ಕ್ಷೀಣಿಸುತ್ತಿರುವ ಆರೋಗ್ಯಕ್ಕೆ ತಕ್ಷಣ ಪರಿಹಾರ

ಪ್ರಸ್ತುತ ನಾವು ಧಾವಂತದ ಬದುಕನ್ನು ಬದುಕುತ್ತಿದ್ದೇವೆ. ನಮ್ಮ ಬದುಕು ಎಷ್ಟು ತರಾತುರಿಯಲ್ಲಿ ಧಾವಿಸುತ್ತಿದೆಯೇ ಅದರಂತೆಯೇ ನಮ್ಮ ಆರೋಗ್ಯವು ಆಗಿಬಿಟ್ಟಿದೆ. ನೈಸರ್ಗಿಕ ಔಷಧಿಗಳಿಗಿಂತಲೂ ಇತರೆ ಔಷಧಿಗಳ ಮೇಲೆಯೇ ನಮಗೆ ಅಪಾರ ನಂಬಿಕೆ. ಹಿತ್ತಲ ಗಿಡ ಮದ್ದಲ್ಲ ಅನ್ನೋ ಮಾತು ಇದೇ ವಿಚಾರಕ್ಕೆ ಬಂದಿದೆ ಅನ್ನಿಸುತ್ತಿದೆ.  ನೋವು ಬಂದ ಬಳಿಕ ಮಾತ್ರೆ ನುಂಗಿ ನೋವನ್ನು ಕಡಿಮೆ ಮಾಡುವ ಬದಲು ಆ ನೋವಿನ ಸಂವೇದನೆ ಮೆದುಳಿಗೆ ತಲುಪದಂತೆ ಮಾಡಿ ನೋವಿನಿಂದ ಮುಕ್ತರಾಗುವ ಭ್ರಮೆಯನ್ನೇ ನಾವು ನಿಜವೆಂದು ನಂಬಿಕೊಂಡು ಬಂದಿದ್ದೇವೆ.

ವಾತಾವರಣದಲ್ಲಿ ಬದಲಾವಣೆ ಉಂಟಾದಾಗ ಚಿಕ್ಕದಾಗೊ ಶೀತ,ಕೆಮ್ಮು ಈ ರೀತಿಯ ಸಮಸ್ಯೆಗಳು ಕಂಡು ಬರುವುದು ಸಹಜ. ಹಿಂದೆಯೆಲ್ಲಾ ಈ ರೀತಿಯ ಚಿಕ್ಕ ಶೀತ-ಕೆಮ್ಮು ಬಂದಾಗ ಯಾರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ, ಆದರೆ ಇದೀಗ ಚಿಕ್ಕದಾಗಿ ಅಕ್ಷಿ…. ಬಂದರೂ ಸಾಕು ಜನರು ಭಯ ಬೀಳುತ್ತಾರೆ. ಅದರಲ್ಲೂ ಈಗ ರಾಜ್ಯದ ಹಲವು ಕಡೆ ಮಳೆಯ ಆರ್ಭಟ ಹೆಚ್ಚಾಗಿದೆ, ಮಳೆ ಕಡಿಮೆಯಾದರೂ ಚಳಿ ಶುರುವಾಗುವುದರಿಂದ ನಾವು ನಮ್ಮ ಆಹಾರಕ್ರಮದ ಕಡೆಗೆ ಹೆಚ್ಚಿನ ಗಮನವಹಿಸಬೇಕು. ಮನೆಯ ಕೆಲವೊಂದು ವಸ್ತುಗಳನ್ನು ಉಪಯೋಗಿಸಿ, ಸಣ್ಣ ಪುಟ್ಟ ಕಾಯಿಲೆಗಳನ್ನು ನಿವಾರಿಸಿಕೊಳ್ಳಬಹುದು.

ಜೇನು: ಗಂಟಲು ಕಿರಿಕಿರಿ, ಧ್ವನಿ ಬದಲಾದಂತೆ ಅನಿಸಿದರೆ ಸಿಂಪಲ್ಲಾಗಿ ಜೇನು ಸೇವಿಸಿದರೆ ಸಾಕು ಕಡಿಮೆಯಾಗುತ್ತದೆ.  2017ರಲ್ಲಿ 200 ಜನರು ಒಳಪಡಿಸಿ, ಒಂದು ಅಧ್ಯಯನವನ್ನು ನಡೆಸಲಾಗಿತ್ತು. ಇದರಲ್ಲಿ ಅರ್ಧ ಜನರಿಗೆ ಜೇನು ಜೊತೆಗೆ ಔಷಧಿ ನೀಡಲಾಯಿತು, ಇನ್ನರ್ಧ ಜನರಿಗೆ ಹಾಗೇ ಔಷಧಿ ನೀಡಲಾಯಿತು. ಜೇನು ಜೊತೆ ಔಷಧಿ ಸೇವಿಸಿದವರು ಬೇಗನೆ ಚೇತರಿಸಿಕೊಂಡಿದ್ದು ತಿಳಿದು ಬಂದಿದೆ.

