ಕೊರೊನಾ ಸಿಂಗಾಪುರದಲ್ಲಿ ದುರ್ಬಲವಾಗಲು ಕಾರಣವೇನು ಗೊತ್ತಾ? ಇಲ್ಲಿದೆ ಮಾಹಿತಿ

ಕೊರೊನಾ ಈಗ ವಿಶ್ವ ವ್ಯಾಪಿ. ಈ ಮಹಾಮಾರಿಯನ್ನು ನಿಯಂತ್ರಿಸಲು ಒಂದೊAದು ದೇಶವೂ ಒಂದೊAದು ಕ್ರಮಗಳನ್ನು ಕೈಗೊಂಡಿದೆ. ಈ ಪೈಕಿ, ಸಿಂಗಾಪುರದಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳು ತುಂಬಾನೇ ಪರಿಣಾಮಕಾರಿಯಾಗಿವೆ. ವಿಶ್ವದ ಗಮನ ಸೆಳೆದಿದೆ. ಹೀಗಾಗಿ, ಸಿಂಗಾಪುರದಲ್ಲಿ ಯಾವ ರೀತಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ಸಿಂಗಾಪುರದಲ್ಲೇ ನೆಲೆಸಿರುವ ಕನ್ನಡತಿ, ಪತ್ರಕರ್ತೆ ಶ್ರೀವಿದ್ಯಾ ರಾವ್ ಸಮಗ್ರವಾಗಿ ಮಾಹಿತಿ ನೀಡಿದ್ದಾರೆ.

ಒಂದು ಅನಾಮಧೇಯ ಕರೆ ಬರುತ್ತದೆ. ಯಾರಿರಬಹುದು ಎಂದು ಆಲೋಚಿಸುತ್ತಾ ಮಾತನಾಡಲು ಮುಂದಾದಾಗ, ಅತ್ತ ಕಡೆಯಿಂದ “ನೀವು ಆ ದಿನ ಅಷ್ಟು ಗಂಟೆಗೆ ಪ್ರಯಾಣ ಮಾಡಿದ್ದೀರಿ ಅಥವಾ ಇಂತವರ ಜೊತೆಗೂಡಿ ತೆರಳಿದ್ದೀರಿ ಹೌದಾ..? ಎಂದು ಕೇಳುತ್ತಾರೆ. ಇದರ ಬಗ್ಗೆ ಪರಾಮರ್ಶಿಸುತ್ತಿದ್ದಂತೆಯೇ.. “ಮುಂದಿನ ೧೪ ದಿನಗಳವರೆಗೆ ನೀವು ಮನೆ ಬಿಟ್ಟು ಹೊರಗೆ ಹೋಗುವ ಹಾಗೆ ಇಲ್ಲ ಎಂದು ಹೇಳುತ್ತಾ ಕರೆ ನಿಂತು ಬಿಡುತ್ತದೆ. ಅಷ್ಟೇ ಮುಂದಿನ ಕೆಲವೇ ಘಂಟೆಗಳಲ್ಲಿ ಒಂದಿಬ್ಬರು ಅಧಿಕಾರಿಗಳು ಆ ಮನೆಗೆ ಬಂದು, ದಿಗ್ಬಂಧನ ಅಥವಾ ಸ್ಟೇ ಹೋಂ ಆದೇಶ ನೀಡಿ, ಕಾನೂನು ಉಲ್ಲಂಘಿಸಿದರೆ ಏನೆಲ್ಲಾ ಪರಿಣಾಮ ಎದುರಿಸಬೇಕು ಎಂದು ಎಚ್ಚರಿಸಿ ತೆರಳುತ್ತಾರೆ. ಸರ್ಕಾರದ ಕೆಲಸ ಇಷ್ಟಕ್ಕೇ ಮುಗಿದಿರೋದಿಲ್ಲ. ಅಂತವರ ಮೇಲೆ ಹದ್ದಿನ ಕಣ್ಣು ಇಡಲು ಬೇಕಾದ ಎಲ್ಲಾ ವ್ಯವಸ್ಥೆಗಳೂ ಸಿದ್ಧವಾಗಿರುತ್ತವೆ.

