ಲಂಡನ್ ಅ. 20: ಬ್ಯಾಡ್ಮಿಂಟನ್ ಪಟು ಪಿ. ವಿ. ಸಿಂಧೂ ಒಲಿಂಪಿಕ್ ಗಾಗಿ ನಡೆಯುತ್ತಿರುವ ಶಿಬಿರವನ್ನು ತೊರೆದು ಲಂಡನ್ ಗೆ ತೆರಳಿದ್ದಾರೆ. ಚೇತರಿಕೆ ಮತ್ತು ಪುಷ್ಠಿಯ ಕೆಲಸಕ್ಕಾಗಿ ಇಂಗ್ಲೆಂಡ್ ಗೆ ತೆರಳಿರುವುದಾಗಿ ಪಿ. ವಿ. ಸಿಂಧೂ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೇಳಿದ್ದಾರೆ. ಇಂಗ್ಲೆಂಡ್ ನಲ್ಲಿ ಹತ್ತು ದಿನಗಳ ಕಾಲ ಪಿ. ವಿ. ಸಿಂಧೂ ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಾಮಾನ್ಯವಾಗಿ ಒಲಿಂಪಿಕ್ ಶಿಬಿರವನ್ನು ಯಾರೂ ಕೂಡಾ ಮಧ್ಯದಲ್ಲಿಯೇ ತೊರೆದು ಹೋಗವುದಿಲ್ಲ. ಆದರೆ ಸಿಂದೂ ಅವರು ತೆರಳಿದ್ದಾರೆ. ಅಲ್ಲದೇ ಇದೇ ಮೊದಲ ಸಲ ತನ್ನ ಪೋಷಕರಿಲ್ಲದೆ ಪಿ. ವಿ. ಸಿಂಧೂ ಇಂಗ್ಲೆಂಡ್ ಗೆ ತೆರಳಿದ್ದಾರೆ.
ಗ್ಯಾಟೋರೇಡ್ ಕ್ರೀಡಾ ವಿಜ್ಞಾನ ಸಂಸ್ಥೆಯ ರೆಬೆಕಾ ರಾಂಡೆಲ್ ಮತ್ತು ತಜ್ಞರ ತಂಡವು ಆಕೆಯ ಮೇಲೆ ನಿಗಾ ವಹಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ವಿಶ್ವದ ಮಾಜಿ ನಂಬರ್ 2 ಆಟಗಾರ್ತಿ ಮುಂದಿನ ಎರಡು ತಿಂಗಳು ಇಂಗ್ಲೆಂಡ್ನಲ್ಲಿ ಇರುವ ನಿರೀಕ್ಷೆಯಿದೆ.