ವೀಡಿಯೊ

ಕೃಷಿ ಇಲಾಖೆಯಲ್ಲಿ ಮಹಾ ಮೋಸ !

 ಇವೆಲ್ಲಾ ಕೃಷಿ ಇಲಾಖೆಯಲ್ಲಿ ರೈತರಿಗೆ ರಿಯಾಯಿತಿ ದರದಲ್ಲಿ ಕೊಡಬೇಕಾದ ಹನಿ ನೀರಾವರಿ ಪೈಪ್‌ಗಳು. ಆದ್ರೆ ಈ ಪೈಪ್‌ಗಳೆಲ್ಲಾ ರೈತರಿಗೆ ಸಿಗದೆ ಕಾಳ ಸಂತೆ ಸೇರುತ್ತಿವೆ. ಕಾಳಸಂತೆಯಲ್ಲಿ ಅಕ್ರಮವಾಗಿ ಈ ಪೈಪುಗಳನ್ನು ಮಾರಾಟ ಮಾಡುತ್ತಿದ್ದಾಗ ರೈತರ ಕೈಗೇ ಸಿಕ್ಕ ಖದೀಮರು. ಹೌದು, ಈ ಘಟನೆ ನಡೆದಿರೋದು ವಿಜಯನಗರ  ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಹೋಬಳಿಯಲ್ಲಿ

ಹದ್ದು ಮೀರಿ ವರ್ತಿಸುತ್ತಿರುವ ಸರ್ಕಾರಿ ಅಧಿಕಾರಿ

ವಿಜಯಟೈಮ್ಸ್ಗೆ ಸಿಕ್ಕಿದ ದಾಖಲೆಗಳನ್ನು ಅವಲೋಕಿಸಿದಾಗ ಕೆಎಎಸ್ ಅಧಿಕಾರಿ  ಶ್ರೀರೂಪ ಅವರು ಕರ್ತವ್ಯ ಲೋಪ ಮಾಡಿರುವುದು ಸ್ಪಷ್ಟವಾಗಿ ಗೊತ್ತಾಗುತ್ತೆ.  ಕಾನೂನು ಮಾಪನ ಶಾಸ್ತ್ರ ನಿಯಂತ್ರಕಿಯಾಗಿ ಶ್ರೀರೂಪ ಅವರಿಗೆ ಹೆಚ್ಚುವರಿ ಜವಾಬ್ದಾರಿಯನ್ನೇನಾದ್ರೂ ನೀಡಲಾಗಿದೆಯಾ ಅಂತ ನಾವು ಆರ್‌ಟಿಐಯಲ್ಲಿ ಕೇಳಿದಾಗ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಧಿಕಾರಿಗಳು ಇಲ್ಲ ಅಂತ ಸ್ಪಷ್ಟವಾಗಿ ಹೇಳಿದ್ದಾರೆ.

ರಸ್ತೆ ಇಲ್ಲದೆ ಸುಸ್ತು ! ಸರ್ಕಾರ ಆಶ್ರಯ ಮನೆ ಕಟ್ಟಿದೆ, ಆದ್ರೆ ರಸ್ತೆಯೇ ಮಾಡ್ಲಿಲ್ಲ. ರಸ್ತೆ ಇಲ್ಲದೆ 17 ವರ್ಷಗಳಿಂದ ಒದ್ದಾಡುತ್ತಿರುವ ಬಡ ಜನತೆ. ಇದು ಚೆನ್ನಪಟ್ಟಣದ ಲಾಳಘಟ್ಟದ ತಮಿಳು ಕಾಲೋನಿಯ ದುರಂತದ ಕಥೆ ಇದು

ರಸ್ತೆ ಇಲ್ಲದೆ ಚೆನ್ನಪಟ್ಟಣದ ಆಶ್ರಯ ನಿವಾಸಿಗಳು ಸುಸ್ತು
17ವರ್ಷಗಳಿಂದ ಲಾಳ ಘಟ್ಟದ ತಮಿಳು ಆಶ್ರಯ ಕಾಲೊನಿಗಿಲ್ಲ ರಸ್ತೆ

ವಾಹನ ಖರೀದಿದಾರರೇ ಎಚ್ಚರ! ವಾಹನ ಶೋರೂಂಗಳಿಂದ ಹಗಲು ದರೋಡೆ. ಆರ್‌ಟಿ ಓ ಹೆಸರಲ್ಲಿ ಶೋ ರೂಂಗಳಿಂದ ಹೆಚ್ಚುವರಿ ಹಣ ಲೂಟಿ. ಇದಕ್ಕೆ ಆರ್‌ಟಿಓ ಅಧಿಕಾರಿಗಳೇ ಕೊಡ್ತಿದ್ದಾರಾ ಸಾಥ್‌?