ಯಾರಾದ್ರೂ ಎಲ್ಲಾದ್ರೂ ಪ್ರಯಾಣ ಮಾಡುತ್ತಿದ್ದಾಗ ಪಕ್ಕದವರಿಗೆ ಕೊರೊನಾ ಸೋಂಕು ತಗುಲಿದ್ದರೆ ಅಥವಾ ಶಂಕಿತಗೊAಡು ಆಸ್ಪತ್ರೆಗೆ ದಾಖಲಾಗಿದ್ದರೆ ಇಂತಹ ಕರೆಗಳು ಬರೋದು ಸಾಮಾನ್ಯ. ಸಿಸಿಟಿವಿ ಕ್ಯಾಮೆರಾಗಳು, ಡೇಟಾ ಸಂಗ್ರಹ ಜೊತೆಗೆ ಆ ರೋಗಿಯಿಂದ ಸಂಗ್ರಹಿಸಿದ ಮಾಹಿತಿಗಳಿಂದ ಈ ವ್ಯವಸ್ಥೆ ನಡೆಯುತ್ತದೆ. ಇದಕ್ಕಾಗಿ ಸಿಂಗಾಪುರದ ಪೊಲೀಸರು, ಸೇನಾ ವಿಭಾಗದಲ್ಲಿ ಸೇವೆ ಸಲ್ಲಿಸುವವರು ನಿರಂತರವಾಗಿ ಕಾರ್ಯನಿರ್ವಹಿಸುತ್ತಾ ಇದ್ದಾರೆ.

ಸಿಂಗಾಪುರ ತುಂಬಾ ಪುಟ್ಟ ದೇಶ. ಒಟ್ಟು ಜನಸಂಖ್ಯೆ ೫,೮೩೮,೨೦೮. ಪ್ರತಿ ಚದರ ಕಿಲೋಮೀಟರ್ ಗೆ ೮೩೫೮ ಜನ ಸಾಂದ್ರತೆ ಹೊಂದಿದೆ. ಹಾಗಾಗಿ ಕೊರೊನಾ ಸೋಂಕು ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಇಡೀ ದೇಶವನ್ನೇ ವ್ಯಾಪಿಸುವುದರಲ್ಲಿ ಸಂಶಯವೇ ಇಲ್ಲ. ಮಾರ್ಚ್ ೨೮ ತಾರೀಕಿನವರೆಗೆ ಇಲ್ಲಿ ಪತ್ತೆಯಾದ ಕೊರೊನಾ ಸೋಂಕು ಹೊಂದಿದವರ ಸಂಖ್ಯೆ ೮೦೨. ಈ ಸೋಂಕಿನಿAದಾಗಿ ಮೂವರು ಇದುವರೆಗೆ ಮೃತಪಟ್ಟಿದ್ದಾರೆ. ಇವುಗಳಲ್ಲಿ ೧೯೮ ಮಂದಿ ಗುಣಮುಖರಾಗಿದ್ದಾರೆ. ಈ ರೋಗಿಗಳ ನಿಕಟ ಸಂಪರ್ಕ ಹೊಂದಿದ್ದ ಸುಮಾರು ೮,೯೩೦ ಮಂದಿಯನ್ನು ಸರ್ಕಾರ ಗುರುತಿಸಿದೆ. ಇವರ ಪೈಕಿ ೨,೬೪೩ ಮಂದಿ ದಿಗ್ಬಂಧನ ಆದೇಶವನ್ನು ಪಾಲಿಸುತ್ತಿದ್ದರೆ, ೬,೨೮೭ ಮಂದಿ ಈ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಸ್ಟೇ ಹೋಂ ನೋಟಿಸ್‌ನಲ್ಲಿ ಸುಮಾರು ೩೮,೦೦೦ ಮಂದಿ ಇದ್ದಾರೆ. ಇಷ್ಟು ಕಟ್ಟುನಿಟ್ಟಾಗಿ ವ್ಯವಸ್ಥೆಗಳು ನಡೆಯುತ್ತಿದೆ ಅಂದರೆ ಇಲ್ಲಿನ ಸರ್ಕಾರದ ನಿರ್ದಾಕ್ಷಿಣ್ಯ ಕಾನೂನು ಹಾಗೂ ಅದನ್ನು ಚಾಚು ತಪ್ಪದೆ ಪಾಲಿಸುತ್ತಿರುವ ಜನತೆಯೇ ಕಾರಣ.

