ಅಪಾರ್ಟ್‌ಮೆಂಟ್‌ಗೆ ಬಲಿಯಾಯ್ತು ರೈತರ ಬದುಕು

Govt housing scheme destroyed tavarekere people |  citizen journalist | vijayatimes

ಬೆಂಗಳೂರು ದಕ್ಷಿಣ ತಾವರೆಕೆರೆ ಹೋಬಳಿಯ ಮುದ್ದನಪಾಳ್ಯದಲ್ಲಿರುವ ೬೦ ಎಕರೆ ಪ್ರದೇಶದಲ್ಲಿ ರಾಜೀವಗಾಂಧಿ ಯೋಜನೆಯಡಿಯಲ್ಲಿ ನಡೆಯುತ್ತಿರುವ  ಅಪಾರ್ಟ್‌ಮೆಂಟ್

 ಅಪಾರ್ಟ್‌ ನಿರ್ಮಾಣ ಕಾರ್ಯ ಈಗ ಇಲ್ಲಿನ ಜನರ ನೆಮ್ಮದಿಯನ್ನೇ ಹಾಳು ಮಾಡಿದೆ. ಇಲ್ಲಿನ ಸುತ್ತಮುತ್ತಲಿನ ಜನರಿಗೆ ಈ ಗೋಮಾಳ ಜಾಗ ಜೀವನಾಧಾರವಾಗಿತ್ತು. ಆದ್ರೆ ಸರ್ಕಾರ ಕೆಲವೇ ಕೆಲವರಿಗೆ ಅನುಕೂಲ ಮಾಡಲು ಅನೇಕರಿಗೆ ತೊಂದರೆ ಕೊಡುತ್ತಿದೆ,

 ಈ ಜಾಗ ಸರ್ಕಾರಿ ಗೋಮಾಳವಾಗಿದ್ದರಿಂದ  ಕೃಷಿಗಾಗಿ ಈ ಭೂಮಿಯನ್ನು ತಮಗೆ ನೀಡಿ ಅಂತ ಸರಕಾರಕ್ಕೆ ಅನೇಕ ಸಲ ರೈತರು ಅರ್ಜಿ ಸಲ್ಲಿಸಿದ್ದರು. ಆದ್ರೆ ರೈತರಿಗೆ ಒಂದಿಂಚು ಭೂಮಿಯನ್ನೂ ನೀಡದೆ ಅರ್ಜಿಗಳನ್ನು ತಿರಸ್ಕರಿಸಿತ್ತು.  ಆದರೆ ಇದೀಗ ರಾಜೀವ್‌ಗಾಂಧಿ  ವಸತಿ ಇಲಾಖೆಗೆ ಈ ಭೂಮಿಯನ್ನು ನೀಡಿದ್ದು ಇಲ್ಲಿ ವಸತಿ ನಿರ್ಮಾಣದ ಕಾರ್ಯವನ್ನು ಮಾಡಲು ಪ್ರಾರಂಭಿಸಿದ್ದರಿಂದ ಅನೇಕ ಕಷ್ಟ ನಷ್ಟಗಳು ಎದುರಾಗುತ್ತಿವೆ.

ಈ ಪ್ರಾಜೆಕ್ಟ್‌ನಿಂದ ಪ್ರಕೃತಿ ಮಾತೆಯ ಮೇಲೆ ದಾಳಿಯಾಗುತ್ತಿದೆ. ಒಂದು ವೇಳೆ  ಈ ಭೂಮಿಯನ್ನು ರೈತಾಪಿ ವರ್ಗಕ್ಕೆ ನೀಡುತ್ತಿದ್ದರೆ ಪ್ರಕೃತಿ ಮಡಿಲಲ್ಲಿ ಮಾನವನ  ಜೊತೆ ಬೇರೆಲ್ಲಾ ಜೀವ ಜಂತುಗಳೂ  ಪ್ರಾಣಿ ಪಕ್ಷಿಗಳೂ  ಖುಷಿ ಖುಷಿಯಾಗಿ ಬದುಕುತ್ತಿದ್ದವು.ಅನೇಕ ಜೀವ ಜಂತುಗಳಿಗೆ ಆಶ್ರಯವಾಗಿದ್ದ ಬೆಟ್ಟ ಗುಡ್ಡಗಳನ್ನು ಈಗ ಒಡೆಯಲಾಗುತ್ತಿದೆ.  ಇದರಿಂದಾಗಿ  ಪ್ರಾಣಿಗಳು ಮೇವಿಲ್ಲದೆ ನಾಡಿಗೆ ಬಂದು ತೊಂದರೆ ಕೊಡುತ್ತಿವೆ. ಬೇರೆಯವರ ಜೀವನ ಹಾಳು ಮಾಡುತ್ತಿದ್ದಾನೆ ಅಂತಾರೆ ಇವರು. 