ನೋಡಿದ್ರಾ ಸ್ನೇಹಿತ್ರೆ, ಹೇಗೆ ಇವರು ಲಂಚವನ್ನ ಅಧಿಕೃತವಾಗಿ ಬಿಲ್ ಮುಖಾಂತರವೇ ಸಂಗ್ರಹಿಸ್ತಿದ್ದಾರೆ ನೋಡಿ. ಈ ರೀತಿ ಪ್ರತಿ ಗ್ರಾಹಕನಿಂದ ಹೆಚ್ಚುವರಿ ಹಣ ಸಂಗ್ರಹಿಸಿ ಕೋಟ್ಯಾಂತರ ರೂಪಾಯಿ ಲೂಟಿ ಹೊಡೀತ್ತಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು ಸಾರಿಗೆ ಸಚಿವರು, ಸಾರಿಗೆ ಅಧಿಕಾರಿಗಳಿಗೆ ಪ್ರತಿಯೊಬ್ಬರಿರೂ ದೂರು ನೀಡಲಾಗಿದೆ. ಆದ್ರೆ ಯಾರೂ ಇದನ್ನು ಸರಿಪಡಿಸುವ ಗೋಜಿಗೇ ಹೋಗ್ತಿಲ್ಲ.

ಕಳಪೆ ಕಾಮಗಾರಿಯಿಂದ ಕುಸಿಯುವ ಹಂತದಲ್ಲಿರುವ ನೂತನ ಅಂಗನವಾಡಿ ಕಟ್ಟಡ

ಇನ್ನು ಕಳಪೆ ಕಾಮಗಾರಿ ಯಾರಿಗೂ ಗೊತ್ತಾಗಬಾರದು ಅಂತ ಸುಣ್ಣ ಬಣ್ಣ ಬಳಿದು ಮುಚ್ಚಿ ಬಿಟ್ಟಿದ್ದಾರೆ. ಕಾಮಗಾರಿಯ ಆರಂಭದಲ್ಲೇ ಸಾರ್ವಜನಿಕರು ಕಳಪೆ ಕಾಮಗಾರಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ರು. ಆದ್ರೆ ಕಾಮಗಾರಿಯ ಉಸ್ತುವಾರಿ ವಹಿಸಿರುವ ಇಂಜಿನಿಯರ್‌ ಉಡಾಫೆ ಉತ್ತರವನ್ನು ಕೊಟ್ಟು ಗ್ರಾಮಸ್ಥರ ಬಾಯಿ ಮುಚ್ಚಿಸಿದ್ದಾರೆ. ಆದ್ರೆ ಈಗ ಈ ಕಟ್ಟಡವೇ ಒಂದು ವರ್ಷದೊಳಗೆ ಬೀಳುವಷ್ಟು ಕಳಪೆ ಮಾಡಿ ಕಟ್ಟಿದ್ದಾರೆ ಅನ್ನೋದು ಗ್ರಾಮಸ್ಥರ ಆರೋಪ.

ಕೆ.ಆರ್‌ಪೇಟೆಯ ಲೋಕನಹಳ್ಳಿ ಕನ್ನಡ ಸರ್ಕಾರಿ ಪ್ರಾಥಮಿಕ ಶಾಲೆ ದುಸ್ಥಿತಿ

ಶಿಕ್ಷಣ ಸಚಿವರು ನಿದ್ದೆ ಮಾಡ್ತಿದ್ದಾರಾ? ಇದು ಸರ್ಕಾರಿ ಶಾಲೆಯೋ ದನದ ಹಟ್ಟಿಯೋ? ಕೆ.ಆರ್‌ಪೇಟೆಯ ಲೋಕನಹಳ್ಳಿ ಕನ್ನಡ ಸರ್ಕಾರಿ ಪ್ರಾಥಮಿಕ ಶಾಲೆ ಕುಸಿದು ಬೀಳುತ್ತಿದ್ರು ಮಂಡ್ಯದ  ಶಿಕ್ಷಣ ಅಧಿಕಾರಿಗಳಿಗೆ ಕಾಣುತ್ತಿಲ್ಲ.

