ಕಿಚ್ಚ ಸುದೀಪ್ ಬಗ್ಗೆ ರಷ್ಯನ್ ಯುವತಿಯೊಬ್ಬಳು ಹೇಳಿದ್ದೇನು ಗೊತ್ತಾ.. ?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರಿಗೆ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ  ಪರಭಾಷಾ ಚಿತ್ರರಂಗದಲ್ಲೂ ಭಾರೀ ಅಭಿಮಾನಿ ಬಳಗವಿದೆ..ಸೋಶಿಯಲ್ ಮೀಡಿಯಾದಲ್ಲೂ ಸಾಕಷ್ಟು ಫ್ಯಾನ್ಸ್ ಪೇಜ್ ಗಳೂ ಇವೆ..ಇವುಗಳಲ್ಲಿ ನಿತ್ಯವೂ ಕಿಚ್ಚನ ಬಗ್ಗೆ ಸಾಕಷ್ಟು ವಿಚಾರಗಳು ಹರಿದಾಡುತ್ತಲೇ ಇರುತ್ತವೆ..ಸೂಕ್ತವಾದ ಪೋಸ್ಟ್ ಗಳಿಗೆ ಕಿಚ್ಚ ಸ್ಪದಿಸುತ್ತಾರೆ ಕೂಡ..ಈಗ್ಯಾಕೆ ಈ ಮಾತು ಅಂತೀರಾ.. ಹೌದು..ರಷ್ಯನ್ ಮೂಲದ ಮರೀನಾ ಕಾರ್ಟಿಂಕಾ ಎಂಬ ಯುವತಿಯೊಬ್ಬಳು ಇಂತದ್ದೇ ಒಂದು ಫ್ಯಾನ್ಸ್ ಪೇಜ್ ನ ಮೂಲಕ ಸುದೀಪ್ ರನ್ನು ಹಾಡಿ ಹೊಗಳಿ ಸಂದೇಶವೊದನ್ನು ರವಾನಿಸಿದ್ದಾಳೆ..ಸುದೀಪ್ ರವರ ದೊಡ್ಡ ಅಭಿಮಾನಿಯಾಗಿರುವ ಈಕೆ ತನ್ನ ಅಭಿಮಾನವನ್ನು ವ್ಯಕ್ತಪಡಿಸಿದ್ದಾಳೆ..

“ನಮಸ್ಕಾರ ಸುದೀಪ್ ಅವರೆ. ನಾನು ಮರೀನಾ ಕಾರ್ಟಿಂಕಾ. ನಿಮ್ಮ ಅಭಿನಯ ನನಗೆ ತುಂಬ ಇಷ್ಟ. ನಾನು ಇಲ್ಲಿ, ನೀವು ನಡೆಸಿಕೊಡುವ ಬಿಗ್ ಬಾಸ್ ಕಾರ್ಯಕ್ರಮವನ್ನು ನೋಡಲು ಪ್ರಯತ್ನ ಪಡುತ್ತೇನೆ. ನೀವು ಅದ್ಭುತವಾದ ನಟ. ನಿಮ್ಮ ಸಿನಿಮಾ ನೋಡಲು ನಿಮ್ಮ ಸಿನಿಮಾಗಳನ್ನು ನೋಡಿ ತುಂಬ ಇಷ್ಟಪಟ್ಟಿದ್ದೇನೆ. ಕೋಟಿಗೊಬ್ಬ, ಪುಲಿ, ಪೈಲ್ವಾನ್, ಹೆಬ್ಬುಲಿ ಸೇರಿದಂತೆ ಅನೇಕ ಸಿನಿಮಾಗಳನ್ನು ನೋಡಿದ್ದೇನೆ. ನಾನು ಒಂದು ದಿನ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ಭಾವಿಸಿದ್ದೇನೆ. ನೀವು ಆರೋಗ್ಯವಾಗಿ ಮತ್ತು ಸಂತೋಷವಾಗಿರಿ ಎಂದು ಹಾರೈಸುತ್ತೇನೆ. ನಮಗೆ ಮನೋರಂಜನೆ ನೀಡುತ್ತಿರುವುದಕ್ಕೆ ಧನ್ಯವಾದಗಳು” ಎಂದು ಹೇಳಿರುವ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Exit mobile version