ಕೋರ್ಟ್ ಫೀಸ್ ಪಾವತಿಸಲಾಗದೆ ಆಭರಣಗಳನ್ನು ಮಾರಿದ ಅಂಬಾನಿ:

ಲಂಡನ್‌ – ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಲಂಡನ್ ಹೈಕೋರ್ಟ್ ಗೆ ಹಾಜರಾದ ಸಂದರ್ಭದಲ್ಲಿ ಕೋರ್ಟ್ ಶುಲ್ಕವನ್ನು ಪಾವತಿಸಲು ತನ್ನ ಎಲ್ಲಾ ಆಭರಣಗಳಲನ್ನು ಮಾರಾಟ ಮಾಡಿದ್ದೇನೆ, ಹಾಗೂ ನನ್ನ ಖರ್ಚು ವೆಚ್ಚಗಳನ್ನು ನನ್ನಪತ್ನಿ ಮತ್ತು ಕುಟುಂಬ ಭರಿಸುತ್ತಿದೆ ಎಂದು ಹೇಳಿದ್ದಾರೆ.

ಅನಿಲ್ ಅಂಬಾನಿ ಅವರ ಸಾಲ ವಸೂಲಿಯ ಪ್ರಕರಣದ ವಿಚಾರಣೆ ನಡೆಸಲು ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿ ಒಪ್ಪಿಕೊಂಡಿದ್ದು ವಿಚಾರಣೆ ವೇಳೆ ಅವರು ಈ ವಿಚಾರವನ್ನು  ಹೇಳಿಕೊಂಡಿದ್ದಾರೆ. ಅಂಬಾನಿಗೆ ಅವರ ಆಸ್ತಿ, ಖರ್ಚುವೆಚ್ಚ ಒಟ್ಟು ಹೂಡಿಕೆ ಹೊಣೆಗಾರಿಕೆಗಳ ಮೇಲೆ ಸುಮಾರು ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿ ವಿವಿಧ ಪ್ರಶ್ನೆಗಳನ್ನು ಕೇಳಲಾಯಿತು.ಇದನ್ನು ಖಾಸಗಿಯಾಗಿ ನಡೆಸಲು ಕೋರಿದ್ದರೂ ಅನಿಲ್ ಅಂಬಾನಿಯವರ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು.

ಅಂಬಾನಿಯವರು ನಿಯಮ 71ರಡಿಯಲ್ಲಿ ಹಾಜರಾಗಿ ಇಂದು(26-9-2020) ನ್ಯಾಯಾಲಯ ತನಗೆ ವಿಚಾರಣೆ ವೇಳೆ ಅಸಮಾಧಾನವನ್ನು ಉಂಟುಮಾಡುತ್ತದೆ. ಇದನ್ನು ತಪ್ಪಿಸಲು ಮುಜಗರದಿಂದ ಖಾಸಗಿ ವಿಚಾರಣೆಗಾಗಿ ಕೋರಿದ್ದರು. ಎಂದು ನ್ಯಾಯಾಧೀಶರು ವಿಚಾರಣೆ ಸಂದರ್ಭದಲ್ಲಿ ಹೇಳಿದ್ದಾರೆ.

Exit mobile version