ಗೋಹಂತಕರಿಗೆ ಬೆದರಿತಾ ಹಾಸನ ಜಿಲ್ಲಾಡಳಿತ?

ಗೋಮಾಫಿಯಾ ಬಗ್ಗೆ ಹಾಸನ ಜಿಲ್ಲಾಡಳಿತಕ್ಕೆ  ಏಕೆ  ಭಯ? | illegal Cow slaughter house raided in Hassan

ಹಾಸನದಲ್ಲಿ ಪೊಲೀಸರ ಎದುರೇ ನಡೆಯಿತು ಘರ್ಷಣೆ. ಕಾನೂನನ್ನು ಉಲ್ಲಂಘಿಸಿದವರು ಮಾಡಿದ್ರು ಅಟ್ಟಹಾಸ. ನಿಯಮ ಮೀರಿ ಮಾಫಿಯಾದಲ್ಲಿ ತೊಡಗಿದವರನ್ನು ಪ್ರಶ್ನಿಸಿದಾಗ ಭಾರೀ ಗದ್ದಲ ನಡೆಯಿತು. ಗೋಮಾಂಸ ಮಾಫಿಯಾ ಇಡೀ ಹಾಸನ ಜಿಲ್ಲಾಡಳಿತವನ್ನೇ ಬೆದರಿಸಿತು. ಹಾಸನದಲ್ಲಿ ಗೋವಧೆಗೆ ಯಾರ ಬಳಿಯೂ ಲೈಸೆನ್ಸ್ ಇಲ್ಲ. ಗೋಮಾಂಸ ಮಾರಾಟ ಇಲ್ಲಿ ಕಾನೂನು ಬಾಹಿರ.

ಭಯ ಇಲ್ಲದೆ ನಡೀತಿದೆ ಗೋವಧೆ! : ಹಾಸನ ಜಿಲ್ಲೆಯಾದ್ಯಂತ ಗೋಹತ್ಯೆ ಯಾರ ಭಯವೂ ಇಲ್ಲದೆ ನಡೀತಿದೆ. ಅದೂ ನಿತ್ಯ ನೂರಾರು ಗೋವುಗಳ ಹತ್ಯೆ ಮತ್ತು ಗೋ ಮಾಂಸದ ರಫ್ತು ನಡೀತಿದೆ. ಈ ಮಾಹಿತಿ ವಿಜಯಟೈಮ್ಸ್ ತಂಡಕ್ಕೆ ಸಿಕ್ಕಿತು. ಈ ಮಾಹಿತಿಯ ಬೆನ್ನತ್ತಿದ ವಿಜಯಟೈಮ್ಸ್ ಕವರ್‌ಸ್ಟೋರಿ ತಂಡ ಹಾಸನದ ಕಡೆ ಪ್ರಯಾಣ ಬೆಳೆಸಿತು. ನಮ್ಮ ಈ ಸಾಹಸ ಪಯಣಕ್ಕೆ ಗೋ ಧ್ಯಾನ್ ಫೌಂಡೇಷನ್ ಹಾಗೂ ಪ್ರಾಣಿ ದಯಾ ಸಂಘದ ಕಾರ್ಯಕರ್ತರು ಸಾಥ್ ನೀಡಿದ್ರು. ನಮ್ಮ `ಆಪರೇಷನ್ ಗೋಮಾಫಿಯಾ’ವನ್ನು ನಾವು ಹಾಸನ ಜಿಲ್ಲೆಯ ಗೋ ಸಂತೆಯಿAದಲೇ ಪ್ರಾರಂಭಿಸಿದ್ವಿ. ನಗರ ಮಧ್ಯದಲ್ಲಿರೋ ಈ ಸಂತೆಯಲ್ಲಿ ಗೋವುಗಳ ಸಂಗ್ರಹಣೆಯಾಗುತ್ತೆ. ಇದೇ ಸಂತೆಯಿಂದ ಗೋವುಗಳನ್ನು ಕಟುಕರ ಮನೆಗೆ ಕಳುಹಿಸಲಾಗುತ್ತೆ ಇದನ್ನ ಅಲ್ಲಿನ ರೈತರೇ ನಮಗೆ ತಿಳಿಸಿದ್ರು. ಪ್ರತಿ ಸಂತೆ ಸಂದರ್ಭದಲ್ಲಿ ನೂರಾರು ಗೋವುಗಳನ್ನ ಕಟುಕರ ಮನೆಗೆ ಕಳುಹಿಸ್ತಾರೆ. ಈ ವ್ಯವಹಾರ ಹೇಗೆ ನಡೆಯುತ್ತೆ ಅನ್ನೋದನ್ನ ತಿಳಿಯಲು ನಾವು ಸಂತೆಯೊಳಗೆ ನುಗ್ಗಿ ರಹಸ್ಯ ಕಾರ್ಯಾಚರಣೆ ಪ್ರಾರಂಭಿಸಿದ್ವಿ. ನಾವು ಸಂತೆಯಲ್ಲಿ ಓಡಾಡುತ್ತಿರೋದನ್ನು ಗಮನಿಸಿದ ಕೆಲ ಬ್ರೋಕರ್‌ಗಳು ನಮ್ಮನ್ನು ತಡೆದು ನಮಗೆ ಒಂದಿಷ್ಟು ಸೀಕ್ರೆಟ್ಸ್ ಹೇಳಿದ್ರು. ಅದೇನಂದ್ರೆ ಗೋಶಾಲೆಗಳಿಂದಲೇ ಗೋಹತ್ಯೆಯಾಗ್ತಿದೆ ಅಂತ. ಹಾಸನದ ಗೋಶಾಲೆಗಳಲ್ಲೇ ಗೋವುಗಳ ವಧೆ ಆಗ್ತಿರೋದು. ಇಲ್ಲಿ ಬೇರೆಲ್ಲೂ ಗೋವುಗಳನ್ನ ಹತ್ಯೆ ಮಾಡಲಾಗುತ್ತಿಲ್ಲ ಅಂತ ನಮಗೆ ವಿವರಿಸಿದ್ರು. ಇವರ ಮಾತು ಆಲಿಸಿದ ನಾವು ಇದರ ಸತ್ಯಾಸತ್ಯತೆಯನ್ನು ತಿಳಿಯಲು ನಮ್ಮ ಸ್ಟಿಂಗ್ ಆಪರೇಷನ್ ಮುಂದುವರಿಸಿದ್ವಿ.

