ಅಭಿಮಾನಿಗಳೇ ಹಾಗೆ.. ತಮ್ಮ ನೆಚ್ಚಿನ ನಟ ಅಥವಾ ನಟಿಯ ಬಗ್ಗೆ ತಮ್ಮ ಅಭಿಮಾನವನ್ನು ನಾನಾ ಬಗೆಯಲ್ಲಿ ತೋರ್ಪಡಿಸುತ್ತಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‍ರವರಿಗೂ ಅಭಿಮಾನಿಗಳೇ ಹೆಚ್ಚು..ಅಂತಹ ಅಭಿಮಾನಿಗಳ ಪೈಕಿ ಒಬ್ಬ ಬಸಯ್ಯ ಎನ್ ನಾಗಯ್ಯನವರ್. ಕಿಚ್ಚ ಸುದೀಪ್ ರವರ ಕಟ್ಟಾ ಅಭಿಮಾನಿಯಾಗಿರುವ ಈತ ಬೊಂಬೇರಹಳ್ಳಿ ಎನ್ನುವ ಊರಿನಲ್ಲಿ `ಕಿಚ್ಚ ಸುದೀಪ್ ಗ್ರಂಥಾಲಯ’ ಕಟ್ಟಿಸುವ ಮೂಲಕ ಎಲ್ಲರೂ ಮೆಚ್ಚುವಂತಹ ಕೆಲಸ ಮಾಡಿದ್ದಾನೆ. ಅದಕ್ಕೂ ಮಿಗಿಲಾಗಿ ಕಿಚ್ಚನ ಹುಟ್ಟುಹಬ್ಬದ ದಿನದಂದೇ ಆ ಗ್ರಂಥಾಲಯವನ್ನು ಉದ್ಘಾಟನೆ ಮಾಡಿದ್ದಾನೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಹಂಚಿಕೊಂಡು ಎಲ್ಲರ ಗಮನಸೆಳೆದಿದ್ದಾನೆ. ಅಭಿಮಾನಿಯ ಈ ಪ್ರೀತಿಗೆ ಕಿಚ್ಚ ಮೆಚ್ಚಿಕೊಂಡಿದ್ದಾರೆ. ಇಮೋಜಿಯ ಮೂಲಕ ಬಸಯ್ಯನಿಗೆ ಧನ್ಯವಾದ ತಿಳಿಸಿದ್ದಾರೆ.