ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಗಳಿಗಿಂದು ಸಂತಸದ ದಿನ..ವಿಷ್ಣುದಾದ ನಮ್ಮೆಲ್ಲರನ್ನೂ ಅಗಲಿ ವರ್ಷಗಳೇ ಕಳೆದರೂ ಅವರ ನೆನಪು ಮಾತ್ರ ಇನ್ನೂ ಹಸಿರಾಗೇ ಉಳಿದಿದೆ..ಅದ್ರಲ್ಲೂ ಸೆಪ್ಟೆಂಬರ್ 18 ವಿಷ್ಣುವರ್ಧರ ಹುಟ್ಟುಹಬ್ಬದ ದಿನ ಬಂದಾಗಲಂತೂ ಅವರ ವ್ಯಕ್ತಿತ್ವ,ಅಭಿನಯದ ಸಿನಿಮಾಗಳು ಎಲ್ಲರ ಕಣ್ಣಮುಂದೆ ಬಂದುಬಿಡುತ್ತದೆ. ಇಂತಹ ಮೇರು ನಟ ಇಂದು ನಮ್ಮೊಂದಿಗೆ ಇರುತ್ತಿದ್ದರೆ ಅವರಿಗೆ 69 ವಯಸ್ಸಾಗಿರುತ್ತಿತ್ತು. ಅಭಿಮಾನಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ಹುಟ್ಟಹಬ್ಬದ ಆಚರಣೆಯನ್ನೂ ಮಾಡಿಕೊಳ್ಳುತ್ತಿದ್ದರು.
ಸ್ಯಾಂಡಲ್ ವುಡ್‍ನ ಸ್ಟಾರ್ ನಟರು ಇಂದು ವಿಷ್ಣುವರ್ಧನನನ್ನು ನೆನಪುಮಾಡಿಕೊಂಡು ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಕಿಚ್ಚ ಸುದೀಪ್, ಸಿಂಪಲ್ ಸುನಿ, ಶರಣ್, ನಿರ್ಮಾಪಕರಾದ ಸವಪ್ನ ಕೃಷ್ಣ, ನಿರ್ದೇಶಕರಾದ ಕೃಷ್ಣ, ಧ್ರುವ ಸರ್ಜಾ, ವಸಿಷ್ಠ ಎನ್ ಸಿಂಹ, ಗಣೇಶ್, ಚಿರಂಜೀವಿ ಸರ್ಜಾ, ಪುನೀತ್ ರಾಜ್ ಕುಮಾರ್, ಡಾ.ಶಿವರಾಜ್ ಕುಮಾರ್, ರಮೇಶ್ ಅರವಿಂಧ್,ರಚಿತಾ ರಾಮ್, ಜಗ್ಗೇಶ್ ಸೇರಿದಂತೆ ಹಲವು ಗಣ್ಯರು ಸಿರಿವಂತನನ್ನು ನೆನದು ಸೋಶಿಯಲ್ ಮೀಡಿಯಾದಲ್ಲಿ ಬರ್ತ್ ಡೇ ವಿಶಸ್ ತಿಳಿಸಿದ್ದಾರೆ.
ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ, ವಾಟ್ಸ್ ಅಪ್ ಸ್ಟೇಟಸ್ ಗಳಲ್ಲೂ ವಿಷ್ಣುರವರ ಹುಟ್ಟುಹಬ್ಬದ ಶುಭಾಶಯಗಳದ್ದೆ ಸದ್ದು..ಟ್ವಿಟ್ಟರ್ ನಲ್ಲಂತೂ # ವಿಷ್ಣುದಾದ ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗ್ತಿದೆ. ಒಟ್ನಲ್ಲಿ ಕಣ್ಣಂಚಿನಿಂದ ಸಾಹಸಸಿಂಹ ಮರೆಯಾದರೂ ಎಲ್ಲರ ಮನದಂಗಳದಲ್ಲಿ ಸಿಹಿ ನೆನಪುಗಳೇ ಕಾಡುವಂತಾಗಿದೆ.