ʼ ಕಾಯಿಲೆಗೆ ಉದಾಹರಣೆ. ಹಡಗು ಜಿಗಿದು ದಾಖಲೆ ನಿರ್ಮಿಸಿದ್ದಾರೆ. ಅವರು ಉನ್ನತ ಕುರ್ಚಿಗೆ ಹಾತೊರೆಯುತ್ತಿದ್ದಾರೆ.