ಕೋವೀಡ್ ೧೯ -ಯು.ಕೆಯನ್ನು ಹಿಂದಿಕ್ಕಿ ೪ ನೇ ಸ್ಥಾನಕ್ಕೇರಿದ ಭಾರತ

ನವದೆಹಲಿ: ದೇಶದಲ್ಲಿ ಕೊರೋನಾಸ್ಫೋಟಗೊಂಡಿದ್ದು, ಒಂದೇ ದಿನ ಬರೋಬ್ಬರಿ 10,956 ಮಂದಿಯಲ್ಲಿ ವೈರಸ್ ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2.97 ಲಕ್ಷಕ್ಕೆ ಏರಿಕೆಯಾಗಿದೆ. ಇನ್ನು ಸೋಂಕಿನಿಂದ  8,498 ಮಂದಿ ಮರಣ ಹೊಂದಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶುಕ್ರವಾರ ಮಾಹಿತಿ ನೀಡಿದೆ.  

ಲಾಕ್’ಡೌನ್   ಸಡಿಲಗೊಳಿಸಿದ ಬೆನ್ನಲ್ಲೇ  ದೇಶದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ವಿಶ್ವದಲ್ಲಿ ಕೊರೊನ ಹಾಟ್ಸ್ಪಾಟ್ ಆಗಿ 4ನೇ  ಸ್ಥಾನವನ್ನು ಭಾರತ ಪಡೆದಿದೆ..ಜೊತೆಗೆ ದೇಶದಲ್ಲಿ ಆನ್ಲಾಕ್ ಆಗಿ ಕೆಲವೆ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕೊರೊನಾ ಸೋಂಕು ಪ್ರಕರಣ  ದಾಖಲಾಗುತ್ತಿದೆ. ಜುಲೈಆರಂಭದ ವೇಳೆ 5.2ಲಕ್ಷ ಕೇಸ್ ಹೊಂದಿರುವ  ಭಾರತ ರಷ್ಷ್ಯಾವನ್ನು ಹಿಂದಿಕ್ಕಿ ಭಾರತ 3ನೆ ಸ್ಥಾನಕ್ಕೆ ಏರಿದರು ಆಶ್ಚರ್ಯಪಡಬೆಕಾಗಿಲ್ಲ.

ದೇಶದಲ್ಲಿ ಶಾಲಾ ಮತ್ತು ಕಾಲೇಜು ಬಿಟ್ಟು ಉಳಿದೆಲ್ಲ ಕಚೇರಿ,ಚಟುವಟಿಕೆ,ಸಾರ್ವಜನಿಕ ಸಾರಿಗೆ,ರೈಲು,ವಿಮಾನ ತೆರೆಯಲಾಗಿದೆ .ವರ್ಷದ ಪರೀಕ್ಷೆಗೆ ಇನ್ನು ದಿನ ನಿಗದಿ ಪಡಿಸಳಾಗಿಲ್ಲ . ಆದುದರಿಂದ ವಿದ್ಯಾಥರ್ಥಿಗಳ  ಭವಿಷ್ಯದ ಬಗ್ಗೆ ಸರ್ಕಾರ ಏನು ನಿರ್ಧಾರ ಕೈಗೊಳ್ಳಲಿದೆ ಎಂಬುದು  ಕಾದು ನೋಡಬೇಕಾಗಿದೆ.

Exit mobile version