ಅಡಿಕೆ ಬೆಳೆಗಾರರಿಗೆ ಸಿಹಿಸುದ್ಧಿ

ಶಿವಮೊಗ್ಗಅ 14: ಅಡಿಕೆ ಬೆಳೆಗಾರರಿಗೆ ಇನ್ನೊಂದು ಸಿಹಿಸುದ್ದಿ. ಅಡಿಕೆಯಿಂದ ಈ ಹಿಂದೆ ಟೀ ತಯಾರಿಸುವ ಮೂಲಕ ದೇಶದ ಗಮನ ಸೆಳೆದಿದ್ದ ಮಂಡಗದ್ದೆಯ ಯುವ ಉದ್ಯಮಿ ನೆಂಪೆ ನಿವೇದನ್‌ ಅವರು, ಇದೀಗ ಅಡಿಕೆ ಶಾಂಪೂ ಸಂಶೋಧಿಸಿದ್ದಾರೆ. ಇದು ಅಡಿಕೆ ಬೆಳಗಾರರಲ್ಲಿ ಹೊಸ ಉಲ್ಲಾಸ ಮೂಡಿಸಿದ್ದು, ಅಡಿಕೆಯ ಬೆಲೆ ಮತ್ತಷ್ಟು ಹೆಚ್ಚುವ ನಿರೀಕ್ಷೆಯಾಲಲಿದ್ದಾರೆ ಅಡಿಕೆ ಬೆಳೆಗಾರರು.

ಅಡಿಕೆ ಶುಭ ಕಾರ್ಯಗಳಲ್ಲಿ ಮಾತ್ರವಲ್ಲದೆ ಶ್ರೇಷ್ಠ ಔಷಧೀಯ ಗುಣಗಳಿಂದ ಕೂಡಿದೆ. ಹಲವಾರು ರೋಗಗಳಿಗೆ ಸಂಬಂಧಿಸಿದಂತೆ ಅಡಿಕೆಯಿಂದ ಚೂರ್ಣ, ಕಷಾಯ, ಚಾಕಲೇಟು ಮುಂತಾದವುಗಳನ್ನು ತಯಾರಿಸಿರುವುದು ನಮಗೆಲ್ಲಾ ತಿಳಿದಿರುವ ಸಂಗತಿ. ಆದರೆ ಇದೀಗ ಯುವ ಸಂಶೋಧಕ ನಿವೇದನ್‌, ಚಾಲಿ ಅಡಿಕೆಯಲ್ಲಿ praline ಎಂಬ anti-aging ಇದ್ದು, ಇದು ದೇಹದಲ್ಲಿನ ಸುಕ್ಕನ್ನು ಕಡಿಮೆ ಮಾಡುತ್ತದೆ. ಗ್ಯಾಲಿಕ್‌ ಆಸಿಡ್ ಎಂಬ anti- fungal ಇದ್ದು, ವಿಷಕಾರಿ ಅಂಶಗಳನ್ನು ನಾಶ ಮಾಡುತ್ತದೆ. ಈ ಅಂಶಗಳನ್ನು ಅಡಕೆಯಿಂದ ಪ್ರತ್ಯೇಕಿಸಿ ಶಾಂಪೂ ತಯಾರಿಸಲು ಸಾಧ್ಯ ಎಂದಿದ್ದಾರೆ.

ಅನೇಕ ಅಡಿಕೆ ಬೆಳೆಗಾರರು ರಾಜ್ಯದಲ್ಲಿ ಗುಟ್ಕಾ ನಿಷೇಧದ ಭೀತಿ ಎದುರಿಸುತ್ತಿರುವ ಬೆನ್ನೆಲ್ಲೇ ಅಡಿಕೆಯಿಂದ ಶಾಂಪೂ ತಯಾರಾಗುತ್ತಿರುವುದು, ಅಡಿಕೆ ಬೆಳೆಗಾರರಿಗೆ ಸಂತೋಷದ ಸಂಗತಿ ಎಂದರೆ ತಪ್ಪಾಗಲಾರದು.

Exit mobile version