ಕನಕನಗರ ರಸ್ತೆಯ ದುರವಸ್ಥೆ

kanakanagara deadly road | ಕನಕನಗರ ರಸ್ತೆಯಲ್ಲ ಪ್ರಾಣ ತೆಗೆಯೋ ಮೃತ್ಯುಕೂಪ | citizen jouranalist

ಬೆಂಗಳೂರು ನೋಡಲು ಬಹಳ ಸುಂದರವಾದ ನಗರ ಆದರೆ ಇದರೊಳಗೆ ಕೆಲವು ಸಮಸ್ಯೆಗಳು ಜನರನ್ನು ಕಾಡುತ್ತಿವೆ. ಆ ಸಮಸ್ಯೆಗಳು ಮಾತ್ರ ಯಾರಿಗೂ ಕಾಣುವುದಿಲ್ಲ. ಬೆಂಗಳೂರಿನ, ಆರ್‌. ಟಿ. ನಗರದ ಕನಕನಗರದ ರಸ್ತೆಯ ದುರವಸ್ತೆಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಇದು ಬೆಂಗಳೂರಿನ ಆರ್‌. ಟಿ. ನಗರದ ಬಳಿಯಿರುವ ಕನಕನಗರದಿಂದ ವೀರಣ್ಣನ ಪಾಳ್ಯಕ್ಕೆ ಹೋಗುವ ಮುಖ್ಯ ರಸ್ತೆಯಾಗಿದೆ. ಇಲ್ಲಿ ದಿನಕ್ಕೆ ಸಾವಿರಾರು ವಾಹನಗಳು ಓಡಾಡುತ್ತವೆ. ಸಾವಿರಾರು ಜನರು ನಡೆದಾಡುತ್ತಾರೆ. ಕನಕನಗರ ದಿಂದ ವೀರಣ್ಣನ ಪಾಳ್ಯ ಕ್ಕೆ ಹೋಗುವ ಈ ರಸ್ತೆಯಲ್ಲಿ ದಿನಕ್ಕೆ ಹಲವಾರು ಜನರು ಬಿದ್ದು ಕೈ ಕಾಲು ಮುರಿದುಕೊಂಡು ಹೋಗಿ ಕಷ್ಟಗಳನ್ನು ಅನುಭವಿಸುತ್ತಾರೆ.ಮಳೆ ಬಂದರೆ ಅಂತೂ ರಸ್ತೆಯಲ್ಲಿ ಗುಂಡಿಗಳು ತಮ್ಮ ರೌದ್ರಾವತಾರ ಪ್ರದರ್ಶಿಸುತ್ತಿವೆ. ಈ ಸಮಸ್ಯೆಯನ್ನು ನೋಡಿಯೂ, ನೋಡದೆ ಇರೋ ರೀತಿ ವರ್ತಿಸುತ್ತಿದ್ದಾರೆ ಇಲ್ಲಿನ  ಅಧಿಕಾರಿಗಳು, ಶಾಸಕರು. ಹಾಗಾದರೆ ಈ ಸಮಸ್ಯೆಯನ್ನು ನಾವು ಯಾರಲ್ಲಿ ಹೇಳಲಿ ಎಂಬುದು ಜನಸಾಮಾನ್ಯರ ಗೋಳಾಗಿದೆ.