ನಮಗೆಲ್ಲಾ ಇಂತಹ ಕಾನೂನುಗಳು ಅಚ್ಚರಿಯಾದರೆ, ಇಲ್ಲಿನ ಜನತೆ ದಿನನಿತ್ಯದ ಬದುಕಿನಂತೆ ಇದಕ್ಕೂ ಒಗ್ಗಿ ಹೋಗಿದ್ದಾರೆ. ಅಂದ ಹಾಗೆ ಕಾನೂನುಗಳ ಪಟ್ಟಿ, ಇದನ್ನು ಕಡ್ಡಾಯವಾಗಿ ಪಾಲಿಸಲೇಬೇಕೆಂದು ಜನರ ಮುಂದಿಟ್ಟ ವಿಚಾರಗಳು ಹಾಗೂ ಉಲ್ಲಂಘಿಸಿದ್ದಲ್ಲಿ ಆಗುವ ಪರಿಣಾಮ ಜೊತೆಗೆ ಅವುಗಳನ್ನು ಎದುರಿಸಿದ ಕೆಲ ಘಟನೆಗಳು ಇಂತಿವೆ.

ಮೊದಲನೆಯದಾಗಿ ಇಲ್ಲಿನ ಪತ್ರಿಕೋದ್ಯಮ ಸರ್ಕಾರದ ನಿಯಂತ್ರಣದಲ್ಲಿದೆ. ಹಾಗಾಗಿ ಪತ್ರಿಕೆ ಹಾಗೂ ಟಿವಿಗಳಲ್ಲಿ ಬರುವ ಎಲ್ಲಾ ವಿಚಾರಗಳು, ಸುದ್ದಿಗಳು ಸಕಾರಾತ್ಮಕವಾಗಿರುತ್ತವೆ. ಇದನ್ನು ಮೀರಿ ಅದರಲ್ಲೂ ಕೊರೊನಾ ವೈರಸ್‌ಗೆ ಸಂಬAಧಿಸಿದ ವದಂತಿಗಳನ್ನು ಸಾಮಾಜಿಕ ಜಾಲತಾಣಗಳಿಂದಲೇ ಅಳಿಸಿ ಹಾಕುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ. ಅಲ್ಲದೆ, ಸರ್ಕಾರದ ವೆಬ್‌ಸೈಟ್ ಅನುಸರಿಸುವಂತೆ ಹಾಗೂ ಪ್ರತಿ ದಿನ ಈ ಕುರಿತಂತೆ ಮಾಹಿತಿ ರವಾನಿಸುತ್ತಿದೆ. ಪತ್ರಿಕೆ, ಟಿವಿಗಳಲ್ಲೂ ಜನರಿಗೆ ಸೋಂಕಿನ ಬಗ್ಗೆ ವಿವರಣೆ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವ್ಯಂಗ್ಯಚಿತ್ರಗಳ ಮುಖಾಂತರ ಪ್ರತಿ ನಿತ್ಯ ವಿವರಿಸುತ್ತಿದೆ.

ಬೇರೆ ಬೇರೆ ದೇಶಗಳಲ್ಲಿ ನೆಲೆಸಿರುವ ಸಿಂಗಾಪುರದ ನಾಗರಿಕರು ಇದೀಗ ತಾಯ್ನಾಡಿಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಪ್ರಾರಂಭದಲ್ಲಿ ಸರ್ಕಾರದಿಂದಲೇ ಪ್ರತಿ ಮನೆಗೆ ಇಂತಿಷ್ಟು ಉಚಿತ ಸಾನಿಟೈಸೆರ್, ಮಾಸ್ಕ್ ವಿತರಣೆ ನಡೆದಿತ್ತು. ಕೊರೊನಾ ವೈರಸ್‌ಗೆ ತುತ್ತಾಗಿ ಆಸ್ಪತ್ರೆ ಸೇರಿದವರಿಗೆ ಉಚಿತ ಚಿಕಿತ್ಸೆ ಸೌಲಭ್ಯವನ್ನು ಇಲ್ಲಿ ನೀಡಲಾಗುತ್ತಿದೆ. ವರ್ಕ್ ಫ್ರಮ್ ಹೋಮ್ ಮಾಡಲಾಗದವರು, ಕೊರೊನಾ ವೈರಸ್‌ನಿಂದ ಬಳಲುತ್ತಿರುವವರು, ದಿಗ್ಬಂಧನ ಅಥವಾ ಸ್ಟೇ ಹೋಂ ಆದೇಶ ಅನುಸರಿಸುತ್ತಿರುವವರು ಹಾಗೂ ಉದ್ಯೋಗಕ್ಕೆ ಗೈರುಹಾಜರಿ ಆಗಿ ರಜೆ ಹೊಂದಿರುವ ಸಿಂಗಾಪುರದ ನಾಗರಿಕರು, ಪರ್ಮನೆಂಟ್ ರೆಸಿಡೆನ್ಸಿ ಪಾಸ್ ಹಾಗೂ ವರ್ಕ್ ಪಾಸ್ ಹೊಂದಿರುವವರಿಗೆ ತಲಾ ೧೦೦ ಡಾಲರ್ ಎಂಬAತೆ ನಿತ್ಯ ಭತ್ಯೆಯನ್ನು ಸರ್ಕಾರವೇ ನೀಡುತ್ತಿದೆ.

