ಈ ಬಾರಿಯೂ ದೆಹಲಿಯಲ್ಲಿ ಕೇಳಿಸಲ್ಲ ಪಟಾಕಿ ಶಬ್ದ…!

ನವದೆಹಲಿ,ಅ.23: : ದೇಶದೆಲ್ಲೆಡೆ ದೀಪಾವಳಿಯ ಸಂಭ್ರಮಕ್ಕೆ ದಿನಗಣನೆ ಶುರುವಾಗಿದೆ. ಪ್ರತಿವರ್ಷದಂತೆ ಈ ವರ್ಷ ಕೂಡ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪಟಾಕಿ ಹಾಗೂ ಸುಡುಮದ್ದುಗಳ ಮಾರಾಟ ಮೇಲಿನ ನಿಷೇಧ ಮುಂದುವರೆದಿದೆ. ದಿಲ್ಲಿ ವಲಯ (ಎನ್‌ಸಿಆರ್‌)ದಲ್ಲಿ ಹೆಚ್ಚು ಶಬ್ದ ಮಾಲಿನ್ಯ ಮಾಡದ ಪರಿಸರ ಸ್ನೇಹಿ ಪಟಾಕಿಗಳನ್ನು ಸಿಡಿಸಬೇಕು ಎಂದು ಸುಪ್ರೀಂ ಕೋರ್ಟ್ ಆಜ್ಞೆ ಹೊರಡಿಸಿದೆ.

ಹೂ ಕುಂಡ ಹಾಗೂ ಸುರ್‌ ಸುರ್‌ ಬತ್ತಿಯನ್ನು ಮಾತ್ರ ಕಾನೂನುಬದ್ಧ ಪಟಾಕಿಗಳೆಂದು ಘೋಷಿಸಿರುವ ಸುಪ್ರೀಂ, ಈ ಸಲ ದೀಪಾವಳಿ ವೇಳೆ ದಿಲ್ಲಿಯಲ್ಲಿ ಈ ಎರಡು ಪಟಾಕಿಗಳನ್ನಷ್ಟೇ ಬಳಸಬೇಕು ಎಂದು ಸೂಚನೆ ನೀಡಿದೆ. ಚಳಿಗಾಲ ಹತ್ತಿರವಾಗುತ್ತಿದ್ದಂತೆ ದಿಲ್ಲಿಯಲ್ಲಿ ವಾಯುಮಾಲಿನ್ಯ ದಿನೇದಿನೇ ಹೆಚ್ಚುತ್ತಿದ್ದು, ಮಾಲಿನ್ಯ ಪ್ರಮಾಣ ದೀಪಾವಳಿ ವೇಳೆ ಇನ್ನಷ್ಟು ಬಿಗಡಾಯಿಸುವ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಆದೇಶ ಹೊರಡಿಸಿದೆ.

Exit mobile version