ಕಂಪನಿ ಮಾಲಿಕರಿಗೆ ಕೊಂಚ ರಿಲಾಕ್ಸ್ ನೀಡಿದ ಸುಪ್ರೀಂ ಕೋರ್ಟ್

ಕಿಲ್ಲರ್ ವೈರಸ್  ಕೊರೋನಾ  ವಿಶ್ವಕ್ಕೆ ಕಾಲಿಟ್ಟು ಇಡೀ ಆರ್ಥಿಕ ವ್ಯವಸ್ಥೆಯನ್ನು  ಬುಡಮೇಲು ಮಾಡಿತ್ತು.. ಹಲವು ಕಂಪನಿಗಳು  ತಮ್ಮ ಕೆಲಸಗಾರರಿಗೆ  ವೇತನವನ್ನು ನೀಡದೆ ಪರದಾಟುತ್ತಿತ್ತು. ಇದೀಗ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಖಾಸಗಿ ಕಂಪನಿಗಳ ಮಾಲೀಕರಿಗೆ ಸುಪ್ರೀಂಕೋರ್ಟ್ ನೆಮ್ಮದಿಯ ಸುದ್ದಿಯೊಂದನ್ನು ನೀಡಿದ್ದು; ಕೊಂಚ ಮಟ್ಟಿಗೆ  ಕಂಪನಿ ಮಾಲಿಕರಿಗೆ ರಿಲಾಕ್ಸ್  ಸಿಕ್ಕಿದೆ.

ಇನ್ನು ಲಾಕ್ ಡೌನ್  ಸಂದರ್ಭದಲ್ಲಿ  ಉದ್ಯೋಗಿಗಳಿಗೆ  ವೇತನ  ನೀಡದಿರುವ   ಮಾಲೀಕರ ವಿರುದ್ಧ  ಜುಲೈ ಕೊನೆಯವರೆಗೆ  ಕಠಿಣ  ಕಠಿಣ ಕ್ರಮ ಕೈಗೊಳ್ಳಬಾರದು ಎಂದು ಸುಪ್ರೀಂಕೋರ್ಟ್ ಆದೇಶ  ಕೊಟ್ಟಿದ್ದು  ;ಇದೀಗ ಸ್ವಲ್ಪ  ಮಟ್ಟಿಗೆ  ಕಂಪನಿಗಳ ಮಾಲೀಕರಿಗೆ ರಿಲಾಕ್ಸ್ ಸಿಗೋದರ ಜೊತೆಗೆ ಅವಧಿ ಸಿಕ್ಕಿರೋದು  ಇನ್ನಷ್ಟು ಕೆಲಸಗಳಿಗೆ ಅವಕಾಶವಾದಂತಾಗಿದೆ

ಅಂದಹಾಗೆ ಲಾಕ್ ಡೌನ್ ಸಮಯದಲ್ಲಿ ಕೆಲಸಗಾರರಿಗೆ ಕಡ್ಡಾಯವಾಗಿ ಸಂಪೂರ್ಣ ವೇತನ ನೀಡಬೇಕೆಂದು ಮಾರ್ಚ್ 29 ರಂದು ಹೊರಡಿಸಿದ್ದ ಆದೇಶದ ಕಾನೂನು ಬದ್ಧತೆ ಬಗ್ಗೆ ಪ್ರತಿಕ್ರಿಯೆ ನೀಡಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ 4 ವಾರಗಳ ಹೆಚ್ಚುವರಿ ಕಾಲಾವಕಾಶವನ್ನು ನೀಡಿದ್ದು ; ಉದ್ಯೋಗಿಗಳಿಗೆ  ಸಂಪೂರ್ಣವಾಗಿ  ವೇತನವನ್ನು ಕೊಡಬೇಕೆಂದು  ಮಾ ೨೯ ರಂದು ಸು.ಕೋರ್ಟ್ ತಿಳಿಸಿತ್ತು .  ಇದರಿಂದ ಖಾಸಗಿ ಕಂಪನಿಗಳು ಇದನ್ನು ಪ್ರಶ್ನಿಸಿ ಅಜರ್ಜಿಯನ್ನು ಸಲ್ಲಿಸಿದ್ದು ; ಇಂದು  ಖಾಸಗಿ ಕಂಪನಿ ಮಾಲಿಕರ ಪರ ನ್ಯಾಯಲಯ ತೀಪರ್ಪು ನೀಡಿದೆ.

Exit mobile version