ಆದರೆ ಸರ್ಕಾರದ ಪ್ರಯಾಣ ಸಲಹೆಗಳ ಹೊರತಾಗಿಯೂ ಅನಗತ್ಯವಾಗಿ ಬೇರೆ ದೇಶಕ್ಕೆ ಪ್ರಯಾಣ ಬೆಳೆಸುವ ನಿವಾಸಿಗಳು, ಒಂದು ವೇಳೆ ಕೊರೊನಾ ವೈರಸ್ ಸೋಂಕಿಗೆ ತುತ್ತಾದರೆ, ಪೂರ್ಣ ಆಸ್ಪತ್ರೆ ಶುಲ್ಕವನ್ನು ತಾವೇ ಪಾವತಿಸಬೇಕಾಗುತ್ತದೆ.

ಮುನ್ನೆಚ್ಚರಿಕಾ ಕ್ರಮವಾಗಿ ಏಪ್ರಿಲ್ ೩೦ ರವರೆಗೆ ಸಿಂಗಾಪುರದ ಬಾರ್‌ಗಳು, ಸಿನಿಮಾ ಮಂದಿರಗಳು ಹಾಗೂ ಇತರೆ ಎಲ್ಲಾ ಮನರಂಜನಾ ಸ್ಥಳಗಳನ್ನು ಮುಚ್ಚಲು ಆದೇಶ ಹೊರಡಿಸಲಾಗಿದೆ. ಯಾವುದೇ ಗುಂಪುಗಳು ಏರ್ಪಟ್ಟರೂ ೧೦ ಮಂದಿಯನ್ನು ಮೀರುವ ಹಾಗಿಲ್ಲ ಎಂದು ಸರ್ಕಾರ ತಿಳಿಸಿದೆ. ಈ ಅವಶ್ಯಕತೆಗಳನ್ನು ಅನುಸರಿಸಲು ಸಾಧ್ಯವಾಗದ ವ್ಯಾಪಾರಸ್ಥರು ಕಡ್ಡಾಯವಾಗಿ ಮಾಲ್‌ಗಳು ಮತ್ತು ಆಕರ್ಷಣೆಗಳನ್ನು ಮುಚ್ಚಬೇಕು ಇಲ್ಲದೆ ಹೋದಲ್ಲಿ ಹೆಚ್ಚುವರಿ ದಂಡ ಕಟ್ಟಬೇಕು ಎಂದು ವಿವರಿಸಲಾಗಿದೆ.

ವಿವಿಧ ಶಾಲೆಗಳ ವಿದ್ಯಾರ್ಥಿಗಳ ಬೆರೆಯುವಿಕೆಯನ್ನು ಕಡಿಮೆ ಮಾಡಲು ಮತ್ತು ವಿದ್ಯಾರ್ಥಿಗಳ ಸುರಕ್ಷತೆಯನ್ನು ಹೆಚ್ಚಿಸಲು ಎಲ್ಲಾ ಟ್ಯೂಷನ್ ಸೆಂಟರ್ ಮತ್ತು ಎನ್‌ರಿಚ್‌ಮೆಂಟ್ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ. ಎಲ್ಲಾ ಧಾರ್ಮಿಕ ಸೇವೆಗಳನ್ನೂ ಸ್ಥಗಿತಗೊಳಿಸಲಾಗಿದೆ. ಮಾಲ್‌ಗಳು, ವಸ್ತು ಸಂಗ್ರಹಾಲಯಗಳು ಮತ್ತು ರೆಸ್ಟೋರೆಂಟ್‌ಗಳು ಮುಕ್ತವಾಗಿರಲು ಜನಸಂದಣಿಯನ್ನು ಕಡಿಮೆ ಮಾಡುವಂತೆ ಆದೇಶಿಸಿದೆ.

