ಘೋರ ದುರಂತ ! ತ್ಯಾಜ್ಯ ತಿಂದು ಸಾವನ್ನಪ್ಪಿವೆ 20 ಆನೆಗಳು

Elephant-Sri Lanka

ಅನ್ನಕ್ಕಾಗಿ ಅಲೆದಾಡಿ ಕೊನೆಗೆ ತ್ಯಾಜ್ಯ ತಿಂದ್ರು
ತ್ಯಾಜ್ಯ ತಿಂದು 20 ಆನೆಗಳ ಮಾರಣ ಹೋಮ
ಮನುಷ್ಯನ ದುರಾಸೆ ಬಲಿಯಾದವು ಮುಗ್ಧ ಜೀವಗಳು

ಕಾಡು ನಾಶ ಆಗ್ತಿವೆ ನಾಡು ಬೆಳೀತಿವೆ. ನಾಡು ಬೆಳೀತಿವೆ ಅಂದ್ರೆ ಅಲ್ಲಿ ತ್ಯಾಜ್ಯ ಬೆಳೆಯಲೇ ಬೇಕು. ಆದ್ರೆ ತ್ಯಾಜ್ಯ ವಿಲೇವಾರಿ ಹೇಗೆ? ಸ್ವಾರ್ಥಿ ಮನುಷ್ಯ ತನ್ನ ಕೊಳಕನ್ನು ತೊಡೆದು ಹಾಕಲು ಹುಡುಕೋದು ಕಾಡನ್ನೇ. ಹೌದು ಕಾಡಿನ ಅಂಚುಗಳನ್ನು ತ್ಯಾಜ್ಯ ಸಂಗ್ರಹಿಸೋ ಜಾಗಗಳನ್ನಾಗಿ ಮಾಡಿ ಇವತ್ತು ಪರಿಸರಕ್ಕೆ ದೊಡ್ಡ ಕಂಟಕವನ್ನೇ ತಂದಿದ್ದಾನೆ. ಕಾಡಿನ ಅಂಚಿನಲ್ಲಿ ಕಸವನ್ನು ರಾಶಿ ಹಾಕಿ ಕಾಡು ಪ್ರಾಣಿಗಳಿಗೆ ಮರಣ ಶಾಸನ ಬರೆಯುತ್ತಿದ್ದಾರೆ.
ಇಪ್ಪತ್ತು ಆನೆಗಳು ಬಲಿ!: ಹೌದು ಕಾಡು ನಾಶ ಆಗ್ತಿವೆ. ಕಾಡಿನ ಪ್ರಾಣಿಗಳು ತಿನ್ನಲು ಸರಿಯಾಗಿ ಆಹಾರ ಸಿಗುತ್ತಿಲ್ಲ. ಪರಿಣಾಮ ಅವು ಆಹಾರ ಹುಡುಕುತ್ತಾ ನಾಡಿಗೆ ಬರುತ್ತಿವೆ. ಇದೇ ರೀತಿ ಕಾಡಲ್ಲಿ ಆಹಾರ ಸಿಗದಿದ್ದಾಗ ನಾಡಿಗೆ ಬಂದ ಆನೆಗಳ ಪಡೆಗೆ ಕಂಡಿದ್ದು ಕಾಡಂಚಿನಲ್ಲಿರುವ ತ್ಯಾಜ್ಯದ ರಾಶಿ. ಮೊದಲೇ ಹಸಿವಿನಿಂದ ಬಳಲುತ್ತಿದ್ದ ಗಜಪಡೆ ಬಕ ಬಕನೇ ತ್ಯಾಜ್ಯವನ್ನು ತಿಂದಿದ್ದಾವೆ. ಪಾಪ ಅವುಗಳು ಪ್ಲಾಸ್ಟಿಕ್ ಎನ್ನದೆ ಎಲ್ಲವನ್ನು ತಿಂದು ಬಿಟ್ಟಿದ್ದಾವೆ. ಆದ್ರೆ ಆ ಬಳಿಕ ಗಜಪಡೆಯ ಹತ್ತು ಆನೆಗಳು ತಿಂದ ತ್ಯಾಜ್ಯ ಕರಗಿಸಲಾಗದೆ ಪ್ರಾಣವನ್ನು ಬಿಟ್ಟಿದ್ದಾವೆ.
