ಅನಿರೀಕ್ಷಿತ ಏರಿಕೆ ಕಂಡ ಭಾರತದ ಜಿಡಿಪಿ ದರ

ನವದೆಹಲಿ, ನ. 28: ಕೊರೊನಾದಿಂದ ತತ್ತರಿಸಿ ಹೋಗಿದ್ದ ದೇಶದ ಆರ್ಥಿಕತೆಯು ನಿರೀಕ್ಷೆಗಿಂತ ವೇಗವಾಗಿ ಚೇತರಿಸಿಕೊಳ್ಳುತ್ತಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಎರಡನೇ ತ್ರೈಮಾಸಿಕ ಆರ್ಥಿಕಾಭಿವೃದ್ಧಿ ನಿನ್ನೆಯಷ್ಟೇ ಪ್ರಕಟಗೊಂಡಿದ್ದು, -7.5ರಷ್ಟು ಋಣಾತ್ಮಕ ಬೆಳವಣಿಗೆ ದರ ದಾಖಲಾಗಿದೆ.

ಮೊದಲ ತ್ರೈಮಾಸಿಕದಲ್ಲಿ ಆರ್ಥಿಕತೆ -23.7ರಷ್ಟು ಭಾರೀ ಕುಸಿತ ಕಂಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಲಾಗಿತ್ತು. ಹೀಗಾಗಿ ಕೊರೋನಾ ಲಾಕ್‌ಡೌನ್‌ನಿಂದಾಗಿ  ಕೋಟ್ಯಾಂತರ ಉದ್ಯೋಗ, ವಹಿವಾಟು ನಷ್ಟ ಮುಂತಾದ ಸಮಸ್ಯೆಗಳನ್ನು ಎದುರಿಸಿದ್ದ ದೇಶ ಮತ್ತೆ ಅಭಿವೃದ್ಧಿ ಪಥದಲ್ಲಿ ದಿಟ್ಟ ಹೆಜ್ಜೆ ಇಡುತ್ತಿರುವುದು ಸಾಬೀತಾಗಿದೆ ಎಂದು ವಿಶ್ಲೇಷಿಸಲಾಗಿದೆ. ಕೃಷಿ, ಉತ್ಪಾದನೆ , ನಿರ್ಮಾಣ ವಲಯದಲ್ಲಿ ಕಂಡುಬಂದ ಉತ್ತಮ ಚೇತರಿಕೆ ಒಟ್ಟಾರೆ ಆರ್ಥಿಕ ಪ್ರಗತಿ ದರ ಏರಿಕೆಗೆ ಕಾರಣವಾಗಿದೆ.

ಆದರೆ ಸತತ ಎರಡನೇ ತ್ರೈಮಾಸಿಕದಲ್ಲಿ ಆರ್ಥಿಕ ಕುಸಿತದ ಪರಿಣಾಮ ಭಾರತ ತನ್ನ ಇತಿಹಾಸಲದಲ್ಲೇ ಮೊದಲ ಬಾರಿಗೆ ತಾಂತ್ರಿಕವಾಗಿ ‘ಆರ್ಥಿಕ ಹಿಂಜರಿಕೆ’ ದಾಖಲಿಸಿದಂತೆ ಆಗಿದೆ. ಕೇಂದ್ರ ಸಾಂಖ್ಯಿಕ ಸಚಿವಾಲಯ ಜಿಡೆಪಿ ಕುರಿತ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ.  

Exit mobile version