ಒಂದು ಸಹಾಯವಾಣಿ ಹಲವು ತುರ್ತುಸೇವೆಗಳು

ಬೆಂಗಳೂರು, ಅ. 23: ತುರ್ತು ಸಂದರ್ಭದಲ್ಲಿ ಜನರ ಸಹಾಯಕ್ಕಾಗಿ ಅನೇಕ ಸಹಾಯವಾಣಿ ಸಂಖ್ಯೆಗಳನ್ನು ನಿಗದಿಪಡಿಸಲಾಗಿದೆ. ಉದಾಹರಣೆಗೆ ಪೋಲೀಸ್‌ ಸಹಾಯಕ್ಕೆ 100, ಆಂಬುಲೆನ್ಸ್‌ ಸಹಾಯಕ್ಕೆ 108 ಹೀಗೆ ಸಹಾಯವಾಣಿ ಸಂಖ್ಯೆಗಳನ್ನು ನಿಗದಿಪಡಿಸಲಾಗಿದೆ. ಈ ಸಂಖ್ಯೆಗಳು ಅನೇಕ ಬಾರಿ ಹಲವರನ್ನು ಗೊಂದಲಕ್ಕೂ ದೂಡಿವೆ. ಇಂತಹ ಗೊಂದಲಕ್ಕೆ ಕೆಲವೇ ದಿನಗಳಲ್ಲಿ ಬ್ರೇಕ್ ಬೀಳಲಿದ್ದು, ಎಲ್ಲಾ ತುರ್ತು ಸಂದರ್ಭದಲ್ಲಿ ಇನ್ಮುಂದೆ 112 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದ್ರೇ ಸಾಕು, ಎಲ್ಲಾ ಸೇವೆ ದೊರಕಲಿದೆ.

ಅಂದಹಾಗೇ ಈಗ ಇದ್ದಂತ 100, 101, 102, 108 ಸಹಾಯವಾಣಿ ಸಂಖ್ಯೆಗಳ ಬದಲಾಗಿ 112ಗೆ ಕರೆ ಮಾಡಿದ್ರೇ, ತುರ್ತು ಸಂದರ್ಭದಲ್ಲಿನ ಪೊಲೀಸ್, ಆಂಬುಲೆನ್ಸ್, ಆಗ್ನಿಶಾಮಕ ಸೇವೆ ಸೇರಿದಂತೆ ಇತರೆ ಸೇವೆಗಳು ಲಭ್ಯವಾಗಲಿದೆ. ಬೆಂಗಳೂರಿನಲ್ಲಿ ಇದಕ್ಕಾಗಿ ಕಾಮಾಂಡಿಗ್ ಸೆಂಟರ್ ಸ್ಥಾಪಿಸಲಾಗಿದ್ದು, ಸದ್ಯಕ್ಕೆ ರಾಜ್ಯದ ಆರು ಜಿಲ್ಲೆಗಳಲ್ಲಿ 112 ಸಹಾಯವಾಣಿ ಸಂಖ್ಯೆ ತುರ್ತು ಸಂದರ್ಭದಲ್ಲಿ ಬಳಸಲು ಸೂಚಿಸಲಾಗಿದೆ. ಇದು ಯಶಸ್ವಿಯಾಗಿ ಕಾರ್ಯನಿರ್ವಹಿಸಿದರೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಜಾರಿಗೊಳ್ಳಲಿದೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ.

Exit mobile version