ಈ ಪರಿಸರದಲ್ಲಿ ಒಂದು ಕೆರೆ ಇದೆ, ಅದೂ ಮುಚ್ಚಿ ಹೋಗುತ್ತಿದೆ. ಇಲ್ಲಿ ಪುರಾತನ ಕಾಲದ ಸಿದ್ಧೇಶ್ವರ  ಸ್ವಾಮಿ ದೇವಾಲಯ ಹಾಗೂ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ ದೇವಾಲಯವಿದ್ದು ಅದಕ್ಕೂ ಹಾನಿಯಾಗುತ್ತಿದೆ.  ಹರಿಸುತ್ತಿಲ್ಲ. ಯಾವ ಪರಿಹಾರವನ್ನೂ ಜನರಿಗೆ ನೀಡುತ್ತಿಲ್ಲ ಎಂಬುದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇಲ್ಲಿನ ನಿವಾಸಿಗಳು ದೂಳಿನ ಗಾಳಿ ಸೇವಿಸಿ ನಾನಾ ರೋಗಗಳಿಗೆ ತುತ್ತಾಗುತ್ತಿದ್ದಾರೆ.  ಅಲ್ಲದೆ ಅಪಾರ್ಟ್‌ಮೆಂಟ್‌ ಕಟ್ಟೋ ಜಾಗದಲ್ಲಿ ಭಯಾನಕ ಸ್ಫೋಟ ಮಾಡುತ್ತಿರುವುದರಿಂದ ಮನೆಗಳೆಲ್ಲಾ ಬಿರುಕು ಬಿಟ್ಟಿವೆ. ಅಲ್ಲದೆ ತಮ್ಮ ಮನೆ ಯಾವಾಗ ಬಿದ್ದು ಹೋಗುತ್ತೆ  ಅನ್ನೋ ಆತಂಕದಲ್ಲೇ ದಿನ ಕಳೆಯುತ್ತಿದ್ದಾರೆ.

ಸರಕಾರದ ಈ ಧೋರಣೆಯ ವಿರುದ್ದ ಈ ಪ್ರದೇಶದ ಜನರು ಹೋರಾಟಕ್ಕೆ ತಯಾರಾಗಿದ್ದಾರೆ ಇಲ್ಲಿ ಅಪಾರ್ಟ್ಮೆಂಟನ್ನು ಮಾಡದಂತೆ ಸಾರ್ವಜನಿಕರು ದನಿಎತ್ತಲು ಮುಂದಾಗಿದ್ದಾರೆ . ಇಲ್ಲಿನ ಜನರ ಸಂಕಷ್ಟಗಳನ್ನು ಹಾಗೂ ಪ್ರಕೃತಿ ನಾಶದ ಮೇಲೆ ತಮಗಾಗುತ್ತಿರುವ ನೋವು ಹಾಗೂ  ಅನ್ಯಾಯದ ಬಗ್ಗೆ  ಸಾರ್ವಜನಿಕರ   ಮನವಿಗೆ  ಅಧಿಕಾರಿಗಳು ಸ್ಪಂದಿಸಲಿ ಎಂಬುದು ವಿಜಯಾ ಟೈಮ್ಸ್ ಆಶಯವಾಗಿದೆ.

ಬೆಂಗಳೂರು ಮುದ್ದನಪಾಳಯದಿಂದ ಸಿಟಿಜನ್ ಜರ್ನಲಿಸ್ಟ್ ಬಸವರಾಜು.

Exit mobile version