ಎನ್ ಎ ಗ್ರೂಪ್ಸ್ ಆಫ್ ಕಾಲೇಜಿನಲ್ಲಿ ಅರ್ಥಪೂರ್ಣವಾದ ಸಂವಿಧಾನ ದಿವಸ್ ಆಚರಣೆ

ಬೆಂಗಳೂರು,ನ.27: ಬೆಂಗಳೂರಿನ ಹೊರವಲಯದ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಎನ್ಎ ಗ್ನ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್ ಸಂವಿಧಾನ ದಿವಸ್ಆಚರಣೆಯನ್ನುಅರ್ಥಪೂರ್ಣವಾಗಿ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಿವೃತ್ತ ನ್ಯಾಯಾಧೀಶರಾದ ಎನ್.ಕುಮಾರ್ ರವರು ಆಗಮಿಸಿದ್ದರು. ನಂತರ ಮಾತನಾಡಿದ ಅವರು “ ಸಂವಿಧಾನವು ನಮಗೆ ಹಕ್ಕನ್ನು ಕಲ್ಪಿಸಿದೆ. ಆದರೆ ಹಕ್ಕುಗಳ ಲೆಕ್ಕಾಚಾರದಲ್ಲಿ ನಾವು ನಮ್ಮ ಕರ್ತವ್ಯಗಳನ್ನು ಮರೆತಿದ್ದೇವೆ. ನಮ್ಮ ಕರ್ತವ್ಯಗಳನ್ನು ಮಾಡಿದರಷ್ಟೇ ಹಕ್ಕುಗಳನ್ನು ಸರಿಯಾಗಿ ಅನುಭವಿಸಲು ಸಾಧ್ಯವಾಗುತ್ತದೆ. ಸಂವಿಧಾನವು ನಮಗೆ ಎಲ್ಲವನ್ನೂ ಕೊಟ್ಟಿದೆ. ನಾವು ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಅಷ್ಟೇ” ಎಂಬ ಸಂದೇಶವನ್ನು ನೀಡಿದ್ದಾರೆ.

ಇನ್ನು ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸಂಸ್ಥೆಯ ಅಧ್ಯಕ್ಷರಾದ ಮೀರ್ ಹುಸೇನ್ಹು ಅಲ್ತಾಫ್, ಎನ್ ಎ ಕಾನೂನು ಕಾಲೇಜಿನ ಪ್ಲ್ತಾರಾಂಶುಪಾಲರಾದ ಸೈಯದ್ ಮೊಯ್ದಿನ್ ಅಲ್ತಾಫ್, ರಾಮಯ್ಯ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಮಮತಾ, ಹಿರಿಯ ತನಿಖಾ ವರದಿಗಾರ್ತಿ ವಿಜಯಲಕ್ಷ್ಮಿ ಶಿಬರೂರು, ಬೆಂಗಳೂರು ವಿಶ್ವ ವಿದ್ಯಾಲಯದ ವಾಣಿಜ್ಯ ಹಾಗೂ ನಿರ್ವಹಣಾ ಇಲಾಖೆಯ ಸಹಾಯಕ ಪ್ರಾಧ್ಯಾಪಕರಾಗಿರುವ ಪ್ರಾಧ್ಯಾಪಕರಾಗಿರುವ ಡಾ.ಮೊಹಮ್ಮದ್ ಫಾರೂಖ್ ಪಾಶಾರವರು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ಸರ್ಕಾರಿ–ಖಾಸಗಿ ಪ್ರೌಢ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ  ರಂಗೋಲಿ ಸ್ಪರ್ಧೆ, ಬೆಂಕಿಯಿಲ್ಲದೆ ಅಡುಗೆ ತಯಾರಿ, ಗ್ರೂಪ್ ಡ್ಯಾನ್ಸ್ ಹಾಗೂ ಗ್ರೂಪ್ ಸಾಂಗ್ ಹೀಗೆ ಅನೇಕ ವಿಭಾಗಗಳಲ್ಲಿ ಸಾಂಸ್ರ್ಕತಿಕ ಸ್ಪರ್ಧೆಗಳನ್ನುಆಯೋಜಿಸಲಾಗಿತ್ತು. 

ವಿಶೇಷವಾಗಿ ಕಾನೂನು ವಿದ್ಯಾರ್ಥಿಗಳಿಗಾಗಿ “Contemporary Constitutional Issues through the prism of Constitutional assembly Debates” ಎಂಬ ವಿಷಯಾಧಾರಿತ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿತ್ತು. ಒಟ್ಟನಲ್ಲಿ ಎನ್ ಎ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್ ಆಯೋಜಿಸಿದ್ದ ಸಂವಿಧಾನ ದಿವಸ್ ಆಚರಣೆ ಅರ್ಥಪೂರ್ಣವೆನ್ನಿಸಿತ್ತು.

Exit mobile version