ಘಟನೆ ನಡೆದಿದ್ದು ಎಲ್ಲಿ? ಈ ಘಟನೆ ನಡೆದಿದ್ದು ಎಲ್ಲಿ ಗೊತ್ತಾ? ಶ್ರೀಲಂಕಾದಲ್ಲಿ. ಶ್ರೀಲಂಕಾದ ಅಂಪಾರದ ಪಾಲಕ್ಕಾಡು ಎಂಬಲ್ಲಿ ನಡೆದಿದೆ. ಇಲ್ಲಿನ ಕಾಡುಗಳ ಸುತ್ತಮುತ್ತ ಸಾಕಷ್ಟು ಕಸ ಹಾಕೋ ಡಂಪಿಂಗ್ ಯಾರ್ಡ್‌ಗಳಿವೆ. ಹಾಗಾಗಿ ಆನೆಗಳು ಆಹಾರ ಹುಡುಕುತ್ತಾ ಇದೇ ಡಂಪಿಂಗ್ ಯಾರ್ಡ್‌ ಬಳಿ ಬರುತ್ತವೆ. ಸುಲಭವಾಗಿ ಆಹಾರ ಸಿಗುತ್ತವೆ ಅಂತ ಹೇಳಿ ಕಂಡಿದ್ದನ್ನೆಲ್ಲಾ ತಿಂದು ಬಿಡುತ್ತವೆ. ಪಾಪ ಈ ಮೂಕ ಪ್ರಾಣಿಗಳಿಗೇನು ಗೊತ್ತಾಗುತ್ತೆ ತಾವು ತಿನ್ನುತ್ತಿರುವುದು ವಿಷ ಅಂತ. ಕಂಡಿದ್ದನ್ನೆಲ್ಲಾ ತಿಂದು ಪ್ರಾಣಕ್ಕೆ ಸಂಚಕಾರ ತರುತ್ತಿವೆ. ಪಾಲಕ್ಕಾಡು ಎಂಬ ಈ ಗ್ರಾಮದ ಬಳಿ ಎಂಟು ವರ್ಷದ ಅವಧಿಯಲ್ಲಿ ಸುಮಾರು ೨೦ ಕಾಡಾನೆಗಳು ಮೃತಪಟ್ಟಿವೆ. ಅವು ಮೃತಪಟ್ಟಿರುವುದು ತ್ಯಾಜ್ಯವನ್ನು ಸೇವಿಸಿ ಎಂಬುದು ಅತ್ಯಂತ ಆಘಾತಕಾರಿ ಸಂಗತಿ. ಕಾಡಿನೊಳಗೆ ತ್ಯಾಜ್ಯವನ್ನು ಸರ್ಕಾರ ಸುರಿದಿದ್ದು, ಇದೇ ತ್ಯಾಜ್ಯವನ್ನು ಸೇವಿಸಿ ಆನೆಗಳು ಮೃತಪಟ್ಟಿವೆ.
