ಜನರ ಗುರುತು ಪತ್ತೆಗಾಗಿ ಆಧಾರ್ ಕಾರ್ಡ್ನ್ನು ನಿಭಾಯಿಸುತ್ತಿರುವ ಯುಐಡಿಎಐ ಜನತೆಗೆ ಹೊಸ ಸೌಲಭ್ಯವೊಂದನ್ನು ನೀಡಿದೆ. ಇದರ ಸಹಾಯದಿಂದ ದೇಶದ ಜನರಿಗೆ ತಮ್ಮ ನೋಂದಾಯಿತ ನಂಬರ್ನ್ನು ತಾವೇ ಪರಿಶೀಲನೆ ಮಾಡಬಹುದಾಗಿದೆ. ಹಾಗೂ ಇನ್ನೊಬ್ಬ ವ್ಯಕ್ತಿಯ ಗುರುತು ಪರಿಶೀಲನೆ ಮಾಡಲು ಕೂಡ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ.
UIDAI ವೆಬ್ಸೈಟ್(uidai.gov.in) ಗೆ ಭೇಟಿ ನೀಡಿ. ಅಲ್ಲಿರುವ ಸೇವೆಗಳ ವಿಭಾಗದಲ್ಲಿ ‘ಆಧಾರ್ ಸಂಖ್ಯೆಯನ್ನು ಪರಿಶೀಲಿಸಿ ನಿಮ್ಮ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಬಳಿಕ ಪರಿಶೀಲನೆ ಮಾಡಬೇಕಾದ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ. ಆಧಾರ್ ವೆಬ್ಸೈಟ್ನಲ್ಲಿ ಕೇಳಲಾಗುವ ಲಿಂಗ, ವಯಸ್ಸು, ಹೆಸರು ಹಾಗೂ ನೋಂದಾಯಿತ ಮೊಬೈಲ್ ಸಂಖ್ಯೆ ಹೀಗೆ ಕೇಳಿರುವ ಎಲ್ಲ ವಿವರಗಳನ್ನ ಒದಗಿಸಬೇಕು. ಬಳಿಕ ಆಧಾರ್ ನಂಬರ್ ಹೊಂದಿರುವ ವ್ಯಕ್ತಿಯ ಫೋಟೋ ನಿಮ್ಮ ಮೊಬೈಲ್ ಸ್ಕ್ರೀನ್ನಲ್ಲಿ ಕಾಣುತ್ತದೆ. ಅಲ್ಲದೆ ಆಧಾರ್ನಲ್ಲಿ “QR ಕೋಡ್ ಸ್ಕ್ಯಾನ್ ಅನ್ನು ನೀಡಲಾಗುತ್ತದೆ. ಇದನ್ನು ಸ್ಕ್ಯಾನ್ ಮಾಡುವ ಮೂಲಕ ವ್ಯಕ್ತಿಯ ಗುರುತು ಸತ್ಯವೋ ಸುಳ್ಳೋ ಎಂಬುದನ್ನು ನೀವು ಪತ್ತೆ ಹಚ್ಚಬಹುದಾಗಿದೆ. ಇದು ಗುರುತು ಪತ್ತೆಗೆ ಸುಲಭವಾಗಿದೆ.