ಬೆಂಗಳೂರು,ಡಿ.14: ದೇಶದೆಲ್ಲೆಡೆ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ, ಕೊಲೆ ಪ್ರಕರಣಗಳ ಬಗ್ಗೆ ಕ್ರಮ ಕೈಗೊಳ್ಳಲು ಬೆಂಗಳೂರು ನಗರ ಪೊಲೀಸರು ಹೊಸ ಹೆಜ್ಜಿಯಿಟ್ಟಿದ್ದಾರೆ. ಅಲಸೂರಿನ ತಮಿಳ್ ಸಂಘದಲ್ಲಿ ಶಾಲೆ-ಕಾಲೇಜುಗಳಿಗೆ ಹೋಗುವ ಹೆಣ್ಣುಮಕ್ಕಳು, ವರ್ಕಿಂಗ್ ವುಮೆನ್ ಮಾತ್ರವಲ್ಲದೆ ಗೃಹಿಣಿಯರು ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಇರುವ ಹೆಣ್ಣುಮಕ್ಕಳ ಸುರಕ್ಷತೆಯ ದೃಷ್ಟಿಯಿಂದ “ಸುರಕ್ಷಾ ಆಪ್ ಲಾಂಚ್” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ವುಮೆನ್ಸ್ ಪೊಲೀಸ್ ಸ್ಟೇಷನ್ ಈಸ್ಟ್ ಡಿವಿಜನ್, ಪುಲಕೇಶಿನಗರ ಸಬ್ ಡಿವಿಜನ್, ಬೆಂಗಳೂರು ಸಿಟಿ ಈಸ್ಟ್ ಡಿವಿಜನ್ ನ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಮುಖ್ಯ ಅತಿಥಿಗಳಾಗಿ ಎಸಿಪಿ ಶ್ರೀಮತಿ ತಬಾರಕ್ ಫಾತಿಮಾ, ಡಿಸಿಪಿ ಶ್ರೀ ಡಾ.ಶರಣಪ್ಪ, ಹಿರಿಯ ತನಿಖಾ ವರದಿಗಾರ್ತಿ ವಿಜಯಲಕ್ಷ್ಮಿ ಶಿಬರೂರು, ಸಾಮಾಜಿಕ ಕಾರ್ಯಕರ್ತೆ ಮೀನಾ ಜೈನ್ ಆಗಮಿಸಿದ್ದರು. ಅಲ್ಲದೆ ಮಕ್ಕಳು ಮತ್ತು ಮಹಿಳೆಯರು ಸೆಲ್ಫ್ ಢಿಫೆನ್ಸ್ ಮಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.