ಕೀನ್ಯಾ ಕಾಡಿನಲ್ಲಿ ಡಿ ಬಾಸ್ ಹೇಗಿದ್ದಾರೆ..??

ಹೇಳಿ ಕೇಳಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಚಾಲೆಂಜ್ಗಳನ್ನು ಸ್ವೀಕರಿಸೋದಂದರೆ ಬಹಳ ಇಷ್ಟ..ಅದ್ರಲ್ಲೂ ಪ್ರಾಣಿ ಪ್ರಿಯನಾಗಿರುವ ಡಿ ಬಾಸ್ ಕಬಿನಿ ಕಾಡಿನಲ್ಲಿ ಸೆರೆ ಹಿಡಿದಿರುವ ಫೊಟೋಗಳಂತೂ ಎಲ್ಲರ ಎಚ್ಚರಿಗೂ ಅಚ್ಚರಿ ಮೂಡಿಸಿತ್ತು.

ಸದ್ಯ ಮತ್ತಷ್ಟು ವನ್ಯ ಜೀವಿಗಳ ಫೋಟೋ ಸೆರೆ ಹಿಡಿಯೋದಕ್ಕಾಗಿ ಸೆ.20ರಂದು ಡಿ ಬಾಸ್ ಆಫ್ರಿಕಾ ಖಂಡದ ಕೀನ್ಯಾ ಕಾಡಿಗೆ ತೆರಳಿದ್ದಾರೆ..ಪ್ರಕೃತಿಯ ಸೌಂದರ್ಯವನ್ನು , ಕಾಡು ಪ್ರಾಣಿ ಪಕ್ಷಿಗಳನ್ನು ಈಗಾಗ್ಲೇ ಅವರು ಕ್ಯಾಮರಾ ಕಣ್ಣುಗಳಲ್ಲಿ ಸೆರೆ ಹಿಡಿದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಮುಗುಳು ನಗೆಯೊಂದಿಗನ ಫೋಟೋವನ್ನು ಹಂಚಿಕೊಂಡಿದ್ದಾರೆ..

Exit mobile version