      ಸಂತೆಯಿಂದ ಗೋವುಗಳನ್ನು ಖರೀದಿಸಿ ಎಲ್ಲಿಗೆ ಸಾಗಿಸಲಾಗುತ್ತೆ ಅನ್ನೋದನ್ನು ತಿಳಿಯಲು ಕೆಲ ಅನುಮಾನಸ್ಪದ ವ್ಯಕ್ತಿಗಳನ್ನು ಫಾಲೋ ಮಾಡಿದ್ವಿ. ಎಳೆ ಕರುಗಳು, ಸಣ್ಣ ವಯಸ್ಸಿನ ಎತ್ತುಗಳು, ಹಾಲು ಕರೆಯೋ ಹಸುಗಳನ್ನು ಸಾಲು ಸಾಲಾಗಿ ಸಾಗಿಸಲಾರಂಭಿಸಿದ್ರು. ಅವರನ್ನ ಚೇಸ್ ಮಾಡಿದ ನಮಗೆ ಆಶ್ಚರ್ಯ ಕಾದಿತ್ತು. ಯಾಕಂದ್ರೆ ಇವೆಲ್ಲವೂ ಹಾಸನದ ಪೆನ್‌ಷನ್ ಮೊಹಲ್ಲಾದ ಗಲ್ಲಿಯೊಳಗೆ ಬಂದು ಸಂಗ್ರಹವಾಗ್ತಿದ್ದವು. ಒಂದೊAದು ಜಾಗದಲ್ಲಿ ಇಪ್ಪತ್ತು ಮೂವತ್ತು ಗೋವುಗಳನ್ನು ಕಟ್ಟಿ ಹಾಕಿದ್ರು. ಈ ಗೋವುಗಳನ್ನ ಕಟ್ಟಿರೋ ಜಾಗದ ಮುಂದೆಯೇ ಇದೆ ಗೋವುಗಳನ್ನು ಕೊಲ್ಲೋ ಷೆಡ್‌ಗಳು. ಷೆಡ್‌ಗಳ ಒಳಗೂ ಗೋವುಗಳನ್ನ ಕಟ್ಟಲಾಗಿದೆ. ಇಷ್ಟು ಸಾಕ್ಷಿಗಳನ್ನು ಸಂಗ್ರಹಿಸಿದ ನಾವು ನೇರವಾಗಿ ಹಾಸನ ವರಿಷ್ಠಾಧಿಕಾರಿ ಶ್ರೀನಿವಾಸ ಗೌಡ ಅವರ ಬಳಿ ತೆರಳಿ ದೂರು ಕೊಟ್ಟೆವು. ಅವರು ತಕ್ಷಣ ಕ್ರಮ ಕೈಗೊಳ್ಳುವ ಭರವಸೆಯನ್ನೂ ಕೊಟ್ರು. ಕಾನೂನು ಉಲ್ಲಂಘಿಸಿ ಗೋಹತ್ಯೆ ಮಾಡುತ್ತಿರೋ ಅಂಗಡಿಗಳ ಮೇಲೆ ದಾಳಿ ಮಾಡಲು ಅಡಿಷನ್ ಎಸ್‌ಪಿ ನಂದಿನಿ ಅವರ ನೇತೃತ್ವದ ತಂಡವನ್ನು ರಚಿಸಿದ್ರು. ತಕ್ಷಣ ಕಾರ್ಯಪ್ರವೃತ್ತರಾದ ನಂದಿನಿ ಅವರು ನಗರ ಸಭೆ ಆಯುಕ್ತ ಕೃಷ್ಣಮೂರ್ತಿಯವರ ತಂಡಕ್ಕೂ ಮಾಹಿತಿ ಕೊಟ್ಟು ಕಾರ್ಯಾಚರಣೆ ಪ್ರಾರಂಭಿಸಿದ್ರು.

