ಈರುಳ್ಳಿಯ ಪ್ರಯೋಜನಗಳು ಹೇಗಿವೆ ಗೊತ್ತಾ ?

ದಿನ ನಿತ್ಯದ ಅಡುಗೆಯಲ್ಲಿ ಈರುಳ್ಳಿಗೆ ಮಹತ್ತರವಾದ ಸ್ಥಾನವಿದೆ. ಈರುಳ್ಳಿಯಿಲ್ಲದ ಅಡುಗೆಗೆ ರುಚಿಯಿಲ್ಲ ಎಂದು ಹೇಳುವವರಿದ್ದಾರೆ. ಇದು ಬರೀ ರುಚಿಗೆ ಬಳಸುವುದಲ್ಲ; ಇದರಿಂದ ಅನೇಕ ಔಷದೀಯ ಗುಣಗಳೂ  ಮನುಷ್ಯನ ದೇಹಕ್ಕೆ ಸಿಗುತ್ತವೆ. 

ಶೀತ, ಕೆಮ್ಮು ,ನೆಗಡಿಗೆ ;ಈರುಳ್ಳಿ ರಸ ,ಜೇನು ತುಪ್ಪದೊಂದಿಗೆ ಸೇವಿಸಿದರೆ ಉತ್ತಮ ಪರಿಣಾಮವನ್ನು ಬೀರುವುದು. ತಲೆನೋವು ಇದ್ದಾಗ ಇದನ್ನು ಜಜ್ಜಿ ಮೂಗಿನ ಹತ್ತಿರ ಹಿಡಿದು ಇದರ ವಾಸನೆಯನ್ನು ತೆಗೆದುಕೊಂಡರೆ ಶೀತ ತಲೆನೋವು ಗುಣವಾಗುತ್ತದೆ. ಗಂಟಲಲ್ಲಿ

ಎದೆಯಲ್ಲಿ,ಹೊಟ್ಟೆಯಲ್ಲಿ ಕಫ ಹೆಚ್ಚಾದಾಗ ಈರುಳ್ಳಿ ಜೊತೆ ಬೆಲ್ಲವನ್ನು ಸೇರಿಸಿ ತಿನ್ನಬಹುದು;ಇಲ್ಲವೆ ಈರುಳ್ಳಿ ಜೊತೆ ತುಳಸಿ, ಶುಂಠಿಯನ್ನು ಸೇರಿಸಿ ಜಜ್ಜಿ ರಸ ತೆಗೆದು ಕುಡಿಯುವುದರಿಂದ ಕಫ ಹಾಗೂ ಹೊಟ್ಟೆಯ ಸಮಸ್ಯೆಗೆ ಉತ್ತಮ ಪರಿಹಾರವಾಗುವುದು.

ನಿಯಮಿತವಾಗಿ ಈರುಳ್ಳಿ ಸೇವನೆಯಿಂದ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು  ನಿಯಂತ್ರಣಗೊಳಿಸಿ ಆರೋಗ್ಯವನ್ನು ಕಾಪಾಡುತ್ತದೆ. ಹೃದಯ ಸಂಬಂಧಿ ಕಾಯಿಲೆಗೂ ಹಸಿ ಈರುಳ್ಳಿಯನ್ನು ಸೇವಿಸಿದರೆ ಉತ್ತಮ . ಕ್ಯಾಲ್ಸಿಯಂ ಖನಿಜಾಂಶ, ಕಬ್ಬಿಣಾಂಶ ಈರುಳ್ಳಿಯಲ್ಲಿ ಹೇರಳವಾಗಿದೆ.

Exit mobile version