ಕುಸಿಯುತ್ತಿದೆ ಕೆ.ಆರ್‌ ಆಸ್ಪತ್ರೆ ಛಾವಣಿ !! ಅರಮನೆ ನಗರಿಯ ಆಸ್ಪತ್ರೆ ದುಸ್ಥಿತಿ ನೋಡಿ!! ಗೋಡೆಗಳು ಶಿಥಿಲಗೊಂಡಿವೆ, ಕುಡಿಯುವ ನೀರಿಲ್ಲ. ಜನಪ್ರತಿನಿಧಿಗಳಿಗೆ ಕಣ್ಣಿಗೆ ಕಾಣಿಸುತ್ತಿಲ್ವಾ ಕೊಳಕು.

ಸಾಂಸ್ಕೃತಿಕ ನಗರಿ, ಮೈಸೂರಿನ ಹೃದಯ ಭಾಗದಲ್ಲಿರುವ ಏಕೈಕ ಸರ್ಕಾರಿ ಆಸ್ಪತ್ರೆಯೇ ಕೆಆರ್‌ ಆಸ್ಪತ್ರೆ. ಇದು ಬಡವರ ಆಸ್ಪತ್ರೆಯೆಂದೇ ಪ್ರಸಿದ್ಧಿ ಪಡೆದಿದೆ. ಇಲ್ಲಿಗೆ ಮೈಸೂರು, ಮಂಡ್ಯ, ಮಡಿಕೇರಿ, ಚಾಮರಾಜನಗರ ಭಾಗದ ನೂರಾರು ಮಂದಿ ಬಂದು ಚಿಕಿತ್ಸೆ ಪಡೆಯುತ್ತಾರೆ. ಬಡವರ, ಮಧ್ಯಮದ ವರ್ಗದ ರೋಗಿಗಳಿಗೆ ಕೆ.ಆರ್‌ ಆಸ್ಪತ್ರೆ ಆಶಾಕಿರಣವಾಗಿದೆ. ಆದ್ರೆ ದುರಂತ ಏನು ಗೊತ್ತಾ? ಬಡವರ ರೋಗಗಳಿಗೆ ಔಷಧಿ ಕೊಟ್ಟು ಅವರ ಪ್ರಾಣ ಉಳಿಸೋ ಈ ಆಸ್ಪತ್ರೆಯೇ ಅವಸಾನದ ಅಂಚಿಗೆ ತಲುಪಿದೆ.

ಹೆಳವರ ಗೋಳು ಕೇಳುವವರಿಲ್ಲ. ರಾಜ್ಯದ ಅಪರೂಪದ ಅಲೆಮಾರಿ ಜನಾಂಗಕ್ಕೆ ನೆಲೆಯಿಲ್ಲ. ತಲೆ ಮೇಲೆ ಸೂರಿಲ್ಲ, ತಿನ್ನೋಕೆ ಕೂಳಿಲ್ಲ. ಮಕ್ಕಳಿಗೆ ವಿದ್ಯಾಭ್ಯಾಸ ಇಲ್ಲವೇ ಇಲ್ಲ. ಇದು ವಂಶ ವೃಕ್ಷದ ಸ್ವರೂಪ ಹೇಳುವವರ ದುಸ್ಥಿತಿ

ರಾಜ್ಯದ ಅಲೆಮಾರಿ ಜನಾಂಗದ ಹೆಳವರ ದುಸ್ಥಿತಿ ನೋಡಿ. ವಂಶವೃಕ್ಷ ಹೇಳೋ ಹೆಳವರದ್ದು ಅಪರೂಪದ ವೃತ್ತಿ. ಆದ್ರೆ ಇವರ ತಲೆಮೇಲೆ ಸೂರಿಲ್ಲ. ತಿನ್ನೋಕೆ ಕೂಳಿಲ್ಲ, ಆರೋಗ್ಯವೂ ಇಲ್ಲ. ಶಿಕ್ಷಣ ಇಲ್ಲದೆ ಮಕ್ಕಳು ಭೀಕ್ಷಾಟನೆ ದೂಡಲ್ಪಡುತ್ತಿದ್ದಾರೆ