ಸಿಂಗಾಪುರದ ವಿಮಾನ ನಿಲ್ದಾಣವಂತೂ ಕಟ್ಟುನಿಟ್ಟಿನ ಕಾನೂನು ಪಾಲಿಸುತ್ತಿದೆ. ಡಜನ್‌ಗಟ್ಟಲೆ ಥರ್ಮಲ್ ಸ್ಕ್ಯಾನರ್ ಪ್ರತಿ ಟರ್ಮಿನಲ್‌ಗಳಲ್ಲೂ ರಾರಾಜಿಸುತ್ತಿವೆ. ನಿಲ್ದಾಣಗಳಲ್ಲಿ ಸಂಚರಿಸುವ ಪ್ರತಿಯೊಬ್ಬ ವ್ಯಕ್ತಿಯ ದೇಹದ ಉಷ್ಣತೆಯನ್ನು ಸ್ವಯಂಚಾಲಿತವಾಗಿ ದಾಖಲಿಸುತ್ತಿದೆ.

ಎಲ್‌ಟಿವಿಪಿ (ಲಾಂಗ್ ಟರ್ಮ್ ವಿಸಿಟ್ ಪಾಸ್) ತಾತ್ವಿಕವಾಗಿ ಅನುಮೋದನೆ ಪಡೆದವರು ಮತ್ತು ವಿದ್ಯಾರ್ಥಿ ಪಾಸ್ ಹೊಂದಿರುವವರು ಸೇರಿದಂತೆ ಎಲ್ಲಾ ದೀರ್ಘಕಾಲೀನ ವಿಸಿಟ್ ಪಾಸ್ (ಎಲ್‌ಟಿವಿಪಿ) ಹೊಂದಿರುವವರು ಸಿಂಗಾಪುರಕ್ಕೆ ಪ್ರವೇಶಿಸುವ ಮೊದಲು ಸರ್ಕಾರದಿಂದ ಅನುಮೋದನೆ ಪಡೆಯಬೇಕು.

ಅಮೆರಿಕ ಹಾಗೂ ಬ್ರಿಟನ್‌ಗೆ ಪ್ರಯಾಣಿಸಿ ಹಿಂದಿರುಗಿದ ಸಿಂಗಾಪುರ ನಿವಾಸಿಗಳನ್ನು ವಿಮಾನ ನಿಲ್ದಾಣದಿಂದಲೇ ಹೋಟೆಲ್‌ಗಳಿಗೆ ಕರೆದೊಯ್ಯಲಾಗುತ್ತಿದೆ. ಅಂತವರು ೧೪ ದಿನಗಳ ಹೋಮ್ ನೋಟಿಸ್‌ಗಳನ್ನು (ಎಸ್‌ಎಚ್‌ಎನ್) ಪೂರೈಸುವುದು ಕಡ್ಡಾಯವಾಗಿದೆ. ಈ ನಿಯಮ ಉಲ್ಲಂಘಿಸುವವರಿಗೆ ೧೦,೦೦೦ ಡಾಲರ್ ದಂಡ ಅಥವಾ ಆರು ತಿಂಗಳವರೆಗೆ ಜೈಲು ಅಥವಾ ಎರಡನ್ನೂ ವಿಧಿಸಲಾಗುತ್ತದೆ. ಸಿಂಗಾಪುರ ಈಗ ಅಲ್ಪಾವಧಿಗೆ ಬರುವ ಪ್ರವಾಸಿಗರನ್ನು ನಿರ್ಬಂಧಿಸಿದೆ. ಸಿಂಗಾಪುರಕ್ಕೆ ಪ್ರವೇಶಿಸಬೇಕಾದರೆ ಇಲ್ಲಿನ ನಿವಾಸಿಗಳು ಸರ್ಕಾರದಿಂದ ತಮ್ಮ ತಮ್ಮ ಆರೋಗ್ಯಕ್ಕೆ ಸಂಬAಧಿಸಿದ ಅರ್ಜಿಯನ್ನು ಸಲ್ಲಿಸಿ ಅನುಮತಿ ಪಡೆದ ಪತ್ರ ಹೊಂದಿರಬೇಕು.

