ಆರ್‌. ಆರ್‌ ನಗರದಲ್ಲಿ ನ. 1ರಿಂದ 144 ಸೆಕ್ಷನ್‌ ಜಾರಿ

ಬೆಂಗಳೂರು, ಅ. 29 : ರಾಜರಾಜೇಶ್ವರಿನಗರ ಕ್ಷೇತ್ರದ ವಿಧಾನಸಭಾ ಉಪ ಚುನಾವಣೆಗೆ ನವೆಂಬರ್ 3ರಂದು ಮತದಾನ ನಡೆಯಲಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಕ್ಷೇತ್ರದ ವ್ಯಾಪ್ತಿಯಲ್ಲಿ ನವೆಂಬರ್ 1ರ ಸಂಜೆ 6 ಗಂಟೆಯಿಂದ ನವೆಂಬರ್ 4ರ ಸಂಜೆ 6 ಗಂಟೆಯವರೆಗೆ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಈ ಕುರಿತಂತೆ ಪೊಲೀಸ್ ಆಯುಕ್ತರು ಹಾಗೂ ಅಪರ ಜಿಲ್ಲಾ ದಂಡಾಧಿಕಾರಿಗಳಾಗಿರುವ ಕಮಲ್ ಪಂತ್ ಅವರು, ಆದೇಶ ಹೊರಡಿಸಿದ್ದು, ದಿನಾಂಕ 29-09-2020ರಂದು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ-154ರ ಉಪ ಚುನಾವಣೆಯ ಮತದಾನವನ್ನು ದಿನಾಂಕ 03-11-2020ಕ್ಕೆ ನಿಗದಪಡಿಸಿದ್ದು, ಮತ ಎಣಿಕೆ ಕಾರ್ಯವನ್ನು ದಿನಾಂಕ 10-11-2020ರಂದು ಹಮ್ಮಿಕೊಳ್ಳಲಾಗಿದೆ.

ಮತದಾನ ಪ್ರಕ್ರಿಯೆ ಸುಸೂತ್ರವಾಗಿ ನಡೆಸುವ ಸಲುವಾಗಿ, ಚುನಾವಣಾ ಆಯೋಗವು ಮತದಾನ ಮುಗಿಯುವ ಅವಧಿಯ ಹಿಂದಿನ 48 ಗಂಟೆಗಳು ಮತ್ತು ಮತದಾನ ಮುಗಿದ ನಂತ್ರದ 24 ಗಂಟೆಗಳ ಅವಧಿಯಲ್ಲಿ ಕಾನೂನು ಬಾಹಿರವಾಗಿ ಗುಂಪು ಸೇರುವುದನ್ನು ಹಾಗು ಸಭಎಗಳನ್ನು ನಡೆಸುವುದನ್ನು ನಿಷೇಧಿಸುವ ಹಿನ್ನಲೆಯಲ್ಲಿ ಸಿ ಆರ್ ಪಿ ಸಿ ಕಲಂ-144 ಅಡಿ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಲು ನಿರ್ದೇಶನ ನೀಡಿರುತ್ತಾರೆ.

Exit mobile version