ವೆಜ್ ಸೂಪ್: ತರಕಾರಿಗಳನ್ನು ಹಾಕಿ ಮಾಡುವ ಬಿಸಿ ಬಿಸಿಯಾದ ಸೂಪ್ ಕೂಡ ಗಂಟಲು ಕೆರೆತ ಕಡಿಮೆ ಮಡಲು ಸಹಕಾರಿಯಾಗಿದೆ. ಈರುಳ್ಳಿ, ಬೆಳ್ಳುಳ್ಳಿ, ಸೆಲರಿ, ಕ್ಯಾರೆಟ್, ಬೀನ್ಸ್ ಮುಂತಾದ ತರಕಾರಿಗಳನ್ನು ಬೆರೆಸಿ ತಯಾರಿಸಿದ ಸೂಪನ್ನು ಕುಡಿಯುವುದರಿಂದ ಬಾಯಿಗೆ ರುಚಿಕರವಾಗಿರುವುದರ ಜತೆಗೆ ಗಂಟಲು ಕೆರೆತ ಶಮನಕಾರಿಯಾಗಿದೆ. ದೇಹಕ್ಕೆ ತರಕಾರಿಯಲ್ಲಿರುವ ವಿಟಮಿನ್ ಸಿ ಮತ್ತು ಪೌಷ್ಠಿಕಾಂಶ ದೊರೆಯುವುದರಿಂದ ಬೇಗನೆ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ. ಮೊಟ್ಟೆ: ಗಂಟಲು ಕೆರೆತ ಇರುವಾಗ ಯಾವ ಆಹಾರ ತಿನ್ನಬೇಕೆಂಬುವುದರ ಬಗ್ಗೆ ಎಚ್ಚರವಹಿಸಬೇಕು. ಬೇಯಿಸಿದ ಮೊಟ್ಟೆ ತಿನ್ನುವುದು ಅಥವಾ ಎಗ್‌ಬುರ್ಜಿ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ವಿಟಮಿನ್ ಡಿ, ವಿಟಮಿನ್ ಬಿ, ಅಯೋಡೊಯನ್, ಸೆಲೆನಿಯಮ್, ಚೋಲಿನ್ ಇದ್ದು ಸುಸ್ತು ಕಡಿಮೆ ಮಾಡುತ್ತದೆ. ನೀವು ಬೇಕಾದರೆ ಎಗ್‌ ಬುರ್ಜಿ ಮಾಡಿಯೂ ತಿನ್ನಬಹುದು.

ಅರಿಶಿಣ: ನಮ್ಮ ಭಾರತೀಯ ಅಡುಗೆಯಲ್ಲಿ ಅರಿಶಿಣವನ್ನು ಹೆಚ್ಚಾಗಿ ಬಳಸುತ್ತೇವೆ. ಅರಿಶಿಣ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಗಂಟಲು ಕೆರೆತ ಇದ್ದಾಗ ಅಡುಗೆಯಲ್ಲಿ ಬಳಸುವುದು ಹೊರತು ಪಡಿಸಿ ಅದನ್ನು ಬಿಸಿ ನೀರಿನಲ್ಲಿ ಅಥವಾ ಬಿಸಿ ಬಿಸಿಯಾದ ಹಾಲಿನಲ್ಲಿ ಹಾಕಿ ಕುಡಿಯುವುದರಿಂದ ಗಂಟಲು ಕೆರೆತ ಬೇಗನೆ ಶಮನವಾಗುವುದು. ಏಕೆಂದರೆ ಅರಶಿಣ ದೇಹದಲ್ಲಿನ ಕ್ರಿಮಿ ನಾಶ ಮಾಡುತ್ತದೆ.

 ಶುಂಠಿ: ಶುಂಠಿ ಗಂಟಲು ಕೆರೆತ ಕಡಿಮೆ ಮಾಡುವಲ್ಲಿ ಅತ್ಯಂತ ಪರಿಣಾಮಕಾರಿ ಔಷಧಿಯಾಗಿದೆ. ಶುಂಠಿ ಟೀ ಮಾಡಿ ಕುಡಿಯಬಹುದು, ಶುಂಠಿ ರಸ ತೆಗೆದು ಅದನ್ನು ಜೇನು ಜೊತೆ ಬೆರೆಸಿ ಆಗಾಗ ನೆಕ್ಕುತ್ತಿದ್ದರೆ ಗಂಟಲು ಕೆರೆತ ಬೇಗನೆ ಕಡಿಮೆಯಾಗುವುದು.

ಚಕ್ಕೆ: ಚಕ್ಕೆಯಲ್ಲಿ ಆ್ಯಂಟಿಬ್ಯಾಕ್ಟಿರಿಯಾ ಅಂಶವಿದ್ದು, ಚಕ್ಕೆ ಪುಡಿಯನ್ನು ಆ್ಯಪಲ್ ಸಿಡರ್ ವಿನೆಗರ್ ಅಥವಾ ಓಟ್‌ಮೀಲ್ ಅಥವಾ ಬಿಸಿ ಬಿಸಿ ನೀರಿನಲ್ಲಿ ಹಾಕಿ ಕುಡಿಯಿರಿ. ಇದರಿಂದ ಗಂಟಲು ಕೆರೆತ ಬೇಗನೆ ಕಡಿಮೆಯಾಗುವುದು.

Exit mobile version