      ಮಾಹಿತಿ ಸೋರಿಕೆ, ಗೋವುಗಳು ಚಲ್ಲಾಪಿಲ್ಲಿ: ಪೆನ್‌ಷನ್ ಮೊಹಲ್ಲಾಕ್ಕೆ ಪೊಲೀಸರು ದಾಳಿ ಮಾಡ್ತಾರೆ ಅನ್ನೋ ಮಾಹಿತಿ ಸೋರಿಕೆಯಾದ ತಕ್ಷಣ, ಕೊಲ್ಲಲು ಕಟ್ಟಿ ಹಾಕಿದ್ದ ಗೋವುಗಳನ್ನೆಲ್ಲಾ ಕಂಡ ಕಂಡಲ್ಲಿ ಬಿಟ್ರು. ಕೊಲ್ಲುವ ಜಾಗವನ್ನೆಲ್ಲಾ ಕ್ಲೀನ್ ಮಾಡಿದ್ರು. ಮಾಂಸವನ್ನೆಲ್ಲಾ ಚರಂಡಿಗೆ ಬೀಸಾಡಿ ಬೀಗ ಜಡಿದೇ ಬಿಟ್ರು. ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಒಂದೆರೆಡು ಕರುಗಳು ಹಸುಗಳು ಕಾಣ ಸಿಕ್ಕವು. ಕೆಲವು ಷೆಡ್‌ಗಳ ಒಳಗೆ ಮಾಂಸದAಧೆಗೆ ಒಂದಿಷ್ಟು ಸಾಕ್ಷಿಗಳು ಸಿಕ್ಕವು. ಆದ್ರೂ ಇಲ್ಲಿ ಗೋಹತ್ಯೆ ನಡೆಯುವುದೇ ಇಲ್ಲ. ಇಲ್ಲಿ ಕಟ್ಟಿ ಹಾಕಿರುವುದೆಲ್ಲಾ ಸಾಕು ದನಕರುಗಳು ಅಂತ ವಾದ ಮಾಡಲು ಪ್ರಾರಂಭಿಸಿದ್ರು ಅಲ್ಲಿನ ನಿವಾಸಿಗಳು. ಆದ್ರೂ ನಾವು ಒಂದಿಷ್ಟು ಸಾಹಸ ಮಾಡಿ ಇಲ್ಲಿ ಗೋಹತ್ಯೆ ನಡೀತಿತ್ತು ಅನ್ನೋದಕ್ಕೆ ಸಾಕ್ಷಿಗಳನ್ನ ಸಂಗ್ರಹಿಸಿದ್ವಿ.

