ಬೆಂಗಳೂರು– ಸ್ಯಾಂಡಲ್‌ವುಡ್ ಖ್ಯಾತ ನಟ ಧ್ರುವ ಸರ್ಜಾ ಹಾಗೂ ಅವರ ಪತ್ನಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ.
ತಮಗೆ ಕೊರೊನಾ ಸೋಂಕು ತಗುಲಿರುವ ಕುರಿತು ನಟ ಧ್ರುವ ಸರ್ಜಾ ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ .
“ನಾನು ಹಾಗೂ ನನ್ನ ಪತ್ನಿ ಗೆ ಕೊರೊನಾ ಸೋಂಕು ಪಾಸಿಟಿವ್ ವರದಿ ಬಂದಿದ್ದು, ರೋಗ ಲಕ್ಷಣ ಕಡಿಮೆ ಇದೆ. ಆದರೆ ನಾವು ಆಸ್ಪತ್ರೆಗೆ ದಾಖಲಾಗುತ್ತಿದ್ದೇವೆ. ಹಾಗೆಯೇ ಬೇಗನೇ ಗುಣಮುಖರಾಗುತ್ತೇವೆ ಎನ್ನುವ ನಂಬಿಕೆ ಇದೆ. ನಮ್ಮೊಡನೆ ಸಂಪರ್ಕಕ್ಕೆ ಬಂದವರೂ ಸಹ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಿ, ಆರೋಗ್ಯವಾಗಿರಿ, ಸುರಕ್ಷಿತವಾಗಿರಿ ಎಂದು ಧ್ರುವ ಸರ್ಜಾ ಟ್ವೀಟ್ ಮಾಟಿದ್ದರೆ.
ಧ್ರುವ ಸರ್ಜಾ ಅವರ ಅಣ್ಣ ಚಿರಂಜೀವಿ ಸರ್ಜಾ ಇತ್ತೀಚೆಗೆ ಮೃತಪಟ್ಟಿದ್ದರು. ಈ ವೇಳೆ ಎಲ್ಲ ಕಾರ್ಯವನ್ನೂ ಸ್ವತಃ ಧ್ರುವ ಸರ್ಜಾ ಅವರೇ ಮುಂದೆ ನಿಂತು ಮಾಡಿದ್ದರು. ಈ ವೇಳೆ ಹಲವು ಗಣ್ಯರು ಮನೆಗೂ ಭೇಟಿ ನೀಡಿದ್ದನ್ನು ಇದೇ ವೇಳೆ ಸ್ಮರಿಸಬಹದು.