ಆ ಆರ್ ಟಿಓ ಅಧಿಕಾರಿಗೆ ನಿಜಕ್ಕೂ ಅಂದು ಆಗಿದ್ದೇನು..?

ಬೆಂಗಳೂರು,ಸೆ.14: ಎರಡು ದಿನಗಳ ಹಿಂಸಷ್ಟೇ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ಭಾರೀ ಸದ್ದು ಮಾಡಿತ್ತು..ಆರ್ ಟಿಓ ಅಧಿಕಾರಿ ಮದ್ಯಪಾನ ಮಾಡಿ ಗಾಡಿ ಚಲಾಯಿಸಿ ಆಟೋಗೆ ಡಿಕ್ಕಿ ಹೊಡೆದಿರುವುದಾಗಿ, ಚಾಲಕನಿಗೆ ಗಾಯವಾಗಿರುವುದಾಗಿ ವಿಡಿಯೋ ಹರಿದಾಡಿದ್ದು, ಎಲ್ಲರ ಆಕ್ರೋಶಕ್ಕೆ ಗುರಿಯಾಗಿತ್ತು. ದುಬಾರಿ ದಂಡದಿಂದ ಮೊದಲೇ ಬೇಸತ್ತಿದ್ದ ಜನ ಈ ವಿಡಿಯೋವನ್ನು ನಂಬಿ ಇನ್ನಷ್ಟು ಮತ್ತಷ್ಟು ಶೇರ್ ಮಾಡಿಕೊಂಡಿದ್ದರು. ಅಧಿಕಾರಿಗೆ ಯದ್ವಾ ತದ್ವಾ ಬೈಯೋದಕ್ಕೂ ಶುರುವಿಟ್ಟುಕೊಂಡಿದ್ದರು. ಆದರೆ ಅಂದು ನಡೆದಿದ್ದೇ ಬೇರೆ..
ಎಲೆಕ್ಟ್ರಾನಿಕ್ ಸಿಟಿ ನಿವಾಸಿಯಾಗಿರುವ ಆರ್ ಟಿಓ ಅಧಿಕಾರಿ ಮಂಜುನಾಥ್(52)ರವರ ಕಾರ್ ಅಂದು ಅಪಘಾತವಾಗಿದ್ದೇನೋ ನೀವಾದರೂ, ಕುಡಿದು ವಾಹನ ಚಲಾಯಿಸಿರಲಿಲ್ಲ. ಅವರಿಗೆ 1 ವಾರದಿಂದ ಅರೋಗ್ಯ ಸಮಸ್ಯೆ ಉಂಟಾಗಿದ್ದು, ಲೋ ಬಿಪಿಯಿಂದಾಗಿ ಅಪಘಾತ ಸಂಭವಿಸಿತ್ತು. ಆದರೆ ಎಲ್ಲೆಡೆ ಹರಿದಾಡಿದ್ದ ಸುಳ್ಳಿನ ವಿಡಿಯೋ, ಚುಚ್ಚು ಮಾತುಗಳಂದ ಇನ್ನೂ ಕುಗ್ಗಿ ಹೋಗಿದ್ದ ಮಂಜುನಾಥ್ ರವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಅವರು ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಅದೇನೇ ಆದರೂ ಸುಳ್ಳಿನ ಕೋಟೆಯಲ್ಲಿ ಹೋದ ಮಾನಕ್ಕೆ ಆ ಬಡಪಾಯಿ ಜೀವವೇ ಹೊರಟುಹೋಯ್ತು. ಮಾಡದ ತಪ್ಪಿಗೆ ಕುಗ್ಗಿ ಹೋದ ಆರ್ ಟಿಓ ಅಧಿಕಾರಿ ಇಂದು ನಮ್ಮೆಲ್ಲರನ್ನೂ ಅಗಲುವಂತಾಯ್ತು. ಇನ್ನಾದರೂ ಸುಖಾ ಸುಮ್ಮನೆ ಸೋಶಿಯಲ್ ಮೀಡಿಯಾದಲ್ಲಿ ಹರಿದು ಬರುವ ವಿಡಿಯೋಗಳನ್ನು ನೋಡದೆಯೇ ಮತ್ತೊಬ್ಬರಿಗೆ ಶೇರ್ ಮಾಡಿ ತಪ್ಪು ಮಾಹಿತಿ ರವಾನಿಸುವ ಮುನ್ನ, ಮತ್ತೊಮ್ಮೆ ಯೋಚಿಸಿ ಮುನ್ನಡೆಯುವುದು ಉತ್ತಮ ಎಂದು..

Exit mobile version