ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದಿಂದ ಕೈಗೊಂಡ ಮಹತ್ವದ ನಿರ್ಧಾರ

ಕೋವಿಡ್ -೧೯ ವಿಶ್ವಕ್ಕೆ ಎಂಟ್ರಿಕೊಟ್ಟು ಇಡೀ ಆರ್ಥಿಕ  ಸ್ಥಿತಿ ಬುಡಮೇಲಾಗಿದೆ. ಇದರ ನಡುವೆ ಚೀನಾ  ಭಾರತದ ಸ್ವಾಭಿಮಾನಕ್ಕೆ ಧಕ್ಕೆಯಾಗೋ ಹೇಳಿಕೆಯನ್ನು ನೀಡಿದೆ. ಚೀನಾದ ವಸ್ತುಗಳಿಲ್ಲದೆ ಭಾರತೀಯರು ಬದುಕಲು ಸಾಧ್ಯವಿಲ್ಲ ಎಂದು ಇತ್ತೀಚೆಗೆ ಚೀನಾದ ಪತ್ರಿಕೆಯೊಂದರಲ್ಲಿ  ವರದಿ ಮಾಡಿತ್ತು. ಇದರಿಂದ ಇದೀಗ ಭಾರತ ಎಚ್ಚೆತ್ತಿದೆ.ಭಾರತಕ್ಕೆ ಆಮದಾಗುತ್ತಿದ್ದ ಚೀನಾ ಸಿದ್ಧವಸ್ತುಗಳನ್ನು ಬಹಿಷ್ಕರಿಸಲು ಆಂದೋಲವೊಂದನ್ನು ಇದೀಗ  ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ನಡೆಸಲು ನಿರ್ಧರಿಸಿದೆ. 3 ಸಾವಿರ ವಸ್ತುಗಳ ಪಟ್ಟಿಯೊಂದನ್ನು ಸಿದ್ಧಪಡಿಸಿದೆ .

ಅಂದಹಾಗೆ ಭಾರತ -ಚೀನಾ ಗಡಿಯಲ್ಲಿ ಚೀನಾದ ಉದ್ಧಟತನ ಹೆಚ್ಚುತ್ತಿರುವುದರಿಂದ ಮತ್ತು ಇತ್ತೀಚೆಗೆ ಪ್ರಧಾನಿ ಮೋದಿ ಅವರು, ಸ್ವದೇಶಿ ವಸ್ತುಗಳನ್ನು ಬಳಸುವಂತೆ ಕರೆ ನೀಡಿದ ಹಿನ್ನೆಲೆಯಲ್ಲಿ ಸಿಎಐಟಿಯ ಈ ನಿರ್ಣಯ ಮಹತ್ವ  ತೀರ್ಮಾನವನ್ನು ಈಗಾಗಲೇ ನಡೆಸಿದೆ ಚೀನಾದಲ್ಲಿ ತಯಾರಿಸುತ್ತಿದ್ದ ಉತ್ಪಾದನೆಯನ್ನು ಇಲ್ಲೇ ತಯಾರಿಸಿ  ಬೇರೆ ದೇಶಗಳಿಗು ರಫ್ತು ಮಾಡವಷ್ಟು ಬೆಳೆಯಬೇಕಾಗಿದೆ ಎಂದು  ಒಕ್ಕೂಟ ನಿರ್ಧರಿಸಿದೆ.ಒಕ್ಕೂಟದಲ್ಲಿ ದೇಶದ 7 ಕೋಟಿ ವ್ಯಾಪಾರಿಗಳಿದ್ದು, 40 ಸಾವಿರ ವ್ಯಾಪಾರಿ ಸಂಘಗಳು ಸದಸ್ಯರಾಗಿವೆ. ಇವರೆಲ್ಲರೂ ಚೀನಿ ವಸ್ತುಗಳ ಮಾರಾಟ ನಿಲ್ಲಿಸಿದರೆ, ಸ್ವದೇಶಿ ಆಂದೋಲನಕ್ಕೆ ದೊಡ್ಡ ಬೆಂಬಲ ಸಿಗಲಿದೆ.

ಇನ್ನು ಈ ಬಗ್ಗೆ ವಿವರ ನೀಡಿದ ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್, ನಮ್ಮ ಆಂದೋಲನಕ್ಕೆ ಭಾರತದ ವಸ್ತು ನಮ್ಮ ಹೆಮ್ಮೆ ಎಂದು ಹೆಸರಿಡಲಾಗಿದೆ. ಈ ಆಂದೋಲನದ ಮೂಲಕ ಡಿಸೆಂಬರ್ 2021ರ ವೇಳೆಗೆ ರೂ.1 ಲಕ್ಷ ಕೋಟಿ ಮೌಲ್ಯದ ವಸ್ತುಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುವುದನ್ನು ತಡೆಯುವ ಸಂಕಲ್ಪ ವನ್ನು ಒಕ್ಕೂಟ ಮಾಡಿದೆ.

Exit mobile version