ಕೊಪ್ಪಳದ ಊಟದ ತಟ್ಟೆಗೆ ಬೀಳುತ್ತಿದೆ ಕಲ್ಲು, ಮಣ್ಣು

Illigal mining has become curse to the Koppal people| citizen journalist | vijayatimes

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕು ಹೋಬಳಿಯ ಹನುಮಸಾಗರ್ ಪುರ್ತಗೇರಿ ಗ್ರಾಮದಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಅಕ್ಕ ಪಕ್ಕದಲ್ಲಿ ಅಂದರೆ ಕೇವಲ 25 ಮೀಟರ್ ಅಂತರದಲ್ಲಿ ಮನೆಗಳು ಇದ್ದು ಆ ಮನೆಗಳಿಗೆ ಹಾನಿಯಾಗಿದೆ ಮನೆಗಳೆಲ್ಲಾ ಬಂಡೆ ಒಡೆಯುವ ರಭಸಕ್ಕೆ ಬಿರುಕು ಬಿಟ್ಟಿವೆ. ಮನೆಯೊಳಗಿರುವ ಹೆಂಗಸರು ಮಕ್ಕಳು ಭಯದಿಂದಲೇ ಬದುಕುವಂತಾಗಿದೆ. ಇಲ್ಲಿ ಬಂಡೆಗಳನ್ನು ಒಡೆಯುವಾಗ ಆಗುವ ಶಬ್ಧಕ್ಕೆ ಭೂಮಿ ಅದುರುತ್ತಿದೆ. ದೂಳೆಲ್ಲಾ ಅಕ್ಕ ಪಕ್ಕದ ಮನೆಯಲ್ಲಿ ಮುತ್ತಿಕೊಳ್ಳುತ್ತದೆ. ಊಟಕ್ಕೆ ಕೂತಾದ ನೆಮ್ಮದಿಯಿಂದ ಊಟವನ್ನೂ ಮಾಡುವಂತಿಲ್ಲ. ಊಟಕ್ಕೂ ದೂಳು ಮಣ್ಣು ಬಂದು ಬೀಳುತ್ತದೆ. ಇದರಿಂದಾಗಿ ಇಲ್ಲಿನ ನಿವಾಸಿಗಳಿಗೆ ನೆಮ್ಮದಿಯೇ ಇಲ್ಲದಂತಾಗಿದೆ. ಯಾವಾಗ ಮನೆ ಕುಸಿದು ಬೀಳುತ್ತದೋ ಎಂಬ ಭೀತಿಯಿಂದಲೇ ಇರಬೇಕಾಗಿದೆ. ಮನೆಗಳ ಗೋಡೆಗಳು ಬಾಯಿತೆರೆದು ನಿಂತಿವೆ.ಆಗಲೋ ಈಗಲೋ ಬೀಳುವ ಪರಿಸ್ಥಿತಿ ಎದುರಾಗಿದೆ.

