ನವದೆಹಲಿ, ಅ.20: ಕಳೆದ 24 ಗಂಟೆಗಳಲ್ಲಿ 46,791 ಪ್ರಕರಣಗಳು ಪತ್ತೆಯಾಗಿದೆ. ಅಲ್ಲದೆ 587 ಮಂದಿ ಸಾವನ್ನಪ್ಪಿದ್ದಾರೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಈ ಆಧಾರದ ಮೇಲೆ ಭಾರತದ ಒಟ್ಟು ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದ್ದು, ಒಂದೇ ದಿನ 46,791 ಕೇಸ್ ಪತ್ತೆಯಾಗುವುದರೊಂದಿಗೆ ಪ್ರಸ್ತುತ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 75,97,064ಕ್ಕೆ ತಲುಪಿದೆ. ಇದರಂತೆ ಸಾವಿನ ಸಂಖ್ಯೆ ಕೂಡ 1,15,197ಕ್ಕೆ ಏರಿಕೆಯಾಗಿದೆ.