Hassan: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪೆನ್ಡ್ರೈವ್ ಪ್ರಕರಣಕ್ಕೆ (Sex Scandal Pen drive Case) ಸಂಬಂಧಿಸಿದಂತೆ (Prajwal Revanna Case-Big Twist)
ಹಲವು ತಿರುವುಗಳು ಸಿಕ್ಕಿವೆ. 6 ತಿಂಗಳ ಹಿಂದೆಯೇ ಜಿಲ್ಲೆಯಲ್ಲಿ ಪೆನ್ಡ್ರೈವ್ ಸದ್ದು ಮಾಡಿತ್ತು. ಆದರೆ, ಈಗ ಬಿಡುಗಡೆ ಮಾಡಿದ್ದು ಯಾರೆಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಆದರೆ ಮಾಜಿ ಕಾರು ಚಾಲಕ
ಕಾರ್ತೀಕ್ ಮೇಲೆ ಬಲವಾದ ಅನುಮಾನ ಮೂಡಿದೆ. ಅದರ ಬೆನ್ನಲ್ಲೇ ಇದೀಗ (Prajwal Revanna Case-Big Twist) ಡ್ರೈವರ್ ಕಾರ್ತೀಕ್ (Driver Karthik) ನಾಪತ್ತೆಯಾಗಿದ್ದಾನೆ.
ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರ ಮೊಬೈಲ್ನಿಂದ ವೀಡಿಯೋ ಲೀಕ್ ಆಗಿದ್ದೇ ರೋಚಕವಾಗಿದೆ.
ಹೌದು. ಪ್ರಜ್ವಲ್ ರೇವಣ್ಣ ಮೊಬೈಲ್ನಿಂದ ವೀಡಿಯೋ ಎಗರಿಸಿದ್ದೇ ಕಾರ್ತಿಕ್ ಎಂಬುದಾಗಿ ಇದೀಗ ಬಯಲಾಗಿದೆ. ಕಾರು ಚಾಲಕನಾಗಿದ್ದರೂ ಕಾರ್ತಿಕ್ ಮತ್ತು ಪ್ರಜ್ವಲ್ ಸ್ನೇಹಿತರ ರೀತಿ ಇದ್ದರು. ಪ್ರಜ್ವಲ್
ಮೊಬೈಲ್ನಲ್ಲಿ ವೀಡಿಯೋ ಇರೋದು ಕಾರ್ತಿಕ್ ಗಮನಕ್ಕೆ ಬಂದಿದೆ. ವೀಡಿಯೋ ಕಳುಹಿಸಿಕೊಳ್ಳಲು ಕಾರ್ತಿಕ್ ಹೊಸ ಮೊಬೈಲ್ ಖರೀದಿ ಮಾಡಿದ್ದಾರೆ. 1.45 ಲಕ್ಷ ಕೊಟ್ಟು ಆಪಲ್ ಮೊಬೈಲ್
(Apple Mobile) ಖರೀದಿಸಿದ್ದಾರೆ.
ಇತ್ತ ಪ್ರಜ್ವಲ್ ಫೋನ್ ಪಾಸ್ ವರ್ಡ್ (Phone Password) ತಿಳಿದುಕೊಂಡಿದ್ದ ಕಾರ್ತಿಕ್, ಕಾರಿನಲ್ಲಿ ಪ್ರಜ್ವಲ್ ರೇವಣ್ಣ ನಿದ್ರೆಗೆ ಜಾರಿದ್ದಾಗ ಏರ್ ಡ್ರಾಪ್ ಮೂಲಕ ಎಲ್ಲಾ ವೀಡಿಯೋಗಳನ್ನು ತನ್ನ ಹೊಸ
ಮೊಬೈಲ್ಗೆ ಕಳುಹಿಸಿಕೊಂಡಿದ್ದಾರೆ. ಆದರೆ 2976 ಅಶ್ಲೀಲ ವಿಡಿಯೋ ದೃಶ್ಯಾವಳಿ ಇವೆ ಎನ್ನಲಾದ ಪೆನ್ಡ್ರೈವ್ ಅನ್ನು ವಕೀಲ ದೇವರಾಜೇಗೌಡನಿಗೆ (Devaraje Gowda) ನೀಡಿದ್ದೆ ಎಂದು ಸಂಸದ ಪ್ರಜ್ವಲ್
ರೇವಣ್ಣನ ಕಾರಿನ ಮಾಜಿ ಚಾಲಕ ಕಾರ್ತಿಕ್ ನಿಗೂಢ ಸ್ಥಳದಲ್ಲಿ ಕುಳಿತು ಬಿಡುಗಡೆ ಮಾಡಿ ಕಣ್ಮರೆ ಅಗಿದ್ದಾರೆ ಎನ್ನಲಾಗುತ್ತಿದೆ.
ಇದನ್ನು ಓದಿ: ರಾಜಕೀಯಕ್ಕಾಗಿ ಸುಳ್ಳು ಹೇಳುವುದು ಸಿಎಂ ಸಿದ್ಧರಾಮಯ್ಯಗೆ ಶೋಭೆತರುವುದಿಲ್ಲ ಎಂದು ವಾಗ್ದಾಳಿ ನಡೆಸಿದ ಜಿಟಿ ದೇವೇಗೌಡ