ಸೋಮವಾರ ಬೆಳ್ಳಂಬೆಳಗ್ಗೆ ಕಾಡಾನೆ ದಾಳಿ ಮಾಡಿದೆ. ತುಮಕೂರಿನ ಹಿರೇಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು ; ಏಕಾಏಕಿ ಕಾಡಿನಿಂದ ನಾಡಿಗೆ ಎಂಟ್ರಿಕೊಟ್ಟ ಕಾಡಾನೆ ಹೊಲದಲ್ಲಿ ಕೆಲಸಮಾಡುತ್ತಿದ್ದ ವೃದ್ದನನ್ನು ತುಳಿದು ಘಾಸಿಗೊಳಿಸಿರುವ ಘಟನೆ ನಡೆದಿದ್ದು ಪ್ರಾಣಪಾಯದಿಂದ ಪಾರಾಗಿದ್ದಾನೆ.
ಬೇಸಿಗೆಯ ಬಿಸಿತಾಪಕ್ಕೆ ಆಹಾರ ಹುಡುಕುತ್ತಾ ನಾಡಿಗೆ ಬಂದಿರೋ ಈ ಒಂಟಿ ಸಲಗ ಆಹಾಯವಿಲ್ಲದೆ ಪರದಾಡಿದಲ್ಲದೆ ಅದೇ ಸಿಟ್ಟಿಗೆ ಏಕಾಏಕಿ ನಾಡಿಗೆ ಬಂದಿದ್ದು ತನ್ನ ಪಾಡಿಗೆ ಕೆಲಸಮಾಡುತ್ತಿದ್ದ ೬೫ ವರ್ಷದ ವೃದ್ದನನ್ನು ತುಳಿದು ಬಿಸಾಡಿದೆ .ಅದೇ ಸಂದರ್ಭದಲ್ಲಿ ಅಲ್ಲಿ ಜಲ್ಲಿಕಲ್ಲಿನ ರಾಶಿ ಇದ್ದುದರಿಂದ ಆನೆಗೆ ಆತನನ್ನು ಸರಿಯಾಗಿ ಕಾಣಿಸಲಿಲ್ಲ ಪರಿಣಾಮ ಅಲ್ಲಿಂದ ಆನೆ ಹೊರಟು ಹೋಗಿದೆ. ಆದ್ರೆ ಆನೆ ತುಳಿದ ಪರಿಣಾಮ ವೃದ್ದನ ಕಾಲು ಮುರಿದಿದ್ದು ; ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ . ಇನ್ನು ತಕ್ಷಣ ಸ್ಥಳಕಾಗಮಿಸಿದ ಅರಣ್ಯಾಧಿಕಾರಿಗಳು ಆನೆಯನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.