ಕಪಿಲ್ ಶರ್ಮಾ ಕಾಮಿಡಿ ಶೋನಲ್ಲಿ ಪೈಲ್ವಾನನ ಪ್ರಮೋಷನ್..

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ಪೈಲ್ವಾನ್ ಮುಂದಿನ ತಿಂಗಳು 12ಕ್ಕೆ ತೆರೆಗೆ ಬರುತ್ತಿದ್ದು,
ಅಭಿಮಾನಿಗಳ ಕಾತುರತೆ ಹೆಚ್ಚಿಸಿದೆ. ಈಗಾಗ್ಲೇ ಚಿತ್ರದ ಪ್ರಮೋಷನ್ ಕಾರ್ಯದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಐದು ಭಾಷೆಗಳಲ್ಲೂ ಏಕಕಾಲಕ್ಕೇ ಚಿತ್ರವನ್ನು ತೆರೆಗೆ ತರುವ ಸಿದ್ಧತೆಯಲ್ಲಿದೆ.

ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಕಪಿಲ್ ಶರ್ಮಾ ಕಾಮಿಡಿ ಶೋ ಮೂಲಕವೂ ಕಿಚ್ಚ ಈ ಚಿತ್ರದ ಪ್ರಮೋಷನ್ ಮಾಡ್ತಿದ್ದಾರೆ. ಕಿಚ್ಚ ಮತ್ತು ಬಾಲಿವುಡ್ ನಟ ಸುನೀಲ್ ಶೆಟ್ಟಿ ಇಬ್ಬರು ಕಪಿಲ್ ಶರ್ಮ ಶೋನಲ್ಲಿ ಭಾಗಿಯಾಗಿದ್ದಾರೆ. ವಿಶೇಷ ಅಂದ್ರೆ ಸುದೀಪ್ ಗೆ ಪತ್ನಿ ಪ್ರಿಯಾ ಮತ್ತು ಮಗಳು ಸಾನ್ವಿ ಕೂಡ ಸಾಥ್ ನೀಡಿದ್ದಾರೆ.


ಶೋನಲ್ಲಿ ಭಾಗಿಯಾದ ಒಂದಿಷ್ಟು ಫೊಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸುದೀಪ್ ಈ ಹಿಂದೆ ಕೂಡ ಕಪಿಲ್ ಶರ್ಮ ಶೋನಲ್ಲಿ ಭಾಗಿಯಾಗಿದ್ದರು. ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ತಂಡದ ಜೊತೆ ಕಿಚ್ಚ ಕಪಿಲ್ ಶರ್ಮ ಶೋನಲ್ಲಿ ಕಾಣಿಸಿಕೊಂಡಿದ್ದರು. ಈಗ ಮತ್ತೆ ಪೈಲ್ವಾನ್ ಗಾಗಿ ಕಪಲ್ ಶರ್ಮ ಜೊತೆ ಕಾಣಿಸಿಕೊಂಡಿದ್ದಾರೆ.

Exit mobile version