ಹೆಲ್ತ್ ಡಿಕ್ಲರೇಶನ್ ಫಾರ್ಮ್ ಸಲ್ಲಿಸದೆ ಸಿಂಗಾಪುರಕ್ಕೆ ಆಗಮಿಸಿದ್ದ ೭೩ ಮಂದಿ ವರ್ಕ್ ಪಾಸ್ ನಿವಾಸಿಗಳಿಗೆ ಈಗಾಗಲೇ ಸರ್ಕಾರ ಪ್ರವೇಶವನ್ನು ನಿರಾಕರಿಸಿದೆ. ಸ್ಟೇ ಹೋಮ್ ಜೊತೆಗೆ ಗೈರು ಹಾಜರಿಯನ್ನು ಪಾಲಿಸದ ಹಿನ್ನಲೆಯಲ್ಲಿ ೧೬ ಮಂದಿ ವರ್ಕ್ ಪಾಸ್ ನಿವಾಸಿಗಳನ್ನು ತಮ್ಮ ದೇಶಕ್ಕೆ ವಾಪಸ್ ಕಳುಹಿಸಿದೆ. ಇವರಲ್ಲಿ ಕೆಲ ಮಂದಿ ತಮ್ಮ ಕಚೇರಿಗೆ ತೆರಳಿ ಕೆಲಸ ಮಾಡಿದ ಪರಿಣಾಮ ಅಂತಹ ಕಚೇರಿಗಳು ಸರ್ಕಾರದಿಂದ ವರ್ಕ್ ಪಾಸ್ ಸವಲತ್ತುಗಳನ್ನು ಕಳೆದುಕೊಂಡಿದೆ.

ಇತ್ತೀಚೆಗೆ ಓರ್ವ ವ್ಯಕ್ತಿಗೆ ಸರ್ಕಾರ ನೀಡಿದ್ದ ಸ್ಟೇ ಹೋಂ ನೋಟಿಸನ್ನು ಉಲ್ಲಂಘಿಸಿದ ಹಿನ್ನಲೆಯಲ್ಲಿ ತನಗೆ ಇದ್ದ ಪರ್ಮನೆಂಟ್ ರೆಸಿಡೆನ್ಸಿ ಪಾಸ್ ಸ್ಥಾನವನ್ನು ಜೊತೆಗೆ ಸಿಂಗಾಪುರ ದೇಶಕ್ಕೆ ಮತ್ತೆ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದೆ. ಮತ್ತೊಂದು ಘಟನೆಯಲ್ಲಿ, ತಾವು ತೆರಳಿದ್ದ ಪ್ರವಾಸದ ಬಗ್ಗೆ ತಪ್ಪು ಮಾಹಿತಿಯನ್ನು ನೀಡಿದ್ದ ದಂಪತಿ ಈಗ ಕೋರ್ಟ್ ಕಚೇರಿ ಅಲೆದಾಡುವ ಪರಿಸ್ಥಿತಿ ಬಂದೊದಗಿದೆ. ಇದೇ ವೇಳೆ ಸ್ಟೇ-ಹೋಮ್ ನೋಟಿಸ್ ನಿಯಮವನ್ನು ಉಲ್ಲಂಘಿಸಿದ ಸಿಂಗಾಪುರದ ಪ್ರಜೆಯೊಬ್ಬರ ಪಾಸ್‌ಪೋರ್ಟ್ ಅನ್ನೇ ಸರ್ಕಾರ ರದ್ದುಗೊಳಿಸಿದೆ.

