ವ್ಯಾಯಾಮಗಳಲ್ಲಿ ಹಲವು ವಿಧಗಳಿವೆ..ಅವುಗಳಲ್ಲಿ ಒಂದು ವಿಧಾನ ಯೋಗ..ನಿತ್ಯವೂ ಯೋಗಾಭ್ಯಾಸ ಮಾಡುವುದು ಆರೋಗ್ಯದ ದೃಷ್ಟಿಯಿಂದ ಲಾಭಕರವಾಗಿದ್ದು, ಇದು ದೇಹ ಹಾಗೂ ಮನಸ್ಸನ್ನು ಪುನಶ್ಚೇತನಗೊಳಿಸುತ್ತದೆ. ಅಲ್ಲದೆ ಸೂರ್ಯ ನಮಸ್ಕಾರವನ್ನು ನಿತ್ಯವೂ ಮಾಡುವುದುರಿಂದ ಶರೀರದ ಎಲ್ಲ ಅಂಗಾಂಗಗಳಿಗೂ ಉತ್ತಮವಾಗಿದೆ.
1.ರಕ್ತ ಪರಿಚಲನೆಗೆ ಸೂರ್ಯ ನಮಸ್ಕಾರಕ್ಕಿಂತ ಉತ್ತಮ ಆಯ್ಕೆ ಬೇರೊಂದಿಲ್ಲ.
2. ತೂಕ ನಷ್ಟಕ್ಕೆ ಅನೇಕ ಕಸರತ್ತುಗಳನ್ನು ಮಾಡುವ ಮಂದಿ ಸೂರ್ಯ ನಮಸ್ಕಾರವನ್ನು ನಿತ್ಯವೂ ಮಾಡಿ ಲಾಭ ಕಂಡುಕೊಳ್ಳಬಹುದು.
3. ಒತ್ತಡವನ್ನು ಕಮ್ಮಿ ಮಾಡಿ, ನೆಮ್ಮದಿಯನ್ನು ತರುವುದರ ಜೊತೆಗೆ ಚರ್ಮದ ಕಾಂತಿ ಹೆಚ್ಚಲು ಸೂರ್ಯ ನಮಸ್ಕಾರ ಉತ್ತಮ ಆಯ್ಕೆ
4. ಜೀರ್ನಕ್ರಿಯೆ ಸರಿಯಾದ ರೀತಿಯಲ್ಲಿ ನಡೆಯದೆ ಸಮಸ್ಯೆ ಅನುಭವಿಸುತ್ತಿರುವ ಮಂದಿಗೆ ಸೂರ್ಯ ನಮಸ್ಕಾರ ರಾಮಬಾಣ..
5. ಹೆಣ್ಣುಮಕ್ಕಳಲ್ಲಿ ಋತುಚಕ್ರದ ಸಮಸ್ಯೆ ಇಲ್ಲವೇ ಆ ವೇಳೆ ನೋವಿನ ಸಮಸ್ಯೆಗೂ ಪರಿಹಾರ ಕಾಣಲು ಸೂರ್ಯನಮಸ್ಕಾರದಿಂದ ಸಾಧ್ಯ. ಅಲ್ಲದೆ ಹೆರಿಗೆ ಪ್ರಕ್ರಿಯೆ ಸರಾಗವಾಗಿ ನಡೆಯಲು ಇದು ಸಹಕಾರಿ.
6. ಹೃದ್ರೋಗ ಸಮಸ್ಯೆಯುಳ್ಳವರು ಸೂರ್ಯನಮಸ್ಕಾರದ ಮೊರೆ ಹೋಗಲೇಬೇಕು.
7. ನಿದ್ರೆಯ ಸಮಸ್ಯೆಯುಳ್ಳವರು ನಿತ್ಯವೂ ಸೂರ್ಯನಮಸ್ಕಾರವನ್ನು ಅಭ್ಯಾಸಮಾಡಿಕೊಳ್ಳಿ.