ಆನೆಯ ಹೊಟ್ಟೆಯಲ್ಲಿ ಕೆಜಿಗಟ್ಟಲೇ ಪ್ಲಾಸ್ಟಿಕ್: ವಾರದ ಹಿಂದೆ ಎರಡು ಆನೆಗಳು ಮೃತಪಟ್ಟಿರುವುದು ಆತಂಕಕ್ಕೀಡು ಮಾಡಿದೆ. ಮರಣೋತ್ತರ ಪರೀಕ್ಷೆ ನಡೆಸಿದಾಗ ಅವುಗಳ ಹೊಟ್ಟೆಯಲ್ಲಿ ಇದ್ದದ್ದು, ಕೆಜಿಗಟ್ಟಲೇ ಪ್ಲಾಸ್ಟಿಕ್. ಶ್ರೀಲಂಕಾದಲ್ಲಿ ನೂರಾರು ಡಂಪಿಂಗ್ ಯಾರ್ಡ್‌ಗಳಿವೆ. ಅವುಗಳಲ್ಲಿ ಸುಮಾರು ೫೪ ತ್ಯಾಜ್ಯ ಡಂಪಿಂಗ್ ಪ್ರದೇಶಗಳು ವನ್ಯಜೀವಿ ವಲಯಗಳ ಸಮೀಪದಲ್ಲಿವೆ. ಸುಮಾರು ೩೦೦ ಆನೆಗಳು ಈ ತ್ಯಾಜ್ಯ ಸಂಗ್ರಹಣಾ ಕೇಂದ್ರಗಳ ಬಳಿಯೇ ಸುತ್ತಾಡುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಗ್ರಾಮದಲ್ಲಿ ಕಳೆದ ಎಂಟು ವರ್ಷದಲ್ಲಿ ಮೂವತ್ತಕ್ಕೂ ಹೆಚ್ಚು ಆನೆಗಳು ಸಾವನ್ನಪ್ಪಿವೆ. ದುರಂತ ನೋಡಿ ಒಂದು ಅಂಕಿ ಅಂಶಗಳ ಪ್ರಕಾರ ಶ್ರೀಲಂಕಾದಲ್ಲಿ ೧೯ನೇ ಶತಮಾನದಲ್ಲಿ ೧೪ ಸಾವಿರ ಇದ್ದ ಆನೆಗಳ ಸಂತತಿ ೨೦೧೧ರ ವೇಳೆಗೆ ಬರೀ ಆರು ಸಾವಿರಕ್ಕೆ ಇಳಿದಿದೆ. ಇದು ಮಹಾ ದುರಂತ ಅಲ್ಲದೆ ಇನ್ನೇನು? ಶ್ರೀಲಂಕಾದ ಕಾಡಂಚಿನಲ್ಲಿ ಇಂಥಾ ಐವತ್ತಕ್ಕೂ ಹೆಚ್ಚು ಡಪಿಂಗ್ ಯಾರ್ಡ್ಗಳಿವೆ. ಇದರು ಕಾಡು ಪ್ರಾಣಿಗಳಿಗೆ ಪಕ್ಷಿಗಳಿಗೆ ಇಡೀ ಜೀವ ಸಂಕುಲಗಳಿಗೆ ಮರಣ ಶಾಸನವಾಗಿ ಮಾರ್ಪಟ್ಟಿದೆ.
ಶ್ರೀಲಂಕಾದ ಈ ದುರಂತ ನಮ್ಮ ಭಾರತೀಯರಿಗೂ ಪಾಠವಾಗಬೇಕು. ನಮ್ಮಲ್ಲೂ ಕಾಡಂಚಿನಲ್ಲಿ ತ್ಯಾಜ್ಯ ಬೀಸಾಡುವ ಪ್ರವೃತ್ತಿ ದಿನೇ ದಿನೇ ಹೆಚ್ಚುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಾಗಿದೆ. ಮನುಷ್ಯನಂತೆ ಭೂಮಿಯ ಮೇಲಿನ ಎಲ್ಲಾ ಪ್ರಾಣಿಗಳಿಗೂ ಬದುಕುವ ಹಕ್ಕಿದೆ. ತಮ್ಮ ತಮ್ಮ ಆವಾಸ ಸ್ಥಾನಗಳಲ್ಲಿ ನೆಮ್ಮದಿಯಿಂದ ಬದುಕುವ ಪ್ರಾಣಿಗಳ ಸ್ವಾತಂತ್ರ‍್ಯವನ್ನು ಮನುಷ್ಯ ಬಲವಂತವಾಗಿ ಕಿತ್ತುಕೊಳ್ಳುವ ಆರಂಭವಾಗಿ ಶತಮಾನಗಳೇ ಕಳೆದಿವೆ. ಅಷ್ಟು ಮಾತ್ರವಲ್ಲದೇ ಭೂಮಿಯನ್ನು ವಿಷದ ತಟ್ಟೆಯನ್ನಾಗಿ ಮಾರ್ಪಾಡು ಮಾಡಿ, ಪ್ರಾಣಿಗಳ ಜೀವಕ್ಕೂ ಸಂಚಕಾರ ತರುತ್ತಿದ್ದಾನೆ.

Exit mobile version