Visit Channel

ಸ್ಯಾಂಡಲ್‍ವುಡ್‍ನಲ್ಲಿ ಹೆಚ್ಚುತ್ತಿದೆ “ಲವ್ ಮಾಕ್ಟೇಲ್” ನಶೆ

WhatsApp-Image-2020-01-20-at-12.05.55

ಗಾಂಧೀನಗರದೆಲ್ಲೆಡೆ ಈಗ ಲವ್ ಮೋಕ್ಟೆಲ್‍ನದ್ದೇ ಹವಾ…. ಲವರ್ ಬಾಯ್ ಡಾರ್ಲಿಂಗ್ ಕೃಷ್ಣ ರೊಮ್ಯಾಂಟಿಕ್ ಲುಕ್ ಜೊತೆಗೆ ರಘು ದೀಕ್ಷಿತ್ ಕಿಕ್ಕೆಬ್ಬಿಸೋ ಮ್ಯೂಸಿಕ್‍ಗೆ ಸಿನಿಪ್ರಿಯರು ನಶೆಯಲ್ಲಿ ತೇಲಾಡುತ್ತಿದ್ದಾರೆ ,ಅದಕ್ಕೆ ಕಾರಣ ಒನ್ ಆಂಡ್ ಓನ್ಲಿ ಲವ್ ಮೋಕ್ಟೆಲ್ ಸಿನಿಮಾ.. ಹೌದು ಬಣ್ಣದ ಲೋಕದಲ್ಲಿ ಬರೀ ಬಣ್ಣ ಹಚ್ಚಿ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಮದರಂಗಿ ಕೃಷ್ಣ ಈಗ ಡೈರೆಕ್ಟರ್ ಕ್ಯಾಪ್ ತೊಟ್ಟು ಡೈರೆಕ್ಷನ್ ಫೀಲ್ಡಿಗು ಇಳಿದಿದ್ದಾರೆ.

ಈಗಾಗಲೇ ಮೋಷನ್ ಪೋಸ್ಟರ್, ಟೀಸರ್, ಟ್ರೈಲರ್‍ನಿಂದಲೇ ಸ್ಯಾಂಡಲ್‍ವುಡ್‍ನ ಮೂಲೆ ಮೂಲೆಯಲ್ಲೂ ಸೌಂಡ್ ಮಾಡಿದ್ದ ಲವ್ ಮೋಕ್ಟೆಲ್ ಚಿತ್ರ; ಇತ್ತೀಚೆಗಷ್ಟೆ ಸಿನಿಮಾದ ಆಡಿಯೋ ಲಾಂಚ್ ಮಾಡಿ ಮತ್ತೆ ಚಿತ್ರತಂಡದತ್ತ ತಿರುಗಿ ನೋಡುವಂತೆ ಮಾಡಿದೆ.. ಅಭಿನಯ ಚಕ್ರವರ್ತಿಯ ಕಂಠ ಟ್ರೈಲರ್‍ನುದ್ದಕ್ಕೂ ಕಾಣಿಸಿಕೊಂಡಿದ್ದು ಕಿಚ್ಚ ಕೈಯಿಂದಲೇ ಆಡಿಯೋ ಲಾಂಚ್ ಮಾಡೋದರ ಮೂಲಕ ಸಿನಿಮಾಕ್ಕೆ ಕಿಚ್ಚೆಬ್ಬಿಸಿದ್ದಾರೆ .ಇದರ ಬೆನ್ನಲೇ ಲವ್ ಮೂಡಲ್ಲಿರೋರಿಗಾಗಿಯೇ ವಿಭಿನ್ನ ಹಾಡೊಂದರ ವಿಡಿಯೋ ಸಾಂಗ್ ರಿಲೀಸ್ ಮಾಡಿ ಮತ್ತಷ್ಟು ರೋಮ್ಯಾಂಟಿಕ್ ಮೂಡಿಗೆ ಕರೆದೊಯ್ಯುತ್ತಿದೆ ಲವ್ ಮೋಕ್ಟೆಲ್ ಚಿತ್ರ.

ಅಂದಹಾಗೆ ಪ್ರವಾಸಕ್ಕೆ ಸಂಬಂಧಿಸಿದ ಸಿನಿಮಾ ಇದಾಗಿದ್ದು ; ಹಾಡಿನೊಂದಿಗೆ ಕಥೆನೂ ಸಾಗತ್ತೆ ಅಂತ ನಿರ್ದೇಶಕ ನಟ ಕೃಷ್ಣ ಹೇಳಿಕೊಂಡಿದ್ದಾರೆ. ಸಿನಿಮಾಗೆ ಕೃಷ್ಣ, ಮಿಲನ ನಾಗರಾಜ್ ಬಂಡವಾಳ ಹೂಡಿದ್ದು; ನಾಯಕ ಕೃಷ್ಣನಿಗೆ ನಾಯಕಿಯರಾಗಿ ಮಿಲನ ನಾಗರಾಜ್ , ರಚನಾ, ಅಭಿ , ಕುಶಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಹೊಸ ಮುಖಗಳೇ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ .. ಶ್ರೀ ಕ್ರೇಜಿಯವರ ಛಾಯಾಗ್ರಹಣ ಮಸ್ತಾಗಿದೆ. ಒಟ್ಟಾರೆ ಟಾಕಿ ಪೋರ್ಷನ್ ಕಂಪ್ಲಿಟ್ ಮಾಡಿರೊ ಚಿತ್ರತಂಡ ಜನವರಿ 31 ರಂದು ಬೆಳ್ಳಿತೆರೆಯಲ್ಲಿ ಕಮಾಲ್ ಮಾಡಲಿದೆ .

