ಆಕ್ಸ್‌ಫರ್ಡ್‌ನಿಂದ ಲಭಿಸಿದೆ ಕೊರೊನಾ ಲಸಿಕೆ!

ಬೆಂಗಳೂರು, ನ. 19: ಕೊರೋನಾ ಲಸಿಕೆಗಾಗಿ ಅನೇಕ ದೇಶಗಳು ಪ್ರಯತ್ನ ಪಡುತ್ತಿದ್ದು ಇದೀಗ ಆಸ್ಟ್ರಾ-ಆಕ್ಸ್ಫರ್ಢ್ ಮುಂಚೂಣಿಯಲ್ಲಿದೆ. ತಾತ್ಕಾಲಿಕವಾಗಿ ಪ್ರಯೋಗ  ಸ್ಥಗಿತಗೊಂಡಿದ್ದ ಈ ಲಸಿಕೆ ಇದೀಗ ಅಮೆರಿಕಾದಲ್ಲಿ ಕೊನೆಯ ಹಂತದ ಪ್ರಯೋಗವನ್ನು ನಡೆಸುತಿದೆ. ಈ ಹಿಂದೆ ಜುಲೈಯಲ್ಲಿ ನಡೆಸಿದ ಲಸಿಕೆ ಫಲಿತಾಂಶಗಳು ಆಸ್ಟ್ರಾ-ಆಕ್ಸ್‌ಫರ್ಢ್ ಲಸಿಕೆ ಇನ್ನಷ್ಟು ಬರವಸೆಯನ್ನು ಹೆಚ್ಚಿಸಿದೆ.

ಕೊರೋನಾದಿಂದ ಗಂಭೀರವಾಗಿ ಬಳಲುತ್ತಿರುವ ವೃದ್ಧರು ಹಾಗೂ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ. ಜುಲೈನಲ್ಲಿ ನಡೆಸಿದ ಪ್ರಯೋಗದಲ್ಲಿ ಈ ಲಸಿಕೆ 18ರಿಂದ 55 ವರ್ಷ ಆರೋಗ್ಯವಂತ ಜನರಲ್ಲಿ ರೋಗನಿರೋಧಕ ಶಕ್ತಿಯನ್ನು ಇಮ್ಮಡಿಗೊಳಿಸುವಲ್ಲಿ ಯಶಸ್ವಿಯಾಗಿದೆ.

Exit mobile version