ಅಕ್ರಮ ಗಣಿಗಾರಿಕೆಗೆ ತತ್ತರಿಸಿ ಹೋಗಿದೆ ಕೋಲಾರ

Stone crusher crushing the life of Kolara Vemagal people | ಅಕ್ರಮ ಗಣಿಗಾರಿಕೆಗೆ ತತ್ತರಿಸಿ ಹೋಗಿದೆ ಕೋಲಾರ

ಇದು ಕೋಲಾರ ಜಿಲ್ಲೆಯ ಕೋಲಾರ ತಾಲೂಕಿನ ವೇಮಗಲ್ ಹೋಬಳಿಯ ಭುವನ ಹಳ್ಳಿಯ ಸರ್ವೇ ನಂಬರ್ 59 ಗೋಮಾಳ ಸರ್ಕಾರೀ ಭೂಮಿ.  ವಿಶಾಲವಾದ ಈ ಭೂಪ್ರದೇಶ ರಾಮಮೂರ್ತಿ ನಗರಕ್ಕೆ ಅಂಟಿಕೊಂಡಂತಿದೆ. ಇಲ್ಲಿ 6 ಎಕರೆ ಸರ್ಕಾರೀ ಭೂಮಿಗೆ ನಿರೋತರವಾಗಿ ಕೊಡಲಿ ಏಟು ಬೀಳುತ್ತಿದೆ ಹಾಗೂ ಮುನಿಯಪ್ಪನ ಜೇಬಿಗೆ ಕೋಟ್ಯಾಂತರ ರೂಪಾಯಿಗಳು ಬಂದು ಬೀಳುತ್ತಿವೆ. ಮುನಿ ವೆಂಕಟಪ್ಪ ಉರುಪ್ ಮರಿಯಪ್ಪ ಅವರು ಭೂವಿಜ್ಷಾನ ಇಲಾಖೆಯ ಅನುಮತಿ ಪಡೆಯದೆ ಸರ್ಕಾರಕ್ಕೆ ಯಾವುದೇ ರಾಜಧನವನ್ನು ನೀಡದೆ ಸುಮಾರು 35 ವರ್ಷಗಳಿಂದ ಸರ್ಕಾರೀ ಭೂಮಿಯ ಖನಿಜ ಸಂಪತ್ತನ್ನು ಕಬಳಿಸುತ್ತಿದ್ದಾರೆ ಎಂಬುದು ಊರಿನ ಜನರ ದೂರು. ರಸ್ತೆಯಿಂದ 150 ಅಡಿ ಬಿಟ್ಟು ಕೆಲಸ ಮಾಡುವ ಆದೇಶವಿದ್ದರೂ ಅಕ್ರಮವಾಗಿ ರಸ್ತೆಯ ಪಕ್ಕದವರೆಗೂ ಭೂಮಿ ಅಗೆಯುತ್ತಿದ್ದಾರೆ. ಸಾರ್ವಜನಿಕರು ನಡೆದಾಡಲು ಇಲ್ಲಿ ಕಷ್ಟಕರವಾಗಿದೆ. ದೂಳುಮಯ ವಾತಾವರಣದಿಂದ ಮೂಗು ಮುಚ್ಚಿಕೊಂಡು ನಡೆದಾಡಬೇಕು.

ಈ ಬಂಡೆ ಭೂಮಿಯಿಂದ ಸುಮಾರು 100 ಅಡಿ ಎತ್ತರವಾಗಿತ್ತು, ಆದರೆ 35 ವರ್ಷಗಳಿಂದ ನಿರಾತಂಕವಾಗಿ ಸಾಗುತ್ತಿದೆ ಬಂಡೆ ಒಡೆಯುವ ಕಾಯಕ ಮಾಡಿದ್ದರಿಂದ ಬಂಡೆ ನೆಲಸಮವಾಗಿದೆ. ಆದ್ರೂ ಅಕ್ರಮವಾಗಿ ಬಂಡೆ ಒಡೆಯುವವರು ಇನ್ನೂ ಗಣಿಗಾರಿಕೆ ಮಾಡ್ತಾನೇ ಇದ್ದಾರೆ.   ಈ ಬಗ್ಗೆ ಅನೇಕ ಬಾರಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಪತ್ರ ಹಾಗೂ ಆಕ್ಷೇಪಣಾ ಪತ್ರ ನೀಡಿದ್ದರೂ ಯಾವುದೇ ಪ್ರಯೋಜನೆ ಕಂಡಿಲ್ಲವೆಂಬುದು ಜನರ ದೂರು. ತಮ್ಮ ಮನೆಯ ಜಮೀನಲ್ಲಿ ಕೆಲಸ ಮಾಡುತ್ತಿರುವಂತೆ ಯಾರ ಭಯವೂ ಇಲ್ಲದೆ ಇಷ್ಟೊಂದು ವಿಶಾಲವಾದ ಪ್ರದೇಶದಲ್ಲಿ ಹೇಗೆ ಅಕ್ರಮ ನಡೀತಿದೆ ನೋಡಿ. ಆದರೂ ಅಲ್ಲಿನ ತಾಲೂಕು ಅಧಿಕಾರಿಗಳು ಡಿ ಸಿ ಯವರು ಯಾಕೆ ಸುಮ್ಮನಿದ್ದಾರೆ. ಈ ಅಕ್ರಮದಲ್ಲಿ ಅವರಿಗೂ ಪಾಲು ಸಿಗುತ್ತಿದೆಯಾ ಅನ್ನೋ ಸಂಶಯ ಸಾರ್ವಜನಿಕರದ್ದು. ಭೂಕಬಳಿಕೆ ನಿಶೇಧ ಕಾಯಿದೆಯ 2011ರ ಸೆಕ್ಷನ್  9ರ ಉಪ ಸೆಕ್ಷನ್ (1)ರ ಅಡಿಯಲ್ಲಿ ಅಪರಾಧವಾಗಿರುವುದರಿಂದ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರ ಮನವಿ. ನೋಡಿದೀರಲ್ಲಾ ಧನದಾಹಕ್ಕಾಗಿ ಸರ್ಕಾರಿ ಭೂಮಿಯನ್ನು ಕಬಳಿಸುತ್ತಿರುವ ಖದೀಮರ ಕತೆಯನ್ನು. ಇನ್ನಾದರೂ ಸರ್ಕಾರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಇತ್ತ ಗಮನಹರಿಸಿ ಅಕ್ರಮಕ್ಕೆ ಬ್ರೇಕ್‌ ಹಾಕಲಿ ಅನ್ನೋದು  ವಿಜಯಾಟೈಮ್ಸ್ ಆಶಯ.

Exit mobile version