ಸಾರ್ವಜನಿಕ ಸ್ಥಳದಲ್ಲಿ ಕುಳಿತುಕೊಳ್ಳಲು ಹಾಗೂ ಸರದಿ ನಿಲ್ಲಲು ೧ ಮೀ ಅಂತರವನ್ನು ಕಾಪಾಡುವಂತೆ ಸಿಂಗಾಪುರ ಸರ್ಕಾರ ಆದೇಶಿಸಿದೆ. ಲಿಫ್ಟ್, ಮಾರ್ಕೆಟ್, ರೆಸ್ಟೋರೆಂಟ್‌ಗಳಲ್ಲಿ ಚಿಕ್ಕ ಚಿಕ್ಕ ಗೆರೆಗಳನ್ನು ಹಾಕಿ ಈ ಮೂಲಕ ಸಾರ್ವಜನಿಕರು ತಮ್ಮ ನಡುವಿನ ಅಂತರವನ್ನು ಕಾಪಾಡಿಕೊಳ್ಳುವಂತೆ ತಿಳಿಸಲಾಗಿದೆ. ಕಾನೂನು ಉಲ್ಲಂಘಿಸಿದವರಿಗೆ ೧೦,೦೦೦ ಡಾಲರ್ ವರೆಗೆ ದಂಡ, ಆರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ಎರಡೂ ಶಿಕ್ಷೆಯನ್ನೂ ಎದುರಿಸಬೇಕಾಗಬಹುದು. ಈ ಬಗ್ಗೆ ಪರಿಶೀಲನೆಗೆ ಇಳಿದಿರುವ ಅಧಿಕಾರಿಗಳು, ೩೦ಕ್ಕೂ ಹೆಚ್ಚು ಕಂಪನಿಗಳು ಸುರಕ್ಷಿತ ದೂರ ಕ್ರಮಗಳನ್ನು ಅನುಸರಿಸುತ್ತಿಲ್ಲ ಎಂಬ ಮಾಹಿತಿಯನ್ನು ಕಲೆ ಹಾಕಿದ್ದು, ತಕ್ಷಣ ಕೆಲಸ ನಿಲ್ಲಿಸುವಂತೆ ಆದೇಶಿಸಿದ್ದಾರೆ.

ಕೊರೊನಾ ವೈರಸ್ ವಿರುದ್ಧ ಹೋರಾಡಲು ಸಿಂಗಾಪುರವು ಕಠಿಣ ನಿರ್ಧಾರ ತೆಗೆದುಕೊಳ್ಳಲು ಕಾರಣವೆಂದರೆ ೨೦೦೨-೨೦೦೩ರಲ್ಲಿ ಸಾರ್ಸ್ ಅಪ್ಪಳಿಸಿದಾಗ ಎದುರಿಸಿದ್ದ ಬಿಕ್ಕಟ್ಟು. ಇದರಲ್ಲಿ ೨೩೮ ಮಂದಿಗೆ ಸೋಂಕು ತಗುಲಿ, ೩೩ ಮಂದಿ ಬಲಿಯಾಗಿದ್ದರು.

ಸಿಂಗಾಪುರದ ಕಾನೂನನ್ನು ಪಾಲಿಸುತ್ತಿರುವ ನಾವು ಕೂಡ ಅನಗತ್ಯವಾಗಿ ಟ್ರೈನ್, ಬಸ್ ಹತ್ತದೆ ಅದಾಗಲೇ ೨-೩ ತಿಂಗಳು ಆಗಿವೆ. ಒಂದು ಸಾಮಾನ್ಯ ಕೆಮ್ಮಿಗೂ ಸುದ್ದಿಯಗೋ ಈ ದಿನಗಳಲ್ಲಿ, ಎಲ್ಲಿ ದಾರಿ ಮಧ್ಯೆ ಇಳಿಸಿ ಬಿಡುತ್ತಾರೋ ಎಂಬ ಭಯದಿಂದ ಲವಂಗ ಚಪ್ಪರಿಸುತ್ತಾ ಟ್ಯಾಕ್ಸಿ ಹತ್ತಿದ್ದೂ ಇದೆ. ಪ್ರಯಾಣಿಕರಿಲ್ಲದೆ ನಷ್ಟ ಎದುರಿಸುತ್ತಿದ್ದ ಆ ಟ್ಯಾಕ್ಸಿ ಚಾಲಕ ಮಾತ್ರ ತನ್ನ ಸಂಕಷ್ಟ ಹೇಳಿದ್ದೇ ಹೇಳಿದ್ದು. ಸ್ಟೇ ಹೋಂ ಅಥವಾ ದಿಗ್ಭಂಧನ ಎದುರಿಸಿದ್ರೆ ಕಡೆ ಪಕ್ಷ ೧೦೦ ಡಾಲರ್ ಆದ್ರೂ ದೊರೆಯುತಿತ್ತು ಅಂದಾಗ ನಮ್ಮಲ್ಲಿದ್ದ ಭಯ ತಮಾಷೆಯಾಗಿ ಬದಲಾಗಿತ್ತು ಎಂದಿದ್ದಾರೆ.

Exit mobile version