ಇಲ್ಲಿ ರಸ್ತೆಯ ತುಂಬಾ ಗುಂಡಿಗಳಿದ್ದು ಇದನ್ನು ಮುಚ್ಚಿಸಲು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ  ಯಾವ ಪ್ರಯೋಜನವೂ ಆಗಿಲ್ಲ. ಇಲ್ಲಿ ಇಬ್ಬರು ಅಧಿಕಾರಿಗಳಿದ್ದು ಈ ಸಮಸ್ಯೆಯನ್ನು ಒಬ್ಬರಿಗೆ ಹೇಳಿದ್ರೆ ಇನ್ನೊಬ್ಬರಲ್ಲಿ ಹೇಳುವಂತೆ ಇನ್ನೊಬ್ಬರಲ್ಲಿ ಹೇಳಿದಾಗ ಮತ್ತೊಬ್ಬರಲ್ಲಿ ಹೇಳುವಂತೆ  ಸೂಚಿಸುತ್ತಾರೆ. ಓಟು ಕೇಳಲು ಇಬ್ಬರೂ ಬರುತ್ತಾರೆ ಜನರ ಕಷ್ಟಕ್ಕೆ ಮಾತ್ರ ಒಬ್ಬರೂ ಇಲ್ಲ ಎಂದು ಇಲ್ಲಿನ ಜನ ಸಂಕಟಪಡುತ್ತಿದ್ದಾರೆ. ಇಲ್ಲಿಎಷ್ಟೋ ಮಂದಿ ಬೈಕ್ ಸವಾರರು ಈ ಗುಂಡಿಗಳಿಗೆ ಬಿದ್ದಿದ್ದಾರೆ, ಅಪಘಾತಕ್ಕೆ ಒಳಗಾಗಿ ಕೈ ಕಾಲುಗಳನ್ನು ಮುರಿದುಕೊಂಡಿದ್ದಾರೆ. ಕಷ್ಟಕ್ಕೀಡಾದ ಜನರು ಯಾರ ಮೇಲೆ ದೂರು ಕೊಡಬೇಕು? ರಸ್ತೆಯ ಮೇಲೆನಾ ಅಥವಾ ಗುಂಡಿಗಳ ಮೇಲೆನಾ ಎಂಬುದು ಜನರ ಪ್ರಶ್ನೆಯಾಗಿದೆ.ಅದರಲ್ಲೂ BMTC ಬಸ್ಸುಗಳು ಹಾಗೂ  ಲಾರಿಗಳು ಇನ್ನೂ ಹಲವು ಘನ ವಾಹನಗಳು ಸಂಚಾರ ಮಾಡುವುದು ಬಹಳ ಕಷ್ಟಕರ ವಾಗಿದೆ. ಇನ್ನಷ್ಟು ಗುಂಡಿಗಳು ಹುಟ್ಟಿಕೊಳ್ಳಲು ಕಾರಣವಾಗುತ್ತವೆ.

ಇಲ್ಲಿ ಒಂದಿಲ್ಲೊಂದು ಅವಘಡಗಳು ನಿತ್ಯ ಆಗುತ್ತಲೇ ಇದೆ. ಯಾಕಾದರೂ ಈ ಪುಣ್ಯಾತ್ಮರಿಗೆ ಓಟು ಹಾಕಿದ್ವೋ ಎಂಬ ಬೇಜಾರು ಜನರನ್ನು ಕಾಡುತ್ತಿದೆ. ಮಳೆ ಬಂದರಂತೂ ಈ ರಸ್ತೆ ಸಮುದ್ರದಂತೆ ಬಾಸವಾಗುತ್ತದೆ. ಗುಂಡಿಗಳು ನೀರೊಳಗೆ ಕಾಣದೆ ಪ್ರಾಣ ಹಾನಿಯೂ ಆಗುತ್ತಿದೆ. ಆದ್ದರಿಂದ ಜನರ ಪ್ರಾಣಹಾನಿಗೆ ಯಾರು ಹೊಣೆ? ಇದಕ್ಕೆ ಸಂಬಂಧಿಸಿದ ಅಧಿಕಾರಿಗಳೇ ಉತ್ತರಿಸಬೇಕಾಗಿದೆ. ಇಲ್ಲಿನ ಜನಪ್ರತಿನಿಧಿಗಳು ಅತೀ ಹೆಚ್ಚು ಅಪಘಾತವಾದಾಗ ಮಾತ್ರ ಬಂದು ಜೆಲ್ಲಿ ಕಲ್ಲಿನಿಂದ ರಸ್ತೆಯ ಗುಂಡಿ ಮುಚ್ಚಿಸುತ್ತಾರೆ. ಆದರೆ ಅದು ಆದ ಒಂದೇ ವಾರಕ್ಕೆ ಅದೇ ಸ್ಥಳದಲ್ಲೇ ಗುಂಡಿ ಗಳು ಮತ್ತೆ ಪ್ರತ್ಯಕ್ಷವಾಗುತ್ತವೆ. ಇಲ್ಲಿನ ಅಧಿಕಾರಿಗಳು ಇನ್ನಾದರೂ ನಿದ್ದೆಯಿಂದ ಎದ್ದು ಬಂದು ಈ ಗುಂಡಿಗಳನ್ನು ಮುಚ್ಚಿಸಿ ರಸ್ತೆಯನ್ನು ದುರಸ್ಥಿ ಮಾಡಿಸಿ ಜನರ ಸುಲಭ ಸಂಚಾರಕ್ಕೆ ಅನುವು ಮಾಡಿ ಕೊಡಬೇಕು ಎಂಬುದು ವಿಜಯಾ ಟೈಮ್ಸ್ ಆಶಯವಾಗಿದೆ.

Exit mobile version