Latest News

Assam
ದೇಶ-ವಿದೇಶ

ತನ್ನ ಪ್ರೀತಿಯನ್ನು ನಿರೂಪಿಸಲು, ಏಡ್ಸ್ ರೋಗವಿರುವ ಪ್ರಿಯಕರನ ರಕ್ತವನ್ನು ತನ್ನ ದೇಹಕ್ಕೆ ಚುಚ್ಚಿಕೊಂಡ 15 ವರ್ಷದ ಹುಡುಗಿ!

ಏಡ್ಸ್ ರೋಗವಿರುವ ತನ್ನ ಹುಡುಗನ ರಕ್ತವನ್ನು ಸೂಜಿಯ ಮೂಲಕ ತನ್ನ ದೇಹಕ್ಕೆ ಚುಚ್ಚಿಕೊಂಡಿದ್ದಾಳಂತೆ! ಇನ್ನೊಂದು ಅಚ್ಚರಿಯ ವಿಷಯ ಎಂದರೆ, ಈಕೆಯ ವಯಸ್ಸು ಕೇವಲ 15 ವರ್ಷ!

Shivamogga
ಪ್ರಮುಖ ಸುದ್ದಿ

ರಾತ್ರಿ ವೇಳೆ ಅನಗತ್ಯ ಬೈಕ್ ಸಂಚಾರ ನಿಷೇಧ ; ಇಬ್ಬರು ಯುವಕರು ಬೈಕ್‍ನಲ್ಲಿ ಸಂಚರಿಸುವಂತಿಲ್ಲ : ಎಡಿಜಿಪಿ

ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಅವರು, ದ್ವಿಚಕ್ರ ವಾಹನ ಸವಾರರು ಹಿಂಬದಿಯಲ್ಲಿ 40 ವರ್ಷಕ್ಕಿಂತ ಕಿರಿಯ ವಯಸ್ಸಿನವರನ್ನು ಕೂರಿಸಿಕೊಂಡು ಸಂಚರಿಸುವುದನ್ನು ನಿಷೇಧಿಸಲಾಗಿದೆ.

Lal singh Chadda
ಮನರಂಜನೆ

`ಲಾಲ್ ಸಿಂಗ್ ಚಡ್ಡಾʼ ಹೊಗಳಿದ ಹೃತಿಕ್ ; `ಕಾಶ್ಮೀರ ಫೈಲ್ಸ್ʼ ಬಗ್ಗೆ ಯಾಕೆ ಮಾತನಾಡಲಿಲ್ಲ? : ಸಿಡಿದೆದ್ದ ನೆಟ್ಟಿಗರು!

ಹೃತಿಕ್ ರೋಷನ್ ʼಲಾಲ್ ಸಿಂಗ್ ಚಡ್ಡಾʼ(Lal Singh Chadda) ಚಿತ್ರವನ್ನು ನೋಡುವಂತೆ ಕರೆ ನೀಡಿರುವುದು ನೆಟ್ಟಿಗರ(Netizens) ಆಕ್ರೋಶಕ್ಕೆ ಕಾರಣವಾಗಿದೆ.

Nithish Kumar
ದೇಶ-ವಿದೇಶ

ಬಿಹಾರ ಸಂಪುಟ ರಚನೆ ; 31 ಸಚಿವರ ಪಟ್ಟಿ ಬಿಡುಗಡೆ, ಆರ್ಜೆಡಿಗೆ ಹೆಚ್ಚು ಸ್ಥಾನ

ತೇಜಸ್ವಿ ಯಾದವ್‌(Tejaswi Yadav) ನೇತೃತ್ವದ ಆರ್ಜೆಡಿ(RJD) 16 ಸಚಿವ ಸ್ಥಾನಗಳನ್ನು ಮತ್ತು ಜೆಡಿಯು(JDU) 11 ಸ್ಥಾನಗಳನ್ನು ಪಡೆಯಲಿದ್ದು, ಕಾಂಗ್ರೆಸ್‌ ಪಕ್ಷಕ್ಕೆ(Congress Party) ಕೇವಲ 2 ಸಚಿವ ಸ್ಥಾನಗಳು ಲಭಿಸುವ ಸಾಧ್ಯತೆ ಇದೆ.