ಐಸಿಸಿ ದಶಕದ ಟೆಸ್ಟ್-ಏಕದಿನ ತಂಡ ಪ್ರಕಟ: ಉಭಯ ತಂಡಗಳ ನಾಯಕತ್ವ ಭಾರತೀಯರ ಹೆಗಲಿಗೆ

ದುಬೈ, ಡಿ. 27: ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ದಶಕದ ಟೆಸ್ಟ್ ಹಾಗೂ ಏಕದಿನ ತಂಡಗಳನ್ನು ಪ್ರಕಟಿಸಿದ್ದು, ಉಭಯ ತಂಡಗಳಿಗೂ ಟೀಂ ಇಂಡಿಯಾ ಆಟಗಾರರೇ ನಾಯಕರಾಗಿರುವುದು, ಭಾರತೀಯ ಕ್ರಿಕೆಟ್‌ನ ಹಿರಿಮೆ ಹೆಚ್ಚಿಸಿದೆ.

ಐಸಿಸಿ ಪ್ರಕಟಿಸಿರುವ ದಶಕದ ಟೆಸ್ಟ್ ತಂಡಕ್ಕೆ ‌ವಿರಾಟ್ ಕೊಹ್ಲಿ ನಾಯಕರಾಗಿದ್ದರೆ, ಏಕದಿನ ಕ್ರಿಕೆಟ್‌ಗೆ‌ ಟೀಂ‌ ಇಂಡಿಯಾ ಕಂಡ ಯಶಸ್ವಿ ನಾಯಕ ಎಂ.ಎಸ್. ಧೋನಿ ನಾಯಕರಾಗಿದ್ದಾರೆ. ಉಳಿದಂತೆ ದಶಕದ ಏಕದಿನ ಕ್ರಿಕೆಟ್ ತಂಡದಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಸ್ಥಾನ ಪಡೆದಿದ್ದರೆ. ಟೆಸ್ಟ್ ತಂಡದಲ್ಲಿ ಆರ್. ಅಶ್ವಿನ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ದಶಕದ ಏಕದಿನ ತಂಡ: ಎಂ.ಎಸ್. ಧೋನಿ(ನಾಯಕ)
ರೋಹಿತ್ ಶರ್ಮಾ, ಡೇವಿಡ್ ವಾರ್ನರ್, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಶಕೀಬ್ ಹಲ್ ಹಸನ್, ಬೆನ್ ಸ್ಟೋಕ್ಸ್, ಮಿಚೆಲ್ ಸ್ಟಾರ್ಕ್, ಟ್ರೆಂಟ್ ಬೋಲ್ಟ್, ಇಮ್ರಾನ್ ತಾಹಿರ್, ಲಸಿತ್ ಮಲಿಂಗ.

ದಶಕದ ಟೆಸ್ಟ್ ತಂಡ:
ವಿರಾಟ್ ಕೊಹ್ಲಿ(ನಾಯಕ), ಅಲಿಸ್ಟರ್ ಕುಕ್, ಡೇವಿಡ್‌ ವಾರ್ನರ್, ಕೇನ್ ವಿಲಿಯಂಸನ್, ಸ್ಟೀವ್ ಸ್ಮಿತ್, ಕುಮಾರ್ ಸಂಗಕ್ಕಾರ, ಬೆನ್ ಸ್ಟೋಕ್ಸ್, ಆರ್. ಅಶ್ವಿನ್, ಡೇಲ್ ಸ್ಟೇನ್, ಸ್ಟುವರ್ಟ್ ಬ್ರಾಡ್, ಜೇಮ್ಸ್‌ ಆಂಡರ್ಸನ್.

ಇನ್ನೂ ದಶಕದ ಟಿ20 ತಂಡದಲ್ಲಿ ಸಹ ಭಾರತೀಯ ಆಟಗಾರರ ಪ್ರಾಬಲ್ಯ ಜೋರಾಗಿದ್ದು, ಟಿ20 ತಂಡಕ್ಕೂ ಎಂ.ಎಸ್. ಧೋನಿ ಅವರೇ ನಾಯಕರಾಗಿದ್ದಾರೆ. ಇವರೊಂದಿಗೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ತಂಡದಲ್ಲಿ ‌ಸ್ಥಾನ ಪಡೆದ ಭಾರತೀಯ ಆಟಗಾರರು. ಉಳಿದಂತೆ ಕ್ರಿಸ್ ಗೇಯ್ಲ್, ಡೇವಿಡ್ ವಾರ್ನರ್, ಎಬಿ ಡಿವಿಲಿಯರ್ಸ್, ಗ್ಲೆನ್ ಮ್ಯಾಕ್ಸ್‌ವೆಲ್, ಕೀರನ್ ಪೋಲಾರ್ಡ್, ರಶೀಯ ಖಾನ್, ಲಸಿತ್ ಮಲಿಂಗ ದಶಕದ ಟಿ20 ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.

Exit mobile version