Bengaluru: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ 2024ರ ಜೂನ್ನಲ್ಲಿ ನಡೆಯಲಿರುವ ಐಸಿಸಿ ಟಿ-20 (ICC T-20) ವಿಶ್ವಕಪ್ನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಭಾರತ ತಂಡ ಜೂನ್ (June) 9ರಂದು ನ್ಯೂಯಾರ್ಕ್ನಲ್ಲಿ ಎದುರಿಸಲಿದೆ.

ICC ಟಿ-20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಲೀಗ್ ಹಂತದ ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. 20 ರಾಷ್ಟ್ರಗಳ ನಡುವೆ ನಡೆಯಲಿರುವ ಈ ಟೂರ್ನಿಯಲ್ಲಿ ಭಾರತ, ಐರ್ಲೆಂಡ್, ಅಮೆರಿಕ ಪಾಕಿಸ್ತಾನ ಮತ್ತು ಕೆನಡಾ ತಂಡಗಳು ‘ಎ’ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿವೆ. ಆಸ್ಟ್ರೇಲಿಯಾ, ನಮಿಬಿಯಾ, ಸ್ಕಾಟ್ಲೆಂಡ್ (Australia, Namibia, Scotland) ಮತ್ತು ಒಮಾನ್ ‘ಬಿ’ ಗುಂಪಿನಲ್ಲಿವೆ.
ವೆಸ್ಟ್ ಇಂಡೀಸ್, ನ್ಯೂಜಿಲೆಂಡ್ (New Zealand) ಅಫಘಾನಿಸ್ತಾನಮ ಉಗಾಂಡ ಮತ್ತು ಪಪುವಾ ನ್ಯೂಗಿನಿ ತಂಡಗಳು ʼಸಿʼ ಗುಂಪಿನಲ್ಲಿ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ, ನೆದರ್ಲೆಂಡ್ಸ್ ಮತ್ತು ನೇಪಾಳ ತಂಡಗಳು ʼಡಿʼ ಗುಂಪಿನಲ್ಲಿ ಸ್ಥಾನ ಪಡೆದಿವೆ. ಇನ್ನು ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಜೂನ್ 5ರಂದು ನ್ಯೂಯಾರ್ಕ್ನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಐರ್ಲೆಂಡ್ (Ireland) ಎದುರು ಸೆಣಸಾಟ ನಡೆಸಲಿದೆ. ಅಗ್ರ ಎರಡು ತಂಡಗಳ ನಡುವೆ ಜೂನ್ 29ರಂದು ಫೈನಲ್ ಪಂದ್ಯ ನಡೆಯಲಿದೆ.

ಭಾರತ ತಂಡದ ಪಂದ್ಯಗಳ ವೇಳಾಪಟ್ಟಿ :
ಭಾರತ vs ಐರ್ಲೆಂಡ್ – ಜೂನ್ 5 ರಂದು ನ್ಯೂಯಾರ್ಕ್ನಲ್ಲಿ, ಸಂಜೆ 08:30
ಭಾರತ vs ಪಾಕಿಸ್ತಾನ (Pakistan) – ಜೂನ್ 9 ರಂದು ನ್ಯೂಯಾರ್ಕ್ನಲ್ಲಿ, ಸಂಜೆ 08:30
ಭಾರತ vs ಅಮೆರಿಕ – ಜೂನ್ 12 ರಂದು ನ್ಯೂಯಾರ್ಕ್ನಲ್ಲಿ, ಸಂಜೆ 08:30
ಭಾರತ vs ಕೆನಡಾ – ಜೂನ್ 15 ರಂದು ಫ್ಲೋರಿಡಾದಲ್ಲಿ, ಸಂಜೆ 08:30
ಟಿ20 ವಿಶ್ವಕಪ್ಗೆ ಭಾರತ ತಂಡ :
- ರೋಹಿತ್ ಶರ್ಮಾ (Rohit Sharma)
- ಶುಭಮನ್ ಗಿಲ್
- ರಿಂಕು ಸಿಂಗ್
- ರಿಷಭ್ ಪಂತ್
- ವಿರಾಟ್ ಕೊಹ್ಲಿ
- ಸೂರ್ಯಕುಮಾರ್ ಯಾದವ್
- ರವೀಂದ್ರ ಜಡೇಜಾ
- ಹಾರ್ದಿಕ್ ಪಾಂಡ್ಯ
- ಜಸ್ಪ್ರೀತ್ ಬುಮ್ರಾ
- ಮೊಹಮ್ಮದ್ ಶಮಿ
- ಮೊಹಮ್ಮದ್ ಸಿರಾಜ್