ಕಾರ್ಕಳದ ಕಲ್ಯ ಗ್ರಾಮದ ಅಕ್ರಮ ಗಣಿಗಾರಿಕೆ

illegal crusher has become big tension to Karkala people |  citizen journalist |vijayatimes

ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಸಮೀಪದ ಕಲ್ಯಗ್ರಾಮದಲ್ಲಿ ಅಕ್ರಮವಾಗಿ ಜಲ್ಲಿ ಕಲ್ಲು ಪುಡಿ ಮಾಡುತ್ತಿರುವುದರಿಂದ ಜನರಿಗೆ ಸಂಕಷ್ಟವೊದಗಿದೆ.  ಇದು  ನಾರಾಯಣ ಪ್ರಭು ಒಡೆತನದಲ್ಲಿ ನಡೆಯುತ್ತಿರುವ ಅಗಸ್ತ್ಯ ಕೃಷರ್. ದುಡ್ಡು ಮಾಡುವ ಭರದಲ್ಲಿ ಸುತ್ತ ಮುತ್ತಲಿದ್ದವರು ಸತ್ತರೂ ಅವರಿಗೆ ಯಾವ ಚಿಂತೆಯೂ ಇಲ್ಲ.ಅಗಸ್ತ್ಯ ಕೃಷರ್ ಗೆ  ಸುಮಾರು 2013ರಿಂದ  2018ರವರೆಗಷ್ಟೇ ಪರ್ಮಿಷನ್ ನೀಡಿದ್ದರೂ ಅಲ್ಲಿ ಇವತ್ತಿನವರೆಗೂ ಅಕ್ಕ ಪಕ್ಕದ ಜನರ ಭೂಮಿಯಿಂದ ಕಲ್ಲುಗಳನ್ನು ತಂದು ನಿರಂತರವಾಗಿ ಕಲ್ಲು ಪುಡಿ ಮಾಡುವ ಕೆಲಸ ಸಾಗುತ್ತಲೇ ಇದೆ.  ಇದರಿಂದಾಗುವ ತೊಂದರೆಗಳನ್ನು ಪ್ರಶ್ನಿಸಲು ಹೋದವರಿಗೆ ಹೊಡೆದು  ಪೊಲೀಸ್ ಸ್ಟೇಷನ್‌ಗೆ ಹಾಕುತ್ತಾರೆ. ಇವರು ಅಕ್ಕ ಪಕ್ಕದ ಸರ್ಕಾರಿ ಭೂಮಿಯಿಂದ ಹಾಗೂ  ಪರಿಶಿಷ್ಟ ಜಾತಿಯವರಿಗೆ ಸೇರಿದ ಭೂಮಿಯಿಂದಲೂ ಕಲ್ಲನ್ನು ಅಗೆದು ತಂದು ಪುಡಿ ಮಾಡುತ್ತಾರೆ. ಇವರು ಕಲ್ಲು ಪುಡಿ ಮಾಡುವ ರಭಸಕ್ಕೆ ಸುತ್ತ ಮುತ್ತಲಿನ ಮನೆಗಳೆಲ್ಲಾ ದೂಳುಮಯವಾಗಿ  ಅನೇಕ ಕಷ್ಟಗಳಿಗೆ ತುತ್ತಾಗುತ್ತಿದ್ದಾರೆ.

 ಗಣಿಗಾರಿಕೆ ಹಾಗೂ ಜಲ್ಲಿ ಕಲ್ಲನ್ನು ಪುಡಿ ಮಾಡುವ ಭರದಲ್ಲಿ ಸುತ್ತಲಿನ ಪ್ರದೇಶದಲ್ಲಿ ರೈತರ ಗದ್ದೆಗಳಲ್ಲಿ ಕಲ್ಲಿನ ಪುಡಿಯ ಬಿಳಿ ನೀರು ತುಂಬಿಕೊಂಡು  ಬೆಳೆಯೇ ಆಗುತ್ತಿಲ್ಲ ಎಂಬುದು ಇಲ್ಲಿನ ರೈತರ ಗೋಳಾಗಿದೆ. ಇದರ ತೊಂದರೆಗಳನ್ನು ಗಣಿ  ಮಾಲೀಕರಲ್ಲಿ ಹೇಳಲು ಹೋದರೆ ಸುಳ್ಳು ಸುಳ್ಳು ಹೇಳಿ ಬೈದು ಬಾಯಿ ಮುಚ್ಚಿಸಿ ಕಳಿಸುತ್ತಾರೆ. ಪೊಲೀಸರು, ಅಧಿಕಾರಿಗಳೂ ಇದರಲ್ಲಿ ಶಾಮೀಲಾದಂತೆ ತೋರುತ್ತದೆ.

 ಈ ಗ್ರಾಮದಲ್ಲಿರುವ ರಸ್ತೆಗಳಲ್ಲಿ ಘನ ವಾಹನಗಳು  ನಿರಂತರವಾಗಿ ಓಡಾಡುವುದರಿಂದಾಗಿ ರಸ್ತೆಗಳು ಹೊಂಡವಾಗಿವೆ. ಮಳೆ ಬಂತೆಂದರೆ ಇಲ್ಲಿ ನಡೆದಾಡಲು ಹಾಗೂ ವಾಹನಗಳಲ್ಲಿ ಒಡಾಡಲೂ ಕಷ್ಟಕರವಾಗಿದೆ. ಈ ರಸ್ತೆಗಳನ್ನು ನೀವೇ ನೋಡಿ. ಪ್ರೊಫೆಸರ್ ಶ್ರೀ ಆರ್ ನಾರಾಯಣ ಪ್ರಭು ಅವರಿಗೆ 2018ರವರೆಗೆ ಅಷ್ಟೇ ಗಣಿಗಾರಿಕೆಯ ಲೈಸೆನ್ಸ್ ಇದ್ದರೂ, ಇವತ್ತಿನವರೆಗೂ  ಅಕ್ರಮವಾಗಿ ಗಣಿಗಾರಿಕೆಯನ್ನು  ನಿತ್ಯ ಮುಂದುವರಿಸುತ್ತಾ ಅಕ್ಕ ಪಕ್ಕದವರಿಗೆ ತೊಂದರೆ ಕೊಡುತ್ತಾ ಸಾರ್ವಜನಿಕ ಶಾಂತಿ ಭಂಗ ಮಾಡುತ್ತಲೇ ಇದ್ದಾರೆ.  ಪೊಲೀಸರೂ  ಅಧಿಕಾರಿಗಳೂ ಇವರ ಕೈಯೊಳಗಿರುವುದರಿಂದ ಇವರ ವಿರುದ್ಧ ಹೋಗಲೂ ಆಗದೆ  ಮಾತಾಡಲೂ ಆಗದೆ  ನಿತ್ಯ ನರಕವನ್ನು ಅನುಭವಿಸುತ್ತಾ ಜೀವನ ಮಾಡುವ ಪರಿಸ್ಥಿತಿ ಇಲ್ಲಿನ ಜನರಿಗೆ ಎದುರಾಗಿದೆ.

Exit mobile version