ಇವರು ಎರಡು ವರ್ಷದಿಂದ ನಿತ್ಯ ಅನುಭವಿಸುತ್ತಿರುವ ತೊಂದರೆಗಳನ್ನು ಗಣಿಗಾರಿಕೆಯ ಮಾಲೀಕ ಕಲ್ಲಪ್ಪ ಜಾಲಿಹಾಳ ಅವರಲ್ಲಿ ಹೇಳಿದ್ರೆ ಬೈದು ಕಳಿಸುತ್ತಾರೆ. ಗಣಿಗಾರಿಕೆ ಮಾಡುವ ಹಕ್ಕು ನಮಗಿದೆ, ಎನ್ನುತ್ತಾರೆ. ಮಾತ್ರವಲ್ಲದೆ ಕೇಸು ಮಾಡಿ ನಿಮ್ಮನ್ನು ಒಳಗೆ ಹಾಕಿಸುತ್ತೇನೆ ಎಂದು ಅಹಂಕಾರದಿಂದ ಮಾತನಾಡುತ್ತಾರೆ. ಇಲ್ಲಿ ಪುಟ್ಟ ಪುಟ್ಟ ಮಕ್ಕಳನ್ನು ಕಟ್ಟಿಕೊಂಡು ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಸರ್ಕಾರದ ಕಾನೂನು ಪ್ರಕಾರ ಗಣಿಗಾರಿಕೆಯನ್ನು 50 ಕಿ ಮೀಟರ್ ದೂರದಲ್ಲಿ ಮಾಡಬೇಕೆಂದಿದೆ ಆದರೆ ಇಲ್ಲಿ ಕೇವಲ 25 ಮೀಟರ್  ಅಂತರದಲ್ಲೇ ಇಲ್ಲಿ ಗಣಿಗಾರಿಕೆ ಯಾವ ಭಯವಿಲ್ಲದೆ ನಡೆಯುತ್ತಿದೆ.  ಇದರಿಂದಾಗಿ ಕಲುಷಿತಗೊಂಡ ಗಾಳಿಯಿಂದ ಅನೇಕ ಕಾಯಿಲೆಗಳು ಜನರನ್ನು ಕಾಡುತ್ತಿವೆ ಆಸ್ಪತ್ರೆಗಳಿಗೆ ನಿತ್ಯ ಓಡಾಡುವುದೇ ಜನರ ಗೋಳಾಗಿದೆ.

ಬಂಡೆಗಳನ್ನು ಒಡೆಯುವಾಗ ಕರ್ಕಶ ಶಬ್ಧಕ್ಕೆ ಕಿವಿಗಳೂ ಒಡೆದು ಹೋಗುವ ಸಂಭವವಿದೆ. ಮದ್ದು ಗುಂಡುಗಳಿಂದ ಬಂಡೆಗಳು ಸಿಡಿಯುವುದರಿಂದ ಪಕ್ಕದಲ್ಲಿರುವ ಕಾಲುವೆಯ ನೀರು ಕೂಡಾ ಮಲಿನಗೊಂಡು ಸೊಳ್ಳೆಗಳ ಕಾಟ ಹೆಚ್ಚಾಗಿ ಅನೇಕ ಸಾಂಕ್ರಾಮಿಕ ಕಾಯಿಲೆಗಳಿಗೆ ಜನ ತುತ್ತಾಗುತ್ತಿದ್ದಾರೆ.  ಇನ್ನು ಇಲ್ಲಿನ ಜನರು ಜೀವ ಭಯದಿಂದಲೇ ಬದುಕುವಂತಾಗಿದೆ. ಕಮಲಪ್ಪ ಎಚ್ ಜಾಲಿಹಾಳ ಅವರ ಒಡೆತನದ ಗಣಿಗಾರಿಕೆ  ಶ್ರೀ ವಾರಿ ಮಾರುತೇಶ್ವರ ಕಂಪೆನಿಯನ್ನು ಬಂದ್ ಮಾಡಬೇಕೆಂಬುದು ಸಾರ್ವಜನಿಕರ ಮನವಿಯಾಗಿದೆ. ನೋಡಿದಿರಲ್ಲಾ ಕುಷ್ಟಗಿ ಜಿಲ್ಲೆಯ ಪುರತಗೇರಿ ಗ್ರಾಮದ ಜನರ ಸಂಕಷ್ಟಗಳನ್ನು ಈ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಜನರ ಕಷ್ಟಗಳನ್ನು ದೂರ ಮಾಡಲಿ ಗಣಿಗಾರಿಕೆಯನ್ನು ನಿಲ್ಲಿಸಿ ನಿರಾತಂಕವಾಗಿ ಜನ ಬದುಕುವಂತೆ ಮಾಡಲಿ ಎಂಬುದು ವಿಜಯಾ ಟೈಮ್ಸ್ ಆಶಯವಾಗಿದೆ.

 ಸಿಟಿಜನ್ ಜರ್ನಲಿಸ್ಟ್ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಖಿನ ಕೂಡಲಗೌಡ ಎಸ್ ದೇಶಟ್ಟಿ.

Exit mobile version