      ರಕ್ಷಿಸಿದ ಗೋವುಗಳನ್ನೇ ಕಸಿದುಕೊಂಡ್ರು : ನಗರಸಭಾ ಸಿಬ್ಬಂದಿ ಚಲ್ಲಾಪಿಲ್ಲಿಯಾಗಿ ಓಡುತ್ತಿದ್ದ ಕರುಗಳನ್ನು ಹಸುಗಳನ್ನು ತಂದು ಸಾಗಿಸಲಾರಂಭಿಸಿದ್ರು. ಆಗ ಅಲ್ಲಿ ಸೇರಿದ್ದ ಮಂದಿ ಬಲವಂತವಾಗಿ ಕಿತ್ತುಕೊಳ್ಳಲಾರಂಭಿಸಿ ಅದನ್ನ ಬೇರೆಡೆ ಸಾಗಿಸಿದ್ರು. ಇದನ್ನೆಲ್ಲಾ ಪೊಲೀಸರು ಮೂಕ ಪ್ರೇಕ್ಷಕರಂತೆ ನೋಡುತ್ತಾ ನಿಂತ್ರು. ಆಗ ಹೆಚ್ಚು ಹೆಚ್ಚು ಜನ ಸೇರಿದ್ರು. ಗೋಸಂತೆಯಲ್ಲಿ ಗೋರಕ್ಷಣೆಯ ಭಾಷಣ ಬಿಗಿದ ಬಾಬು ಗಲಭೆಗೆ ಪ್ರಚೋದನೆ ಕೊಡಲು ಪ್ರಾರಂಭಿಸಿದ. ಜನ ಸೇರಿಸಿ ನಮ್ಮ ಮೇಲೆ, ಪೊಲೀಸರ ಮೇಲೆ ಹಲ್ಲೆಗೆ ಮುಂದಾದ್ರು. ನಾವು ರಕ್ಷಣೆಗಾಗಿ ಮೀಸಲು ಪೊಲೀಸ್ ಪಡೆ ಜೀಪಿನೊಳಗೆ ಹೋಗಿ ಕೂತ್ರೆ, ಅದರ ಮೇಲೂ ದಾಳಿ ನಡೆಸಿದ್ರು. ಪೆನ್‌ಷನ್ ಮೊಹಲ್ಲಾದಲ್ಲಿ ಗಲಭೆಯ ವಾತಾವರಣ ಸೃಷ್ಟಿಯಾಯಿತು. ಕೆಲ ಪೊಲೀಸರು ಅಧಿಕಾರ ಇದ್ರೂ ಅದನ್ನು ಬಳಸದೆ ಕಾನೂನು ಉಲ್ಲಂಘಿಸಿದವರ ಪರವಾಗಿಯೇ ಮಾತನಾಡಲಾರಂಭಿಸಿದ್ರು. ನಗರ ಸಭಾ ಆಯುಕ್ತರಾದ ಕೃಷ್ಣಮೂರ್ತಿಯವರು ಗೋಮಾಫಿಯಾದವರ ಮುಂದೆ ಅಸಹಾಯಕರಾಗಿ ನಿಂತಿರೋದನ್ನು ಕಂಡು ಸಾರ್ವಜನಿಕರೇ ಅಚ್ಚರಿಪಟ್ರು. ನೂರಾರು ಗೋವುಗಳ ಪೈಕಿ ಕೇವರ ಹತ್ತಿಪ್ಪತ್ತನ್ನಷ್ಟೇ ರಕ್ಷಿಸಲು ನಮ್ಮ ಹಾಸನ ಪೊಲೀಸರು ಶಕ್ತರಾದ್ರು. ಉಳಿದೆಲ್ಲವೂ ಮತ್ತೆ ಕಟುಕರ ಪಾಲಾಯಿತು. ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

      ಗೃಹಸಚಿವರಿಂದ ಕ್ರಮದ ಭರವಸೆ : ಹಾಸನದಲ್ಲಿ ನಡೆದ ಘಟನೆಯ ಎಲ್ಲಾ ವಿವರವನ್ನು ಗೃಹಸಚಿವರಾದ ಬಸವರಾಜ್ ಬೊಮ್ಮಾಯಿಯವರಿಗೆ ನಾವು ತಿಳಿಸಿದೆವು. ಸಾಕ್ಷಿ ಸಮೇತವಾಗಿ ವಿವರಿಸಿದೆವು. ಅವರು ಐಜಿಯವರೊಂದಿಗೆ ಮಾತನಾಡಿ ಕ್ರಮಕೈಗೊಳ್ಳುವ ಭರವಸೆಯನ್ನು ವಿಜಯಟೈಮ್ಸ್ಗೆ ನೀಡಿದ್ರು. ಗೃಹ ಸಚಿವರ ಮಾತಿನ ಮೇಲೆ ನಂಬಿಕೆ ಇದೆ. ಗೋಮಾಫಿಯಾದ ವಿರುದ್ಧ ಸರ್ಕಾರ ಕಠಿಣ ಕ್ರಮಕೈಗೊಳ್ಳುತ್ತೆ. ಪೊಲೀಸರಿಗೆ, ಜಿಲ್ಲಾಡಳಿತಕ್ಕೆ ಈ ಮಾಫಿಯಾ ಎದುರಿಸೋ ಶಕ್ತಿ ಕೊಡುತ್ತೆ ಅನ್ನೋ ಆಶಯ ನಮ್ಮದು.

Exit mobile version