Bangalore: ಕೇಂದ್ರ ಸರ್ಕಾರ (Central Govt) ಜಾರಿಗೆ ತಂದಿದ್ದ ರಾಷ್ಟ್ರೀಯ ಶಿಕ್ಷಣ (National education) ನೀತಿಯ ಬದಲಾಗಿ, ರಾಜ್ಯ ಶಿಕ್ಷಣ (State education) ನೀತಿ ರೂಪಿಸಲು ಸಿದ್ದರಾಮಯ್ಯನವರ (Siddaramaiah’s) ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ನೇಮಸಿದ್ದ ರಾಜ್ಯ ಶಿಕ್ಷಣ ನೀತಿ ಆಯೋಗ ಮಧ್ಯಂತರ ವರದಿ ನೀಡಿದ್ದು, ಈ ವರದಿಯ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಲು ರಾಜ್ಯ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಈ ಆದೇಶದಂತೆ ರಾಜ್ಯ ಸರ್ಕಾರ 2024–25ನೇ ಸಾಲಿನಿಂದ 4 ವರ್ಷಗಳ ಪದವಿಯನ್ನು ರದ್ದುಗೊಳಿಸಿದೆ.
\
ಈ ಆದೇಶದ ಪ್ರಕಾರ, (order) ರಾಷ್ಟ್ರೀಯ ಶಿಕ್ಷಣ (National education) ನೀತಿ–2020 ಯಂತೆ ವಿವಿಧ ಹಂತದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ನಾಲ್ಕು ವರ್ಷಗಳ ಆನರ್ಸ್ ಪದವಿಗೆ (Honors Degree) ಪ್ರವೇಶ ಪಡೆಯಬಹುದು. ಕಾಲೇಜುಗಳ ಮೂಲಸೌಕರ್ಯಗಳನ್ನು (infrastructure) ಪರಿಗಣಿಸಿ, ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. 4ನೇ ವರ್ಷದ ಪದವಿಗೆ ಅಗತ್ಯವಾದ ಕಾಲೇಜುಗಳನ್ನು ವಿಶ್ವವಿದ್ಯಾಲಯಗಳು ಆಯ್ಕೆ ಮಾಡಿಕೊಳ್ಳಬೇಕು. ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ಕಾಲೇಜುಗಳಲ್ಲಿ ಕೋರ್ಸ್ ಲಭ್ಯವಿಲ್ಲದಿದ್ದರೆ, ಬೇರೆ ಕಾಲೇಜುಗಳಲ್ಲಿ (Collage) ಪ್ರವೇಶ ನೀಡಬೇಕು ಎಂದು ಸೂಚಿಸಲಾಗಿದೆ.
ಇನ್ನು 4 ವರ್ಷಗಳ (4 Years) ಆನರ್ಸ್ ಪದವಿ ಪಡೆದವರು ನಂತರ ಒಂದು ವರ್ಷದ ಏಕೀಕೃತ ಸ್ನಾತಕೋತ್ತರ ಪದವಿ ಪಡೆಯಬಹುದು. ಮೂರು ವರ್ಷದ ಪದವಿ ಪಡೆದರೆ, ಈ ಹಿಂದಿನಂತೆ 2 ವರ್ಷಗಳ ಸ್ನಾತಕೋತ್ತರ ಪದವಿಗೆ (Master’s degree) ಪ್ರವೇಶ ಪಡೆಯಬಹುದು. 4 ವರ್ಷಗಳ ಪದವಿ ರದ್ದು ಮಾಡಿದ್ದರೂ, ಮಧ್ಯಂತರದಲ್ಲೇ ಪದವಿ ತೊರೆದರೆ ಅವರು ವ್ಯಾಸಂಗ ಮಾಡಿದ ವರ್ಷಗಳ ಲೆಕ್ಕದಲ್ಲಿ ಕೋರ್ಸ್ ಪ್ರಮಾಣಪತ್ರ, ಡಿಪ್ಲೊಮಾ, ಪದವಿ ನೀಡುವ ಬಹು ಪ್ರವೇಶ–ನಿರ್ಗಮನ ಪದ್ಧತಿಯನ್ನು ರದ್ದು ಮಾಡಿಲ್ಲ.
ಈ ಎಲ್ಲ ನಿಯಮಗಳು 2021–22ನೇ ಸಾಲಿಗಿಂತ ಹಿಂದೆ ಇದ್ದ ರೀತಿಯೇ 2024–25ನೇ ಶೈಕ್ಷಣಿಕ ಸಾಲಿನಿಂದ (academic line) ಪ್ರವೇಶ ನಿಯಮಗಳು ಇರಲಿವೆ. 5 ಮತ್ತು 6ನೇ ಸೆಮಿಸ್ಟರ್ನಲ್ಲಿ ಒಂದು ವಿಷಯದಲ್ಲಿ ಪ್ರಾವೀಣ್ಯ ಪಡೆಯಲು ಅವಕಾಶ ನೀಡಲಾಗಿದೆ. ಪಠ್ಯಕ್ರಮ ರೂಪಿಸುವ ಹೊಣೆಗಾರಿಕೆಯನ್ನು ವಿಶ್ವವಿದ್ಯಾಲಯಗಳ ಅಧ್ಯಯನ (University studies) ಮಂಡಳಿಗಳಿಗೆ ನೀಡಲಾಗಿದೆ.