ಇಷ್ಟಪಟ್ಟ ಹುಡುಗನೊಂದಿಗೆ ಮದುವೆಗೆ ನಿರಾಕರಣೆ: ಜಾಹೀರಾತು ಫ್ಲೆಕ್ಸ್ ಏರಿದ ಅಪ್ರಾಪ್ತೆ

ಇಂಧೋರ್, ನ. 09: ತಾನು ಇಷ್ಟಪಟ್ಟ ಹುಡುಗನೊಂದಿಗೆ ಮದುವೆ ಮಾಡಲು ತಾಯಿ ಒಪ್ಪದ ಕಾರಣದಿಂದ ಮನನೊಂದ ಅಪ್ರಾಪ್ತ ಯುವತಿಯೊಬ್ಬಳು ರಸ್ತೆಬದಿಯಲ್ಲಿರುವ ಜಾಹೀರಾತು ಫ್ಲೆಕ್ಸ್ ಬೋರ್ಡ್ ಮೇಲೇರಿ ಆತಂಕ ಸೃಷ್ಟಿಸಿದ ಘಟನೆ ಮಧ್ಯಪ್ರದೇಶದ ಇಂಧೋರ್‌ನ ಪರ್ದೇಸಿಪುರದಲ್ಲಿ ನಡೆದಿದೆ.

ನಗರದ ಭಂಡಾರಿ ಸೇತುವೆ ಬಳಿಯಿದ್ದ ಹೋರ್ಡಿಂಗ್ ಮೇಲೆ ಕುಳಿತಿದ್ದಾಳೆ. ಯುವತಿ ಇನ್ನು ಅಪ್ರಾಪ್ತಳಾಗಿದ್ದು, ತಾಯಿ ಮದುವೆಗೆ ಒಪ್ಪಲಿಲ್ಲ ಎಂದು ತಿಳಿದುಬಂದಿದೆ. ಭಾನುವಾರ ರಾತ್ರಿ ಸಮಯದಲ್ಲಿ ಯುವತಿ ಈ ರೀತಿ ಹೋರ್ಡಿಂಗ್ ಮೇಲೆ ಹತ್ತಿ ಕುಳಿತಿದ್ದು, ಆರಾಮಾಗಿ ಮೊಬೈಲ್ ನೋಡುತ್ತಿದ್ದಳು ಎನ್ನಲಾಗಿದೆ.

ಯುವತಿ ಹೋರ್ಡಿಂಗ್ ಮೇಲೆ ಹತ್ತಿದ್ದು, ಕೆಲ ಸ್ಥಳೀಯರು ಗಮನಿಸಿ ಪೊಲೀಸರಿಗೆ ತಿಳಿಸಿದ್ದಾರೆ. ಸದಾ ವಾಹನಗಳಿಂದ ಗಿಜಿಗುಡುವ ರಸ್ತೆಯಲ್ಲಿ ಈ ರೀತಿ ಯುವತಿ ಹತ್ತಿ ಕುಳಿತಿದ್ದು, ಕೆಲ ಕಾಲ ಆತಂಕಕ್ಕೆ ಕಾರಣವಾಯಿತು. ತಕ್ಷಣಕ್ಕೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವತಿಯನ್ನು ಕಳೆಗಿಳಿಯುವಂತೆ ಮನವಿ ಮಾಡಿದರು. ಆದರೆ, ಹುಡುಗಿ ಯಾವ ಮಾತಿಗೂ ಜಗ್ಗದೇ ಸುಮ್ಮನೆ ಕುಳಿತಿದ್ದಳು. ಕಡೆಗೆ ಪೊಲೀಸರು ವಿಷಯ ತಿಳಿದು ಹುಡುಗಿ ಪ್ರೀತಿಸುತ್ತಿದ್ದ ಯುವಕನನ್ನು ಸ್ಥಳಕ್ಕೆ ಕರೆಯಿಸಿದರು.

Exit mobile version